DC vs LSG: ಈ ಚಾಂಪಿಯನ್ ಆಟಗಾರನ ವೃತ್ತಿಜೀವನ ಅಂತ್ಯ! ಪ್ಲೇಯಿಂಗ್-11ರಲ್ಲಿಯೂ ಸಿಕ್ಕಿಲ್ಲ ಅವಕಾಶ

DC vs LSG: ಈ ಬಾರಿ ಟೀಂ ಇಂಡಿಯಾ ಮತ್ತು ಐಪಿಎಲ್‌’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾಗೆ ಲಕ್ನೋ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ 11 ರಲ್ಲಿ ಸ್ಥಾನ ನೀಡಲಾಗಿಲ್ಲ. ಈ ಬಳಿಕ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇಶಾಂತ್ ಶರ್ಮಾ 2021 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ.

Written by - Bhavishya Shetty | Last Updated : Apr 1, 2023, 09:57 PM IST
    • ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾಗೆ ಪ್ಲೇಯಿಂಗ್ 11 ರಲ್ಲಿ ಸ್ಥಾನ ನೀಡಲಾಗಿಲ್ಲ
    • ಈ ಬಳಿಕ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳು ಎದ್ದಿವೆ.
    • ಇಶಾಂತ್ ಶರ್ಮಾ 2021 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ
DC vs LSG: ಈ ಚಾಂಪಿಯನ್ ಆಟಗಾರನ ವೃತ್ತಿಜೀವನ ಅಂತ್ಯ! ಪ್ಲೇಯಿಂಗ್-11ರಲ್ಲಿಯೂ ಸಿಕ್ಕಿಲ್ಲ ಅವಕಾಶ  title=
Delhi Capitals

DC vs LSG: IPL 2023ರ ಮೂರನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದು, ಸದ್ಯ ಬ್ಯಾಟಿಂಗ್ ಮಾಡಿ, ಎದುರಾಳಿಗೆ 194 ರನ್’ಗಳ ಗುರಿಯನ್ನು ನೀಡಿದೆ. ಈ ಪಂದ್ಯ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಯಿಂಗ್ XI ನಲ್ಲಿ ದೊಡ್ಡ ಮ್ಯಾಚ್ ವಿನ್ನರ್ ಆಟಗಾರನಿಗೆ ಸ್ಥಾನ ನೀಡಿಲ್ಲ. ಈ ಮೂಲಕ ಈ ಆಟಗಾರನ ವೃತ್ತಿಜೀವನವು ಬಹುತೇಕ ಅಂತ್ಯಗೊಂಡಂತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: MS Dhoniಗೆ ಗಂಭೀರ ಗಾಯ! CSK ಕೋಚ್ ನೀಡಿದ ಹೆಲ್ತ್ ಅಪ್ಡೇಟ್’ನಲ್ಲಿದೆ ಈ ಮಹತ್ವದ ಮಾಹಿತಿ

ಈ ಬಾರಿ ಟೀಂ ಇಂಡಿಯಾ ಮತ್ತು ಐಪಿಎಲ್‌’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾಗೆ ಲಕ್ನೋ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ 11 ರಲ್ಲಿ ಸ್ಥಾನ ನೀಡಲಾಗಿಲ್ಲ. ಈ ಬಳಿಕ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇಶಾಂತ್ ಶರ್ಮಾ 2021 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಇಶಾಂತ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ.

ಐಪಿಎಲ್ ವೃತ್ತಿಜೀವನದ ಅಂಕಿಅಂಶಗಳು ಹೀಗಿವೆ:

ಇಶಾಂತ್ ಐಪಿಎಲ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಇದುವರೆಗೆ 93 ಪಂದ್ಯಗಳನ್ನು ಆಡಿದ್ದು 72 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಟೀಮ್ ಇಂಡಿಯಾದಲ್ಲಿನ ಅಂಕಿಅಂಶಗಳನ್ನು ನೋಡಿದರೆ, ಭಾರತಕ್ಕಾಗಿ 105 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಅವರು 311 ವಿಕೆಟ್ಗಳನ್ನು ಪಡೆದಿದ್ದಾರೆ, ಏಕದಿನದಲ್ಲಿ, 80 ಪಂದ್ಯಗಳನ್ನು ಆಡಿ, 115 ವಿಕೆಟ್ ಪಡೆದರೆ, ಟಿ20ಯಲ್ಲಿ 14 ಪಂದ್ಯಗಳನ್ನಾಡಿರುವ ಇಶಾಂತ್ 8 ವಿಕೆಟ್ ಪಡೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್-11: ಕೆಎಲ್ ರಾಹುಲ್ (ನಾ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿ.ಕೀ), ಆಯುಷ್ ಬಡೋನಿ, ಮಾರ್ಕ್ ವುಡ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್, ಅವೇಶ್ ಖಾನ್

ಇದನ್ನೂ ಓದಿ: IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ?

ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇಯಿಂಗ್-11: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೆ ರುಸ್ಸೋ, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News