ICC punishes Bumrah: ಜಸ್ಪ್ರೀತ್ ಬುಮ್ರಾ ವಿರುದ್ಧ ಐಸಿಸಿ ಕಠಿಣ ಕ್ರಮ..!

Jasprit Bumrah reprimanded: ಐಸಿಸಿ ಬುಮ್ರಾಗೆ ಎಚ್ಚರಿಕೆ ನೀಡಿದೆ. ಐಸಿಸಿ ನೀತಿ ಸಂಹಿತೆ ಲೆವೆಲ್-1 ಅನ್ನು ಉಲ್ಲಂಘಿಸಿದ್ದಕ್ಕಾಗಿ  ಈ ವಾರ್ನಿಂಗ್‌ ನೀಡಲಾಗಿದೆ. 

Written by - Chetana Devarmani | Last Updated : Jan 29, 2024, 04:30 PM IST
  • ಜಸ್ಪ್ರೀತ್ ಬುಮ್ರಾ ವಿರುದ್ಧ ಕಠಿಣ ಕ್ರಮ
  • ಐಸಿಸಿ ಬುಮ್ರಾಗೆ ಎಚ್ಚರಿಕೆ ನೀಡಿದೆ
  • ಜಸ್ಪ್ರೀತ್ ಬುಮ್ರಾಗೆ ಐಸಿಸಿ ಶಿಕ್ಷೆ
ICC punishes Bumrah: ಜಸ್ಪ್ರೀತ್ ಬುಮ್ರಾ ವಿರುದ್ಧ ಐಸಿಸಿ ಕಠಿಣ ಕ್ರಮ..! title=

Jasprit Bumrah reprimanded: ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 28 ರನ್‌ಗಳಿಂದ ಸೋಲಿಸಿದೆ. ಇದಾದ ನಂತರ ಸೋಮವಾರ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರಬಿದ್ದಿದೆ.‌ ಐಸಿಸಿ ಬುಮ್ರಾಗೆ ಎಚ್ಚರಿಕೆ ನೀಡಿದೆ. ಐಸಿಸಿ ನೀತಿ ಸಂಹಿತೆ ಲೆವೆಲ್-1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಈ ವಾರ್ನಿಂಗ್‌ ನೀಡಲಾಗಿದೆ. ಅಷ್ಟೇ ಅಲ್ಲ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಟಗಾರ, ಸಹಾಯಕ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ (ವೀಕ್ಷಕರು ಸೇರಿದಂತೆ) ಅನುಚಿತ ದೈಹಿಕ ಸಂಪರ್ಕವನ್ನು ಒಳಗೊಂಡಿರುವ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.12 ರ ಅಡಿಯಲ್ಲಿ ಬುಮ್ರಾ ತಪ್ಪಿತಸ್ಥರೆಂದು ಕಂಡುಬಂದಿದೆ. ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನ 81ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಒಲಿ ಪೋಪ್ ಅವರ ದಾರಿಯಲ್ಲಿ ಬುಮ್ರಾ ಅಡ್ಡ ಬಂದಾಗ ಇಬ್ಬರ ನಡುವೆ ಘರ್ಷಣೆ ನಡೆಯಿತು.

ಇದನ್ನೂ ಓದಿ: ಮಾಲ್‌ನಲ್ಲಿ ‘ಸೆಕ್ಯೂರಿಟಿ ಗಾರ್ಡ್’ ಆಗಿದ್ದವ ಗಬ್ಬಾದಲ್ಲಿ ವಿಂಡೀಸ್‌ಗೆ ಟೆಸ್ಟ್ ಪಂದ್ಯ ಗೆಲ್ಲಿಸಿದ! 

ನಿಯಮ ಉಲ್ಲಂಘಿಸಿದಕ್ಕಾಗಿ ಬುಮ್ರಾ ಅವರಿಗೆ ಶಿಕ್ಷೆಯಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಪಂದ್ಯ ಶುಲ್ಕವನ್ನು 50% ರಷ್ಟು ದಂಡವಾಗಿ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಜಸ್ಪ್ರೀತ್ ಬುಮ್ರಾ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆ ಬುಮ್ರಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. 

ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 81ನೇ ಓವರ್‌ ಬೌಲ್ ಮಾಡುವಾಗ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಬ್ಯಾಟರ್ ಓಲಿ ಪೋಪ್ ರನ್‌ಗಾಗಿ ಓಡುವಾಗ ದಾರಿಗೆ ಅಡ್ಡ ಬಂದಿದ್ದರು. ರನ್‌ಗಾಗಿ ಓಡುವುದಕ್ಕೆ ಅಡಚಣೆಯನ್ನುಂಟು ಮಾಡಿದ್ದರು. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ಈ ಹಿನ್ನೆಲೆ ಐಸಿಸಿ ನಿಯಮಗಳಡಿಯಲ್ಲಿ ಬುಮ್ರಾಗೆ ಶಿಕ್ಷೆ ವಿಧಿಸಲಾಗಿದೆ. 

ಇದನ್ನೂ ಓದಿ: Hardik Pandya: ಟೀಂ ಇಂಡಿಯಾಗೆ ಮತ್ತೆ ಬರ್ತಿದ್ದಾರೆ ಹಾರ್ದಿಕ್ ಪಾಂಡ್ಯ! ಈ ಪಂದ್ಯದ ಮೂಲಕ ಭರ್ಜರಿ ಕಂಬ್ಯಾಕ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News