Team India: ಟೀಂ ಇಂಡಿಯಾದ ಈ ಇಬ್ಬರು ಖಿಲಾಡಿಗಳ ಕ್ರಿಕೆಟ್ ಜೀವನ ಅಂತ್ಯ! IPLನಿಂದಲೂ ಶೀಘ್ರವೇ ನಿವೃತ್ತಿ

Team India: ಇಬ್ಬರೂ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ನಿರಾಸೆಗೊಳಿಸಿದ್ದಾರೆ. ಹೀಗಿರುವಾಗ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಐಪಿಎಲ್‌ ನಲ್ಲಿ ಫ್ಲಾಪ್ ಪ್ರದರ್ಶನದ ನಂತರ ಈ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಎಂದನಿಸುತ್ತದೆ

Written by - Bhavishya Shetty | Last Updated : Apr 30, 2023, 09:54 AM IST
    • ಈ ಪಂದ್ಯದಲ್ಲಿ ಇಬ್ಬರೂ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ನಿರಾಸೆಗೊಳಿಸಿದ್ದಾರೆ
    • ಡೆಲ್ಲಿ ಕ್ಯಾಪಿಟಲ್ಸ್‌ ಗಾಗಿ ಆಡುತ್ತಿರುವ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ವೃತ್ತಿಜೀವನವು ಬಹುತೇಕ ಮುಗಿದಿದೆ.
    • ಹೈದರಾಬಾದ್ ಪರ ಆಡುತ್ತಿರುವ ಮಯಾಂಕ್ ಅಗರ್ವಾಲ್ ತಮ್ಮ ಬ್ಯಾಟಿಂಗ್‌ ನಿಂದ ಎಲ್ಲರನ್ನೂ ನಿರಾಸೆಗೊಳಿಸಿದ್ದಾರೆ
Team India: ಟೀಂ ಇಂಡಿಯಾದ ಈ ಇಬ್ಬರು ಖಿಲಾಡಿಗಳ ಕ್ರಿಕೆಟ್ ಜೀವನ ಅಂತ್ಯ! IPLನಿಂದಲೂ ಶೀಘ್ರವೇ ನಿವೃತ್ತಿ title=
IPL 2023

Team India: ಐಪಿಎಲ್ 2023 ರ 40 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಣಾಹಣಿ ನಡೆದಿದೆ. ಈ ಸೀಸನ್ ನಲ್ಲಿ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋತ ಇಬ್ಬರು ಆಟಗಾರರ ಕ್ರಿಕೆಟ್ ಜೀವನ ಕೊನೆಯಾಗುವ ಹಂತಕ್ಕೆ ಬಂದು ನಿಂತಿದೆ.

ಈ ಪಂದ್ಯದಲ್ಲಿ ಇಬ್ಬರೂ ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳನ್ನು ನಿರಾಸೆಗೊಳಿಸಿದ್ದಾರೆ. ಹೀಗಿರುವಾಗ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಐಪಿಎಲ್‌ ನಲ್ಲಿ ಫ್ಲಾಪ್ ಪ್ರದರ್ಶನದ ನಂತರ ಈ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ ಎಂದನಿಸುತ್ತದೆ.

ಇದನ್ನೂ ಓದಿ: Rohit Sharma: IPLನಿಂದ ಅರ್ಧಕ್ಕೆ ಹೊರ ಹೋಗುತ್ತಾರಾ ರೋಹಿತ್ ಶರ್ಮಾ! ಕೋಚ್ ಹೇಳಿದ್ದೇನು ಗೊತ್ತಾ?

ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗಾಗಿ ಆಡುತ್ತಿರುವ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ವೃತ್ತಿಜೀವನವು ಬಹುತೇಕ ಮುಗಿದಿದೆ. ಕಳೆದ ಹಲವು ವರ್ಷಗಳಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಹೀಗಿರುವಾಗ ಈ ಋತುವಿನಲ್ಲಿ ಅವರ ನಿರಂತರ ಫ್ಲಾಪ್ ಪರ್ಫಾರ್ಮೆನ್ಸ್ ಕೂಡ ಟೀಮ್ ಮ್ಯಾನೇಜ್ ಮೆಂಟ್ ಗೆ ದೊಡ್ಡ ತೊಡಕಾಗಿದೆ. ಮನೀಶ್ ಪಾಂಡೆ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ 132 ರನ್ ಗಳಿಸಿದ್ದಾರೆ. ಸರಾಸರಿ 22.00 ಇದ್ದು, ಗರಿಷ್ಠ ಸ್ಕೋರ್ 50 ರನ್. ಆಡಿದ ಈ ಪಂದ್ಯದಲ್ಲಿ ಅವರು ಕೇವಲ 1 ರನ್ ಗಳಿಸಿ ಔಟಾಗಿದ್ದಾರೆ.

ಇನ್ನೊಂದೆಡೆ ಇದೇ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಮಯಾಂಕ್ ಅಗರ್ವಾಲ್ ಈ ಋತುವಿನಲ್ಲಿ ತಮ್ಮ ಬ್ಯಾಟಿಂಗ್‌ ನಿಂದ ಎಲ್ಲರನ್ನೂ ನಿರಾಸೆಗೊಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 5 ರನ್. ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 169 ರನ್‌ ಗಳು ಅವರ ಬ್ಯಾಟ್‌ನಿಂದ ಹೊರಬಂದಿವೆ. ಸರಾಸರಿ 21.13 ರನ್ ಆಗಿದ್ದು, ಗರಿಷ್ಠ ಸ್ಕೋರ್ 49 ರನ್. ಮಯಾಂಕ್ ಬಹಳ ಸಮಯದಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ, ಇದೀಗ ಮತ್ತೆ ಈ ಫ್ಲಾಪ್ ಪ್ರದರ್ಶನದೊಂದಿಗೆ ಅವರು ತಂಡಕ್ಕೆ ಮರಳಲು ಸಾಧ್ಯವಾಗುವುದು ಭಾರೀ ಕಷ್ಟ ಎಂದನಿಸುತ್ತದೆ.

ಇದನ್ನೂ ಓದಿ: ಸುಡಾನ್ ಸಮರದಿಂದ ಪೆಪ್ಸಿ-ಕೋಕ್ ಪೂರೈಕೆಗೆ ಅಡಚಣೆ; ನಿತ್ಯೋಪಯೋಗಿ ಉತ್ಪನ್ನಗಳಲ್ಲೂ ಕೊರತೆ!

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡ ನಿಗದಿತ 20 ಓವರ್‌ ಗಳಲ್ಲಿ 6 ವಿಕೆಟ್‌ ಗೆ 197 ರನ್ ಗಳಿಸಿತು. ಇದಾದ ಬಳಿಕ ಡೆಲ್ಲಿ ತಂಡ 6 ವಿಕೆಟ್‌ ಗೆ 188 ರನ್ ಗಳಿಸಿ 9 ರನ್‌ ಗಳಿಂದ ಸೋಲನುಭವಿಸಿತು. ಪ್ರಸಕ್ತ ಋತುವಿನಲ್ಲಿ 8 ಪಂದ್ಯಗಳಲ್ಲಿ ದೆಹಲಿಯ ಆರನೇ ಸೋಲು ಇದಾಗಿದೆ. ಮತ್ತೊಂದೆಡೆ ಹೈದರಾಬಾದ್ 8 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದ್ದು, 6 ಅಂಕಗಳನ್ನು ಹೊಂದಿದೆ. 10 ತಂಡಗಳ ಪಟ್ಟಿಯಲ್ಲಿ ಡೆಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ ಎರಡು ಸ್ಥಾನ ಮೇಲಿದ್ದು 8ನೇ ಸ್ಥಾನದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News