Lionel Messi: 2026 ಫಿಫಾ ವಿಶ್ವಕಪ್ ನಲ್ಲಿ ಆಡ್ತಾರಂತೆ ಮೆಸ್ಸಿ!! ಅರ್ಜೆಂಟೀನಾ ಮ್ಯಾನೆಜರ್ ಹೇಳಿದ್ದು ನಿಜವೇ??

Lionel Messi in 2026 Fifa World Cup: ಭಾನುವಾರ ನಡೆದ ಫಿಫಾ ವಿಶ್ವಕಪ್‌ನ ರೋಚಕ ಫೈನಲ್‌ನಲ್ಲಿ ಮೆಸ್ಸಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಅರ್ಜೆಂಟೀನಾ, ಫ್ರಾನ್ಸ್ ತಂಡವನ್ನು ಸೋಲಿಸಿತು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟೌಟ್‌ನಲ್ಲಿ ಎರಡು ಸ್ಪಾಟ್-ಕಿಕ್‌ಗಳನ್ನು ತಡೆದರು.

Written by - Bhavishya Shetty | Last Updated : Dec 19, 2022, 03:38 PM IST
    • ಲಿಯೋನೆಲ್ ಮೆಸ್ಸಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಅರ್ಜೆಂಟೀನಾದ ಮ್ಯಾನೇಜರ್
    • ಅರ್ಜೆಂಟೀನಾದ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ ಮಾತಿನಿಂದ ಫ್ಯಾನ್ಸ್ ಖುಷಿ
    • ಮೆಸ್ಸಿ 2026 ರ ಫಿಫಾ ವಿಶ್ವಕಪ್ ವರೆಗೆ ಆಡಬಹುದು ಎಂದ ಸ್ಕಾಲೋನಿ
Lionel Messi: 2026 ಫಿಫಾ ವಿಶ್ವಕಪ್ ನಲ್ಲಿ ಆಡ್ತಾರಂತೆ ಮೆಸ್ಸಿ!! ಅರ್ಜೆಂಟೀನಾ ಮ್ಯಾನೆಜರ್ ಹೇಳಿದ್ದು ನಿಜವೇ??  title=
Lionel Messi

Lionel Messi in 2026 Fifa World Cup: ಅರ್ಜೆಂಟೀನಾ ತಂಡವು FIFA ವಿಶ್ವಕಪ್ 2022 ಪ್ರಶಸ್ತಿಯನ್ನು ಗೆದ್ದ ನಂತರ ಅರ್ಜೆಂಟೀನಾದ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಲಿಯೋನೆಲ್ ಸ್ಕಾಲೋನಿ ಪ್ರಕಾರ, ಮೆಸ್ಸಿ 2026 ರ ಫಿಫಾ ವಿಶ್ವಕಪ್ ವರೆಗೆ ಆಡಬಹುದು.

ಇದನ್ನೂ ಓದಿ: Argentina Fan Topless: ಫಿಫಾ ಕಪ್ ಗೆಲ್ಲುತ್ತಿದ್ದಂತೆ ಬಟ್ಟೆ ಬಿಚ್ಚಿ ಲೈವ್ ಪಂದ್ಯದ ವೇಳೆಯೇ ಕುಣಿದಾಡಿದ ಅರ್ಜೆಂಟೀನಾ ಫ್ಯಾನ್!!

ಭಾನುವಾರ ನಡೆದ ಫಿಫಾ ವಿಶ್ವಕಪ್‌ನ ರೋಚಕ ಫೈನಲ್‌ನಲ್ಲಿ ಮೆಸ್ಸಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಅರ್ಜೆಂಟೀನಾ, ಫ್ರಾನ್ಸ್ ತಂಡವನ್ನು ಸೋಲಿಸಿತು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟೌಟ್‌ನಲ್ಲಿ ಎರಡು ಸ್ಪಾಟ್-ಕಿಕ್‌ಗಳನ್ನು ತಡೆದರು.

2026ರ ಫಿಫಾ ವಿಶ್ವಕಪ್‌ನಲ್ಲಿಯೂ ಮೆಸ್ಸಿ ಆಡಲಿದ್ದಾರೆ!

ಅರ್ಜೆಂಟೀನಾ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ, 'ಮುಂದಿನ ಫಿಫಾ ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಉಳಿಸಲು ನಮಗೆ ಲಿಯೋನೆಲ್ ಮೆಸ್ಸಿ ಅಗತ್ಯವಿದೆ. ಆಟವಾಡಲು ಬಯಸಿದರೆ, ಅವರು ನಮ್ಮೊಂದಿಗೆ ಇರುತ್ತಾರೆ. ಈ ವಿಶ್ವಕಪ್ ತನ್ನ ವೃತ್ತಿಜೀವನದ ಐದನೇ ಮತ್ತು ಕೊನೆಯದು ಎಂದು ಮೆಸ್ಸಿ ಪದೇ ಪದೇ ಹೇಳುತ್ತಿದ್ದಾರೆ. 2021 ರ ಕೋಪಾ ಅಮೇರಿಕಾ ಮತ್ತು ಈಗ ಫುಟ್‌ಬಾಲ್‌ನ ಅತ್ಯಂತ ಪ್ರತಿಷ್ಠಿತ ಬಹುಮಾನವನ್ನು ಗೆದ್ದಿದ್ದರೂ, ಕತಾರ್‌ನ ಆಚೆಗೆ ತನ್ನ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಮುಂದುವರಿಸಲು ಮೆಸ್ಸಿ ಇನ್ನೂ ಪ್ರೇರಣೆಯನ್ನು ಹೊಂದಿರಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: FIFA FINAL ಟ್ರೋಫಿ ಅನಾವರಣ ಮಾಡಿದ್ದು ಕರ್ನಾಟಕ ಮೂಲದ ಬಾಲಿವುಡ್ ನಟಿ: ಯಾರಾಕೆ ಗೊತ್ತಾ?

ಅರ್ಜೆಂಟೀನಾ ತಂಡದ ಮ್ಯಾನೇಜರ್‌ನ ಈ ಹೇಳಿಕೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 'ಅರ್ಜೆಂಟೀನಾ ತಂಡಕ್ಕಾಗಿ ಆಡುವುದು ಅಥವಾ ವೈಯಕ್ತಿಕವಾಗಿ ಏನಾದರೂ ಮಾಡಬೇಕು ಎಂದು ಯೋಚಿಸುವುದು ಅವರ ಹಕ್ಕು. ಪಂದ್ಯಾವಳಿಯುದ್ದಕ್ಕೂ ಅಭಿಮಾನಿಗಳ ಬೆಂಬಲ ನಿರಂತರ ಪ್ರೇರಣೆ ನೀಡಿತು” ಎಂದು ಹೇಳಿ ಸ್ಕಾಲೋನಿ ಅರ್ಜೆಂಟೀನಾದ ಜನತೆಗೆ ವಿಜಯವನ್ನು ಅರ್ಪಿಸಿದರು. ಈ ತಂಡ ಅರ್ಜೆಂಟೀನಾದ ಅಭಿಮಾನಿಗಳಿಗಾಗಿ ಆಡುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News