IPLನ ಈ ಪ್ರಸಿದ್ಧ ತಂಡಕ್ಕೆ ದ್ರೋಹ ಎಸಗಿದ ಆಟಗಾರ! ಟೀಂನಿಂದ ಹೊರದಬ್ಬಲು ಫ್ಯಾನ್ಸ್ ಒತ್ತಡ

Rajasthan Royals: ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೋಸ್ ಬಟ್ಲರ್. ಈತ ತಮ್ಮದೇ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾನೆ. ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ಕೋಪಗೊಳ್ಳುವಂತಹ ಹೇಳಿಕೆಯನ್ನು ಆತ ನೀಡಿದ್ದಾನೆ ಎನ್ನಲಾಗಿದೆ.

Written by - Bhavishya Shetty | Last Updated : Apr 20, 2023, 05:59 PM IST
    • ಜೋಸ್ ಬಟ್ಲರ್ ತಮ್ಮದೇ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾನೆ.
    • ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ಕೋಪಗೊಳ್ಳುವಂತಹ ಹೇಳಿಕೆಯನ್ನು ಆತ ನೀಡಿದ್ದಾನೆ ಎನ್ನಲಾಗಿದೆ.
    • ಜೋಸ್ ಬಟ್ಲರ್ ಐಪಿಎಲ್‌’ನ ಎರಡು ಸೀಸನ್‌’ಗಳಲ್ಲಿ ಮುಂಬೈ ಇಂಡಿಯನ್ಸ್‌’ನ ಭಾಗವಾಗಿದ್ದರು.
IPLನ ಈ ಪ್ರಸಿದ್ಧ ತಂಡಕ್ಕೆ ದ್ರೋಹ ಎಸಗಿದ ಆಟಗಾರ! ಟೀಂನಿಂದ ಹೊರದಬ್ಬಲು ಫ್ಯಾನ್ಸ್ ಒತ್ತಡ title=
Rajasthan Royals

Rajasthan Royals: ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್‌’ನ 16 ನೇ ಸೀಸನ್ ಪ್ರಸ್ತುತ ನಡೆಯುತ್ತಿದೆ. ಅನೇಕ ಆಟಗಾರರು ಅದಾಗಲೇ ತಮ್ಮ ಕರಾಮತ್ತನ್ನು ಪ್ರದರ್ಶಿಸಿ, ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಆದರೆ ಈ ಎಲ್ಲದರ ನಡುವೆ ಓರ್ವ ಆಟಗಾರ ತನ್ನದೇ ತಂಡಕ್ಕೆ ದ್ರೋಹ ಎಸಗಿದ್ದು, ಈತನ ಬಗ್ಗೆ ಫ್ಯಾನ್ಸ್ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: MI vs SRH: ಪ್ರಾಣಾಪಾಯದಿಂದ ರೋಹಿತ್ ಜಸ್ಟ್ ಮಿಸ್! ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ

ನಾವು ಹೇಳುತ್ತಿರುವ ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ, ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೋಸ್ ಬಟ್ಲರ್. ಈತ ತಮ್ಮದೇ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾನೆ. ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ಕೋಪಗೊಳ್ಳುವಂತಹ ಹೇಳಿಕೆಯನ್ನು ಆತ ನೀಡಿದ್ದಾನೆ ಎನ್ನಲಾಗಿದೆ.

ಜೋಸ್ ಬಟ್ಲರ್ ಹೇಳಿದ್ದೇನು?

ಜೋಸ್ ಬಟ್ಲರ್ ಹ್ಯೂಮನ್ಸ್ ಆಫ್ ಬಾಂಬೆ ಜೊತೆ ಮಾತನಾಡುವಾಗ, 'ಜೈಪುರ ಎಂದರೆ ನನಗೆ ಇಷ್ಟ, ಆದರೆ ನನ್ನ ಮೊದಲ ತಂಡ ಮುಂಬೈ. ಹಾಗಾಗಿ ಆ ತಂಡದ ಬಗ್ಗೆ ಕೊಂಚ ವಿಭಿನ್ನ ಪ್ರೀತಿಯಿದೆ. ಎರಡು ಸೀಸನ್’ಗಳಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಆಡಿದ್ದೆ. ಭಾರತದಲ್ಲಿ ನನ್ನ ನೆಚ್ಚಿನ ಕ್ರೀಡಾಂಗಣ ವಾಂಖೆಡೆ. ನಂತರ ಜೈಪುರ” ಎಂದು ಹೇಳಿದ್ದಾರೆ. ಆದರೆ ತನ್ನ ನೆಚ್ಚಿನ ಕ್ರೀಡಾಂಗಣ ಜೈಪುರ ಎಂದು ಹೇಳುತ್ತಾರೆ ಅಂತಾ ನಿರೀಕ್ಷಿಸುತ್ತಿದ್ದ ಅನೇಕ ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಈ ನಿರೀಕ್ಷೆಗೆ ಕಾರಣ, ಬಟ್ಲರ್ ರಾಜಸ್ಥಾನ ರಾಯಲ್ಸ್‌ ತಂಡದ ಭಾಗವಾಗಿದ್ದಾರೆ. ಜೈಪುರ ಈ ತಂಡದ ತವರು ಮೈದಾನವಾಗಿದೆ.

ಇದನ್ನೂ ಓದಿ: IPL 2023: ವಿಶ್ವದ ಈ ದಿಗ್ಗಜ ಆಟಗಾರನಿಗೆ ಅವಕಾಶ ಕೊಡುತ್ತಿಲ್ಲ ಕೆಎಲ್ ರಾಹುಲ್! ಕೊನೆಗೊಳಿಸುತ್ತಾರಾ ವೃತ್ತಿಜೀವನ?

ಜೋಸ್ ಬಟ್ಲರ್ ಐಪಿಎಲ್‌’ನ ಎರಡು ಸೀಸನ್‌’ಗಳಲ್ಲಿ ಮುಂಬೈ ಇಂಡಿಯನ್ಸ್‌’ನ ಭಾಗವಾಗಿದ್ದರು. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದಾರೆ. 2016 ರಲ್ಲಿ ತನ್ನ ಐಪಿಎಲ್ ಪ್ರಯಾಣ ಪ್ರಾರಂಭವಾದಾಗಿನಿಂದ ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂ ಯಾವಾಗಲೂ ತನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಬಟ್ಲರ್ ಹೇಳಿದರು. ಬಟ್ಲರ್ ಪ್ರಸಕ್ತ ಸೀಸನ್’ನಲ್ಲಿ 6 ಪಂದ್ಯಗಳಲ್ಲಿ 3 ಅರ್ಧ ಶತಕ ಸೇರಿದಂತೆ 244 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News