IPLನಲ್ಲಿ ಎರಡು ಮಹಾ ದಾಖಲೆ ಬರೆದ ಟೀಂ ಇಂಡಿಯಾದ 23 ವರ್ಷದ ಈ ಆರಂಭಿಕ ಆಟಗಾರ!

Shubman Gill Record: ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 31 ಎಸೆತಗಳಲ್ಲಿ 39 ರನ್‌’ಗಳ ಇನಿಂಗ್ಸ್‌ ಆಡಿದ್ದಾರೆ. ಈ ಇನ್ನಿಂಗ್ಸ್‌ನೊಂದಿಗೆ ಅವರು ಐಪಿಎಲ್‌’ನಲ್ಲಿ 2000 ರನ್ ಪೂರೈಸಿದ್ದಾರೆ. ಇದೀಗ ರಿಷಬ್ ಪಂತ್ ನಂತರ ಐಪಿಎಲ್‌’ನಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

Written by - Bhavishya Shetty | Last Updated : Apr 9, 2023, 06:39 PM IST
    • 12 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ
    • ಟೀಂ ಇಂಡಿಯಾದ 23 ವರ್ಷದ ಈ ಆರಂಭಿಕ ಆಟಗಾರ ಎರಡು ಮಹಾದಾಖಲೆಗಳನ್ನು ಬರೆದಿದ್ದಾರೆ
    • 20 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 204 ಬೃಹತ್ ಮೊತ್ತ ಕಲೆ ಹಾಕಿದೆ ಗುಜರಾತ್
IPLನಲ್ಲಿ ಎರಡು ಮಹಾ ದಾಖಲೆ ಬರೆದ ಟೀಂ ಇಂಡಿಯಾದ 23 ವರ್ಷದ ಈ ಆರಂಭಿಕ ಆಟಗಾರ! title=
Shubman Gill

GT vs KKR: ಐಪಿಎಲ್ 2023ರ 12 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಈ ಪಂದ್ಯವು ಗುಜರಾತ್’ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿದ್ದು, ಮೊದಲು ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಮಾಡಿದೆ, ಒಟ್ಟಾರೆ 20 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 204 ಬೃಹತ್ ಮೊತ್ತ ಕಲೆ ಹಾಕಿದೆ ಗುಜರಾತ್.

ಇದನ್ನೂ ಓದಿ: CSK vs MI: ಅಜಿಂಕ್ಯಾ ಅಬ್ಬರಕ್ಕೆ ತವರಿನಲ್ಲಿ ಮಕಾಡೆ ಮಲಗಿದ ಮುಂಬೈ: ಧೋನಿ ಪಡೆಗೆ ಭರ್ಜರಿ ಗೆಲುವು

ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮತ್ತು ಟೀಂ ಇಂಡಿಯಾದ 23 ವರ್ಷದ ಈ ಆರಂಭಿಕ ಆಟಗಾರ ಎರಡು ಮಹಾದಾಖಲೆಗಳನ್ನು ಬರೆದಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 31 ಎಸೆತಗಳಲ್ಲಿ 39 ರನ್‌’ಗಳ ಇನಿಂಗ್ಸ್‌ ಆಡಿದ್ದಾರೆ. ಈ ಇನ್ನಿಂಗ್ಸ್‌ನೊಂದಿಗೆ ಅವರು ಐಪಿಎಲ್‌’ನಲ್ಲಿ 2000 ರನ್ ಪೂರೈಸಿದ್ದಾರೆ. ಇದೀಗ ರಿಷಬ್ ಪಂತ್ ನಂತರ ಐಪಿಎಲ್‌’ನಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರಿಷಬ್ ಪಂತ್ 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರೆ, ಶುಭಮನ್ ಗಿಲ್ 23 ವರ್ಷ 214 ದಿನಗಳಲ್ಲಿ ಈ ಹಂತವನ್ನು ತಲುಪಿದ್ದಾರೆ.

ಐಪಿಎಲ್‌’ನಲ್ಲಿ 2000 ರನ್ ಪೂರೈಸಿದ ಜೊತೆಗೆ, ಶುಭಮನ್ ಗಿಲ್ 200 ಬೌಂಡರಿಗಳನ್ನು ಸಹ ಬಾರಿಸಿದ್ದಾರೆ. ಕೋಲ್ಕತ್ತಾ ವಿರುದ್ಧದ ಅವರ ಇನ್ನಿಂಗ್ಸ್‌’ನಲ್ಲಿ ಶುಭಮನ್ 5 ಬೌಂಡರಿಗಳನ್ನು ಬಾರಿಸಿದರು. ಈ ಪಂದ್ಯಕ್ಕೂ ಮುನ್ನ ಅವರ ಹೆಸರಿನಲ್ಲಿ 197 ಬೌಂಡರಿಗಳಿದ್ದವು. ಅಂದರೆ, ಈಗ ಐಪಿಎಲ್‌’ನಲ್ಲಿ ಒಟ್ಟು 202 ಬೌಂಡರಿಗಳು ಹೊಡೆದಿದ್ದಾರೆ. ಐಪಿಎಲ್‌’ನಲ್ಲಿ, ಶುಭಮನ್ 77 ಪಂದ್ಯಗಳಲ್ಲಿ 2004 ರನ್ ಗಳಿಸಿದ್ದಾರೆ. ಇದರಲ್ಲಿ 15 ಅರ್ಧಶತಕಗಳೂ ಸೇರಿವೆ.

ಇದನ್ನೂ ಓದಿ: CSK vs MI: ಅದೇನು ಕೈಗಳೇ ಅಥವಾ ಜೇಡರ ಬಲೆಯೇ? ಬೆಟ್ ಮಾಡ್ತೀವಿ… ಜೀವಮಾನದಲ್ಲಿ ನೋಡಿರಲ್ಲಿ ಇಂತಹ ಕ್ಯಾಚ್!

ಐಪಿಎಲ್ 2023 ರ 12 ನೇ ಪಂದ್ಯದಲ್ಲಿ ಗುಜರಾತ್ ನಾಯಕ ರಶೀದ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಕೋಲ್ಕತ್ತಾ ಎದುರು ಗುಜರಾತ್‌’ನ ಬ್ಯಾಟ್ಸ್‌ಮನ್‌’ಗಳು 203 ರನ್‌’ಗಳ ದೊಡ್ಡ ಸ್ಕೋರ್ ಗಳಿಸಿದ್ದರು. ಕೋಲ್ಕತ್ತಾ ಬೌಲರ್‌’ಗಳು ಕೇವಲ 4 ವಿಕೆಟ್‌’ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. ಗುಜರಾತ್ ಪರ ವಿಜಯ್ ಶಂಕರ್ ಬ್ಯಾಟಿಂಗ್‌’ನಿಂದ ವೇಗವಾಗಿ ರನ್ ಗಳಿಸಿದರು. ಅವರು 21 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಸಂದರ್ಭದಲ್ಲಿ ಅಜೇಯ 63 (24 ಎಸೆತ) ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿವೆ. ಇದಲ್ಲದೇ ಯುವ ಬ್ಯಾಟ್ಸ್ ಮನ್ ಸಾಯಿ ಸುದರ್ಶನ್ (53) ಕೂಡ ಅರ್ಧಶತಕ ಗಳಿಸಿದರು. ಆರಂಭಿಕರಾದ ಶುಭಮನ್ ಗಿಲ್ ಕೂಡ 39 ರನ್ ಗಳಿಸಿದ್ದಾರೆ. ಕೋಲ್ಕತ್ತಾ ಪರ ಸುನಿಲ್ ನರೈನ್ ಮೂರು ಮತ್ತು ಸುಯಾಶ್ ಶರ್ಮಾ 1 ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News