IPL 2023ರ ಮೊದಲ ಪಂದ್ಯದಲ್ಲಿಯೇ ಧೋನಿ ನಾಯಕತ್ವದ CSK ಸೋಲಲು ಕನ್ನಡದ ಈ ಖ್ಯಾತ ನಟಿ ಕಾರಣ!

IPL 2023: ಇಂಡಿಯನ್ ಪ್ರೀಮಿಯರ್ ಲೀಗ್‌ ನ 16 ನೇ ಸೀಸನ್‌ ನ ಉದ್ಘಾಟನಾ ಸಮಾರಂಭವು ಸಾಕಷ್ಟು ಅಬ್ಬರದಿಂದ ಕೂಡಿತ್ತು ಎನ್ನಬಹುದು. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೋಲು ಕಂಡಿದೆ. ಇದೀಗ ಈ ಸೋಲಿಗೆ ಕನ್ನಡ ಖ್ಯಾತ ನಟಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.

Written by - Bhavishya Shetty | Last Updated : Apr 2, 2023, 02:43 PM IST
    • ಇಂಡಿಯನ್ ಪ್ರೀಮಿಯರ್ ಲೀಗ್‌ ನ 16 ನೇ ಸೀಸನ್‌ ನ ಉದ್ಘಾಟನಾ ಸಮಾರಂಭ
    • ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಮತ್ತು ಅರಿಜಿತ್ ಸಿಂಗ್ ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿದರು
    • ಪಂದ್ಯದ ಸಮಯದಲ್ಲಿ ನಟಿ ರಶ್ಮಿಕಾ ಮಂದಣ್ಣ, ಮಹೇಂದ್ರ ಸಿಂಗ್ ಧೋನಿ ಜೊತೆ ಫೋಟೋ ತೆಗೆದುಕೊಂಡಿದ್ದರು.
IPL 2023ರ ಮೊದಲ ಪಂದ್ಯದಲ್ಲಿಯೇ  ಧೋನಿ ನಾಯಕತ್ವದ CSK ಸೋಲಲು ಕನ್ನಡದ ಈ ಖ್ಯಾತ ನಟಿ ಕಾರಣ!
Rashmika Mandanna

IPL 2023: ಕ್ರಿಕೆಟ್ ಲೋಕದಲ್ಲಿ ಸಖತ್ ಕ್ರೇಜ್ ಹುಟ್ಟಿಸುವ ಇಂಡಿಯನ್ ಪ್ರೀಮಿಯರ್ ಲೀಗ್ 2023 ಮಾರ್ಚ್ 31ರಂದು ಪ್ರಾರಂಭವಾಗಿದೆ. ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ವೇದಿಕೆಯಲ್ಲಿ ನಟಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಮತ್ತು ಗಾಯಕ ಅರಿಜಿತ್ ಸಿಂಗ್ ಹೆಜ್ಜೆ ಹಾಕಿ ನೆರೆದಿದ್ದವರನ್ನು ರಂಜಿಸಿದರು. 

ಇದನ್ನೂ ಓದಿ:IPL 2023: ಇಂದು RCB V/s MI ಹಣಾಹಣಿ; ‘ಈ ಸಲ ಕಪ್ ನಮ್ದೆ’ ಅಂತಿದ್ದಾರೆ ಫ್ಯಾನ್ಸ್..!

ನಟಿ ರಶ್ಮಿಕಾ ತಮ್ಮ ಸೂಪರ್‌ ಹಿಟ್ ಚಿತ್ರ 'ಪುಷ್ಪ: ದಿ ರೈಸ್' ನ ಹಿಟ್ ಸಾಂಗ್ 'ಸಾಮಿ ಸಾಮಿ'ಗೆ ಸಖತ್ ಸ್ಟೆಪ್ ಹಾಕಿದರು. ಇದರ ಜೊತೆಗೆ ಭಾರತಕ್ಕೆ ಆಸ್ಕರ್ ಗೌರವ ತಂದುಕೊಟ್ಟ ರಾಜಮೌಳಿ ಅವರ ಆರ್‌ ಆರ್‌ ಆರ್‌ ಸಿನಿಮಾದ ‘ನಾಟು-ನಾಟು’ ಹಾಡಿಗೂ ಹೆಜ್ಜೆ ಹಾಕಿದ್ದಾರೆ.

ಒಟ್ಟಾರೆ ಇಂಡಿಯನ್ ಪ್ರೀಮಿಯರ್ ಲೀಗ್‌ ನ 16 ನೇ ಸೀಸನ್‌ ನ ಉದ್ಘಾಟನಾ ಸಮಾರಂಭವು ಸಾಕಷ್ಟು ಅಬ್ಬರದಿಂದ ಕೂಡಿತ್ತು ಎನ್ನಬಹುದು. ಸುಮಾರು 4 ವರ್ಷಗಳ ನಂತರ ಐಪಿಎಲ್‌’ನಲ್ಲಿ ಇಂತಹ ಸಮಾರಂಭಗಳು ನಡೆದಿವೆ. ಇದರಲ್ಲಿ ಚಲನಚಿತ್ರ ತಾರೆಯರು ಅದ್ಭುತ ಪ್ರದರ್ಶನ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಹೊರತಾಗಿ, ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಕೂಡ ತಮ್ಮ ಕಂಠದಿಂದ ನೆರೆದಿದ್ದವರನ್ನು ಪುಳಕಿತರಾಗುವಂತೆ ಮಾಡಿದರು. ಇದಾದ ನಂತರ, ನಟಿ ತಮನ್ನಾ ಭಾಟಿಯಾ ಕೂಡ ತಮ್ಮ ನಾಟ್ಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಅಹಮದಾಬಾದ್‌’ನ ನರೇಂದ್ರ ಮೋದಿ ಸ್ಟೇಡಿಯಂ ಜನರಿಂದ ತುಂಬಿತ್ತು.

ಐಪಿಎಲ್ 2023 ರ ಮೊದಲ ಪಂದ್ಯದ ಕುರಿತು ಮಾತನಾಡುವುದಾದರೆ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಚೆನ್ನೈ ಸೋಲು ಕಂಡಿದೆ.

ಇದನ್ನೂ ಓದಿ: IPL: ಐಪಿಎಲ್ ಇತಿಹಾಸದ ಅತ್ಯಂತ ಹಳೆಯ ಆಟಗಾರರು: OLD IS GOLD ಅನ್ನೋದು ಇವರನ್ನು ನೋಡಿಯೇ ಅನ್ಸುತ್ತೆ!

ಇದೀಗ ಈ ಸೋಲಿಗೆ ಕನ್ನಡ ಖ್ಯಾತ ನಟಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ. ಹೌದು ಪಂದ್ಯದ ಸಮಯದಲ್ಲಿ ನಟಿ ರಶ್ಮಿಕಾ ಮಂದಣ್ಣ, ಮಹೇಂದ್ರ ಸಿಂಗ್ ಧೋನಿ ಜೊತೆ ಫೋಟೋ ತೆಗೆದುಕೊಂಡಿದ್ದರು. ಮೊದಲೇ ಟ್ರೋಲ್’ಗೆ ಗುರಿಯಾಗುತ್ತಿದ್ದ ರಶ್ಮಿಕಾ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಸಿಎಸ್’ಕೆ ಸೋಲಲು ರಶ್ಮಿಕಾ ಮಂದಣ್ಣನೇ ಕಾರಣ ಎನ್ನುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News