LSG vs MI: ಐಪಿಎಲ್ ನಿಂದ ಹೊರ ಬಿದ್ದರೂ ಹೊಸ ದಾಖಲೆ ಬರೆದ ಮುಂಬೈ ಇಂಡಿಯನ್ಸ್..!

ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ವಿರುದ್ಧ ಸೋಲನ್ನು ಅನುಭವಿಸಿದೆ.ಆ ಮೂಲಕ ಈ ಆವೃತ್ತಿಯಲ್ಲಿ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿದೆ.ಇನ್ನೊಂದು ವಿಚಿತ್ರ ಸಂಗತಿ ಏನೆಂದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಸತತ ಎಂಟು ಪಂದ್ಯಗಳನ್ನು ಸೋತಿರುವ ಕುಖ್ಯಾತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.

Written by - Zee Kannada News Desk | Last Updated : Apr 25, 2022, 01:51 AM IST
  • ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಸತತ ಎಂಟು ಪಂದ್ಯಗಳನ್ನು ಸೋತಿರುವ ಕುಖ್ಯಾತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.
LSG vs MI: ಐಪಿಎಲ್ ನಿಂದ ಹೊರ ಬಿದ್ದರೂ ಹೊಸ ದಾಖಲೆ ಬರೆದ ಮುಂಬೈ ಇಂಡಿಯನ್ಸ್..! title=

ಮುಂಬೈ: ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ವಿರುದ್ಧ ಸೋಲನ್ನು ಅನುಭವಿಸಿದೆ.ಆ ಮೂಲಕ ಈ ಆವೃತ್ತಿಯಲ್ಲಿ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿದೆ.ಇನ್ನೊಂದು ವಿಚಿತ್ರ ಸಂಗತಿ ಏನೆಂದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು ಸತತ ಎಂಟು ಪಂದ್ಯಗಳನ್ನು ಸೋತಿರುವ ಕುಖ್ಯಾತಿಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.

ಇದನ್ನೂ ಓದಿ : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಫೋನ್‌ ನಂಬರ್‌ ಕೊಟ್ಟ ಕಿರಾತಕ: ಮುಂದಾಗಿದ್ದೇನು ಗೊತ್ತಾ?

ಟಾಸ್ ಗೆದ್ದ ಮುಂಬೈಇಂಡಿಯನ್ಸ್ ತಂಡವು ಲಕ್ನೋ ತಂಡವನ್ನು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಗೆ ನಿಯಂತ್ರಿಸಿತು ಲಕ್ನೋ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಕೆ.ಎಲ್.ರಾಹುಲ್ ಕೇವಲ 62 ಎಸೆತಗಳಲ್ಲಿ 12 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳ ನೆರವಿನಿಂದ 103 ರನ್ ಗಳನ್ನು ಗಳಿಸಿದರು.ಆ ಮೂಲಕ ಅವರು ತಂಡದ ರನ್ ಗತಿ ಏರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.

ಇದನ್ನೂ ಓದಿ: State Bank of India: ಮಹಿಳಾ ದಿನಾಚರಣೆಗೆ 'SBI' ನಿಂದ ಬಂಪರ್ ಗಿಫ್ಟ್..!

ಇದೇ ವೇಳೆ ಲಕ್ನೋ ತಂಡವು ನೀಡಿದ 169 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಇಶಾನ್ ಕಿಶನ್ ಅವರು ಎಂಟು ರನ್ ಗಳಿಸಿ ಔಟಾಗಿದ್ದರಿಂದಾಗಿ ತೀವ್ರ ಆಘಾತವನ್ನು ಅನುಭವಿಸಿತು.ಒಂದು ಹಂತದಲ್ಲಿ ರೋಹಿತ್ ಶರ್ಮಾ 39 ರನ್ ಗಳನ್ನು ಯಾಗಿದ್ದರು.ಆದರೆ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ.ಅವರ ವಿಕೆಟ್ ಪತನಗೊಂಡ ನಂತರ, ಡೆವಾಲ್ಡ್ ಬ್ರೆವಿಸ್ (3), ಸೂರ್ಯಕುಮಾರ್ ಯಾದವ್ (7) ವಿಕೆಟ್ ಗಳು ಪತನಗೊಂಡಿದ್ದರಿಂದಾಗಿ ಮಧ್ಯಮ ಕ್ರಮಾಂಕವು ಸಂಪೂರ್ಣ ವಿಫಲವಾಯಿತು.ತಿಲಕ್ ವರ್ಮಾ 27 ಎಸೆತಗಳಲ್ಲಿ 38 ರನ್ ಗಳಿಸಿ ಸ್ವಲ್ಪ ಪ್ರಯತ್ನ ಮಾಡಿದರು, ಆದರೆ ಇನ್ನೊಂದು ತುದಿಯಲ್ಲಿ ಅನುಭವಿ ಕೀರಾನ್ ಪೊಲಾರ್ಡ್ 20 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.

ಈಗ ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯ ಐಪಿಎಲ್ ನಿಂದ ಬಹುತೇಕ ಹೊರಗೆ ಬಿದ್ದಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿ

 

Trending News