IPL 2020: ಹೈದರಾಬಾದ್ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಡೆಲ್ಲಿ ಕ್ಯಾಪಿಟಲ್ಸ್

ಅಬುದಾಭಿಯಲ್ಲಿನ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಎರಡನೇಯ ಕ್ಯ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17 ರನ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಲಗ್ಗೆಯಿಟ್ಟಿದೆ.

Last Updated : Nov 8, 2020, 11:58 PM IST
IPL 2020: ಹೈದರಾಬಾದ್ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಡೆಲ್ಲಿ ಕ್ಯಾಪಿಟಲ್ಸ್ title=
Photo Courtesy: Twitter

ನವದೆಹಲಿ: ಅಬುದಾಭಿಯಲ್ಲಿನ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಎರಡನೇಯ ಕ್ಯ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17 ರನ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 189 ರನ್ ಗಳನ್ನು ಗಳಿಸಿತು. ಡೆಲ್ಲಿ ತಂಡದ ಪರವಾಗಿ ಉತ್ತಮ ಆರಂಭಿಕ ಜೊತೆಯಾಟವನ್ನು ಒದಗಿಸಿದ ಸ್ಟೋನಿಸ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 86 ರನ್ ಗಳ ಜೊತೆಯಾಟವನ್ನು ಆಡಿದರು. ಧವನ್ 78 ರನ್ ಗಳಿಸಿದರೆ ಸ್ಟೋನಿಸ್ 38 ರನ್ ಗಳಿಸಿದರು. ತದನಂತರ ಆಟದ ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೆತ್ಮಾರ್ ಕೇವಲ 22 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು.

ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುತ್ತಾರೆಯೇ? ಇಲ್ಲಿದೆ ಉತ್ತರ..!

189 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಆರಂಭದಲ್ಲಿ 44 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು,ಆದರೆ ಕೇನ್ ವಿಲಿಯಮ್ಸನ್ (67) ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಆ ಸಂದರ್ಭದಲ್ಲಿ ಸ್ಟೋನಿಸ್ ಬೌಲಿಂಗ್ ನಲ್ಲಿ ರಬಾಡಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ಗೆ ಆಯ್ಕೆಯಾಗಿದ್ದಕ್ಕೆ ಮಂಜ್ರೆಕರ್ ಗೆ ಸಿಟ್ಟು , ಬಾಂಬೆ ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದ ಈ ಆಟಗಾರ..

ಇನ್ನೊಂದೆಡೆ ಅಬ್ದುಲ್ ಸಮಾದ್ 33 (16) ಹಾಗೂ ರಶಿದ್ ಖಾನ್ (11) ಪಂದ್ಯದ ಕೊನೆಯ ಸಂದರ್ಭದಲ್ಲಿ ಗೆಲುವಿನ ಆಸೆಯನ್ನು ಮೂಡಿಸಿದ್ದರು ಆದರೆ ಈ ಆಟಕ್ಕೆ ಕಾಗಿಸೋ ರಬಾಡಾ ಒಂದೇ ಓವರ್ ನಲ್ಲಿ  ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಹೈದರಾಬಾದ್ ಗೆಲುವಿಗೆ ತನ್ನಿರೆರಚಿಸಿದರು. ಕೊನೆಗೆ ಅದು 20 ಓವರ್ ಗಳಲ್ಲಿ  8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲು ಯಶಸ್ವಿಯಾಯಿತು.

Trending News