Hardik Pandya: ಸತತ ಸೋಲಿನ ಬಳಿಕ ಅಭಿಮಾನಿಗಳಿಗೆ ಹೀಗೊಂದು ಪ್ರಮಾಣ ಮಾಡಿದ MI ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

Hardik Pandya, IPL 2024: ಸತತ ಎರಡು ಸೋಲಿನ ಬಳಿಕ ಮುಂಬೈ ತಂಡ ಗೆಲುವಿನ ಭರವಸೆಯೊಂದಿಗೆ ತವರು ನೆಲ ವಾಂಖೆಡೆಗೆ ಬಂದಿತ್ತು. ಆದರೆ ರಾಜಸ್ಥಾನ ತಂಡ ಆತಿಥೇಯರನ್ನು ಮಣಿಸಿ, ಮತ್ತೆ ಗಾಯದ ಮೇಲೆ ಖಾರ ಸವರುವಂತೆ ಮಾಡಿದೆ.

Written by - Bhavishya Shetty | Last Updated : Apr 2, 2024, 05:35 PM IST
    • ಐಪಿಎಲ್ 2024 ಮುಂಬೈ ಇಂಡಿಯನ್ಸ್‌ ಪಾಲಿಗೆ ದುಃಸ್ವಪ್ನವಾಗಿದೆ
    • ಹಾರ್ದಿಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್
    • ರಾಜಸ್ಥಾನ ವಿರುದ್ಧದ ಪಂದ್ಯದ ನಂತರ ಸೋಲಿಗೆ ಕಾರಣ ವಿವರಿಸಿದ ಹಾರ್ದಿಕ್ ಪಾಂಡ್ಯ
Hardik Pandya: ಸತತ ಸೋಲಿನ ಬಳಿಕ ಅಭಿಮಾನಿಗಳಿಗೆ ಹೀಗೊಂದು ಪ್ರಮಾಣ ಮಾಡಿದ MI ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ! title=
Hardik Pandya

Hardik Pandya, IPL 2024: ಐಪಿಎಲ್ 2024 ಮುಂಬೈ ಇಂಡಿಯನ್ಸ್‌ ಪಾಲಿಗೆ ದುಃಸ್ವಪ್ನವಾಗಿದೆ. ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡ ಹ್ಯಾಟ್ರಿಕ್ ಸೋಲು ಕಂಡಿದೆ. ಸತತ ಮೂರು ಸೋಲಿನ ನಂತರ, ಕ್ಯಾಪ್ಟನ್ ಹಾರ್ದಿಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ಅಭಿಮಾನಿಗಳಿಗೆ ಪ್ರಮಾಣವೊಂದನ್ನು ಮಾಡಿದ್ದಾರೆ.

ಇದನ್ನೂ ಓದಿ: ವಿಶೇಷ ದಾಖಲೆಯ ಹೊಸ್ತಿಲಲ್ಲಿ ವಿರಾಟ್: ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್’ಮನ್ ಆಗ್ತಾರಾ?

ಸತತ ಎರಡು ಸೋಲಿನ ಬಳಿಕ ಮುಂಬೈ ತಂಡ ಗೆಲುವಿನ ಭರವಸೆಯೊಂದಿಗೆ ತವರು ನೆಲ ವಾಂಖೆಡೆಗೆ ಬಂದಿತ್ತು. ಆದರೆ ರಾಜಸ್ಥಾನ ತಂಡ ಆತಿಥೇಯರನ್ನು ಮಣಿಸಿ, ಮತ್ತೆ ಗಾಯದ ಮೇಲೆ ಖಾರ ಸವರುವಂತೆ ಮಾಡಿದೆ.

ಹಾರ್ದಿಕ್ ಪಾಂಡ್ಯ ಶೇರ್ ಮಾಡಿರುವ ಪೋಸ್ಟ್’ನಲ್ಲಿ, “ಈ ತಂಡದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಒಂದು ವಿಷಯವಿದ್ದರೆ, ಅದನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ನಾವು ಹೋರಾಡುತ್ತಲೇ ಇರುತ್ತೇವೆ. ಮುಂದುವರಿಯುತ್ತೇವೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಮೂಲಕ, ಮುಂದಿನ ಪಂದ್ಯಗಳನ್ನು ಗೆಲ್ಲಲು ತಮ್ಮ ಸಂಪೂರ್ಣ ಶಕ್ತಿ ನೀಡಿ ಪ್ರಯತ್ನಿಸುವತ್ತ ಇಡೀ ತಂಡ ಗಮನ ಹರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಮುಂಬೈ ತಂಡ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 7 ರಂದು ಆಡಲಿದೆ. ದೆಹಲಿಗೆ ಪೈಪೋಟಿ ನೀಡುವಲ್ಲಿ ಮುಂಬೈ ಯಶಸ್ವಿಯಾಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: 4 ವರ್ಷ ಗುಟ್ಟಾಗಿ ಪ್ರೀತಿಸಿ ಹಿಂದೂ ಪತ್ರಕರ್ತೆಯನ್ನ ಮದ್ವೆಯಾದ ಟೀಂ ಇಂಡಿಯಾದ ಮುಸ್ಲಿಂ ಕ್ರಿಕೆಟಿಗ! ಪ್ರೇಮಕ್ಕಾಗಿ ಧರ್ಮದ ಗೋಡೆ ಒಡೆದ ಪ್ರೇಮಿಗಳಿವರು!

ಪಂದ್ಯದ ನಂತರ ಹಾರ್ದಿಕ್ ಹೇಳಿದ್ದೇನು?

ರಾಜಸ್ಥಾನ ವಿರುದ್ಧದ ಪಂದ್ಯದ ನಂತರ ಸೋಲಿಗೆ ಕಾರಣ ವಿವರಿಸಿದ ಹಾರ್ದಿಕ್ ಪಾಂಡ್ಯ, “ನಾವು ಬಯಸಿದ ರೀತಿಯಲ್ಲಿ ಆಟ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. 150 ಅಥವಾ 160 ರನ್ ತಲುಪಬಹುದು ಎಂದು ಭಾವಿಸಿದ್ದೆ, ಆದರೆ ನನ್ನ ವಿಕೆಟ್ ಪಂದ್ಯವನ್ನೇ ಬದಲಾಯಿಸಿತು. ಅಷ್ಟೇ ಅಲ್ಲದೆ, ಪಂದ್ಯದಲ್ಲಿ ಅವರು ಉತ್ತಮ ಸ್ಥಿತಿಯಲ್ಲಿದ್ದರು” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News