Team India: ಆಯ್ಕೆಗಾರರ ನಿರ್ಲಕ್ಷ್ಯದಿಂದ 5 ವರ್ಷ ಅವಕಾಶ ವಂಚಿತನಾದ ಈ ಆಟಗಾರ ಟ್ವೀಟ್ ನಲ್ಲಿ ಹೇಳಿದ್ದೇನು?

Karun Nair Tweet Viral: ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕರುಣ್ ನಾಯರ್ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ತಂಡದಲ್ಲಿ ಅವರ ಸ್ಥಾನವನ್ನು ಖಚಿತಪಡಿಸಲಾಗಿಲ್ಲ. ಅವರು 2017 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

Written by - Bhavishya Shetty | Last Updated : Dec 11, 2022, 09:20 AM IST
    • ಟ್ವೀಟ್ ಮಾಡಿ ಮತ್ತೊಮ್ಮೆ ಅವಕಾಶ ನೀಡುವಂತೆ ಕೋರಿದ ಭಾರತೀಯ ಕ್ರಿಕೆಟಿಗ
    • ಕಳೆದ ಐದು ವರ್ಷಗಳಿಂದ ಈ ಕ್ರಿಕೆಟಿಗ ತನ್ನ ಅವಕಾಶಕ್ಕಾಗಿ ಕಾಯುತ್ತಿದ್ದಾನೆ.
    • ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕರುಣ್ ನಾಯರ್
Team India: ಆಯ್ಕೆಗಾರರ ನಿರ್ಲಕ್ಷ್ಯದಿಂದ 5 ವರ್ಷ ಅವಕಾಶ ವಂಚಿತನಾದ ಈ ಆಟಗಾರ ಟ್ವೀಟ್ ನಲ್ಲಿ ಹೇಳಿದ್ದೇನು? title=
India Cricket

Karun Nair Tweet Viral: ಭಾರತ ಕ್ರಿಕೆಟ್ ತಂಡ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಢಾಕಾದಲ್ಲಿ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸೋತ ನಂತರ, ಚಿತ್ತಗಾಂಗ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 227 ರನ್‌ಗಳ ಬೃಹತ್ ಅಂತರದಿಂದ ಆತಿಥೇಯರನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಅವರ ಅಬ್ಬರ ಬಾಂಗ್ಲಾ ಬೌಲರ್ ಗಳನ್ನು ತತ್ತರಿಸುವಂತೆ ಮಾಡಿದೆ. ಇದೇ ವೇಳೆ ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಟ್ವೀಟ್ ಮಾಡಿ ಮತ್ತೊಮ್ಮೆ ಅವಕಾಶ ನೀಡುವಂತೆ ಕೋರಿದ್ದಾರೆ. ಕಳೆದ ಐದು ವರ್ಷಗಳಿಂದ ಈ ಕ್ರಿಕೆಟಿಗ ತನ್ನ ಅವಕಾಶಕ್ಕಾಗಿ ಕಾಯುತ್ತಿದ್ದಾನೆ.

ಇದನ್ನೂ ಓದಿ: FIFA WC 2022: ಪೋರ್ಚುಗಲ್‌ಗೆ ಆಘಾತ ನೀಡಿದ ಮೊರೊಕ್ಕೊ, ರೊನಾಲ್ಡೊ ವಿಶ್ವಕಪ್ ಕನಸು ಭಗ್ನ!

ಕರುಣ್ ನಾಯರ್ ಟ್ವೀಟ್:

ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕರುಣ್ ನಾಯರ್ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ತಂಡದಲ್ಲಿ ಅವರ ಸ್ಥಾನವನ್ನು ಖಚಿತಪಡಿಸಲಾಗಿಲ್ಲ. ಅವರು 2017 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಶನಿವಾರ ತುಂಬಾ ಭಾವುಕರಾಗಿ ಟ್ವೀಟ್ ಮಾಡಿದ ಅವರು, “ಆತ್ಮೀಯ ಕ್ರಿಕೆಟ್, ನನಗೆ ಒಂದು ಅವಕಾಶ ನೀಡಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೋಶಿಯಲ್ ಮೀಡಿಯಾ ಯೂಸರ್ ಗಳು ಕರುಣ್ ಅವರಿಗೆ ಧೈರ್ಯ ತುಂಬಿದ್ದಾರೆ. ಸುಮಾರು 2 ಸಾವಿರ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡಿದ್ದರೆ 89 ಸಾವಿರಕ್ಕೂ ಹೆಚ್ಚು ಬಳಕೆದಾರರು ಇದನ್ನು ಲೈಕ್ ಮಾಡಿದ್ದಾರೆ.

 

 

6 ವರ್ಷಗಳ ಹಿಂದೆ ತ್ರಿಶತಕ ಬಾರಿಸಿದ್ದ ಕರುಣ್:

ಕರುಣ್ ನಾಯರ್ 2016 ರಲ್ಲಿ ಚೆನ್ನೈ ಮೈದಾನದಲ್ಲಿ ಅದ್ಭುತವಾಗಿ ಆಟವಾಡಿದ್ದರು. ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧ 303 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಭಾರತದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮೊದಲು ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ದಾಖಲೆಯನ್ನು ಮಾಡಿದ್ದರು.

ಇದನ್ನೂ ಓದಿ: Ishan Kishan: ಹೋಟೆಲ್ ರೂಮಿನಲ್ಲೂ ಇಶಾನ್ ಕಿಶನ್... ಬಾಲ್ಯದ ಕೋಚ್ ಉತ್ತಮ್ ಮಜುಂದಾರ್ ಬಿಚ್ಚಿಟ್ಟ ರಹಸ್ಯವೇನು?

ಕರುಣ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ತ್ರಿಶತಕ ಸೇರಿದಂತೆ ಒಟ್ಟು 374 ರನ್ ಗಳಿಸಿದ್ದಾರೆ. ಇದರ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಅವರು 2 ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ. ಜೂನ್ 2016 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದ್ದು, ಕೇವಲ 2 ಪಂದ್ಯಗಳನ್ನು ಆಡಿದ ಬಳಿಕ ತಂಡದಿಂದ ಹೊರಗುಳಿದರು. ಅಂದಿನಿಂದ ಅವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News