Yashasvi jaiswal Half Century: ಇಂಡಿಯನ್ ಪ್ರೀಮಿಯರ್ ಲೀಗ್’ನ 11ನೇ ಪಂದ್ಯ ಇಂದು ಗುವಾಹಟಿಯ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿವೆ. ರಾಜಸ್ಥಾನ ಮತ್ತು ಡೆಲ್ಲಿ ನಡುವೆ ನಡೆಯುತ್ತಿರುವ ಈ ಪಂದ್ಯದಲ್ಲಿ ಉಭಯ ತಂಡಗಳಿಗೆ ಗೆಲುವು ಅತೀ ಮುಖ್ಯವಾಗಿದೆ. ಡೆಲ್ಲಿಗೆ ಮೊದಲ ಗೆಲುವಿನ ಅಗತ್ಯವಿದ್ದರೆ, ರಾಜಸ್ಥಾನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಲುಪಲು ಈ ಗೆಲುವು ಪ್ರಮುಖವೆನಿಸಿದೆ. ಈ ಅನುಕ್ರಮದಲ್ಲಿ, ರಾಜಸ್ಥಾನವು ಬಯಸಿದ ರೀತಿಯ ಆರಂಭವನ್ನು ಪಡೆಯುವ ಮೂಲಕ ಅದ್ಭುತ ಆರಂಭವನ್ನು ಮಾಡಿದೆ. ಈ ತಂಡದ ಆಟಗಾರನೊಬ್ಬನ ಬಿರುಸಿನ ಆಟವಾಡಿದ್ದು, ಮೊದಲ ಓವರ್’ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!
ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇನ್ನು ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರಂಭಿಸಿದ ರೀತಿಯನ್ನು ಐಪಿಎಲ್ 2023 ರ ವೇಗದ ಆರಂಭ ಎಂದು ಕರೆಯಬಹುದು. ಖಲೀಲ್ ಅಹ್ಮದ್ ಅವರ ಮೊದಲ ಓವರ್’ನಲ್ಲಿಯೇ ಯಶಸ್ವಿ ಬ್ಯಾಟಿಂಗ್ ಮಾಡುವಾಗ 20 ರನ್ ಗಳಿಸಿದ್ದಾರೆ.
ಖಲೀಲ್ ಅಹ್ಮದ್ ಅವರ ಓವರ್’ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಮಿಡ್-ವಿಕೆಟ್ ಕಡೆಗೆ ಅದ್ಭುತ ಬೌಂಡರಿ ಬಾರಿಸಿದರು. ಜೈಸ್ವಾಲ್ ಐಪಿಎಲ್ 2023 ರ ಮೊದಲ ಓವರ್‌ನಲ್ಲಿ ಅದ್ಭುತ ಬೌಂಡರಿಗಳನ್ನು ಬಾರಿಸುವ ಮೂಲಕ ಹೆಚ್ಚಿನ ರನ್ ಗಳಿಸಿದರು. ಒಟ್ಟಾರೆ 25 ಎಸೆತಗಳಲ್ಲಿ 50 ರನ್ ಕಲೆ ಹಾಕಿದ್ದಾರೆ. ಆದರೆ 31 ಎಸೆತಗಳಲ್ಲಿ 60 ರನ್ ಗಳಿಸಿದ ಅವರು ಬಳಿಕ ಪೆವಿಲಿಯನ್ ಸೇರಿದರು.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ರಿಲೀ ರೋಸ್ಸೌ, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅನ್ರಿಚ್ ನಾರ್ಕಿಯಾ, ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಮತ್ತು ಮುಖೇಶ್ ಕುಮಾರ್
ಇದನ್ನೂ ಓದಿ: Good Signs: ಈ ಶುಭ ಸಂಕೇತಗಳು ಶನಿದೇವನ ಕೃಪೆಯಿದೆ ಎಂಬುದರ ಸೂಚಕ: ದಿಢೀರ್ ಧನಪ್ರಾಪ್ತಿಗೈಯುವನು ಛಾಯಾಪುತ್ರ!
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ ಮತ್ತು ಯುಜ್ವೇಂದ್ರ ಚಾಹಲ್.
What a start for RR#CRICKET #IPL #IPL23 #RRvsDC pic.twitter.com/JV4DTmQbXc
— Cricket Addictor (@AddictorCricket) April 8, 2023
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.