‘ಇಂಡಿಯಾ’ ಹೆಸರು ಬದಲಾಯಿಸಲು ಸೂಚಿಸಿದ್ದೇ ಈ ಕ್ರಿಕೆಟಿಗನ ಮಡದಿ: ವರ್ಷಕ್ಕೂ ಹಿಂದೆಯೇ ಪ್ರಧಾನಿಗೆ ಮಾಡಿದ್ರು ಮನವಿ

Mohammed Shami wife urges Viral Post: ‘ಇಂಡಿಯಾ’ ಬದಲು ‘ಭಾರತ್’ ಎಂದು ಹೆಸರಿಡಲು ಕೇಂದ್ರ ಸರ್ಕಾರ ಚಿಂತನೆ ರೂಪಿಸಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22ರ ವರೆಗೆ ವಿಶೇಷ ಅಧಿವೇಶನ ಕರೆದಿದ್ದು, ಇಲ್ಲಿ ‘ಇಂಡಿಯಾ’ ಬದಲು ‘ಭಾರತ್ ‘ಎಂದು ಅಧಿಕೃತ ನಾಮಕರಣ ಆಗಲಿದೆಯಾ ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿವೆ.

Written by - Bhavishya Shetty | Last Updated : Sep 6, 2023, 08:32 AM IST
    • ‘ಇಂಡಿಯಾ’ ಬದಲು ‘ಭಾರತ್’ ಎಂದು ಹೆಸರಿಡಲು ಕೇಂದ್ರ ಸರ್ಕಾರ ಚಿಂತನೆ ರೂಪಿಸಿದೆ
    • ಈ ಮಧ್ಯೆ ಭಾರತ ತಂಡದ ವೇಗಿಯೊಬ್ಬರ ಪತ್ನಿ ವರ್ಷದ ಹಿಂದೆ ಮಾಡಿದ್ದ ಇನ್ಸ್ಟಾಗ್ರಾಂ ಫೋಸ್ಟ್‌ ವೈರಲ್ ಆಗುತ್ತಿದೆ
    • ಈ ಪೋಸ್ಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶೇಷ ಮನವಿ ಮಾಡಿದ್ದರು
‘ಇಂಡಿಯಾ’ ಹೆಸರು ಬದಲಾಯಿಸಲು ಸೂಚಿಸಿದ್ದೇ ಈ ಕ್ರಿಕೆಟಿಗನ ಮಡದಿ: ವರ್ಷಕ್ಕೂ ಹಿಂದೆಯೇ ಪ್ರಧಾನಿಗೆ ಮಾಡಿದ್ರು ಮನವಿ  title=
Mohammed Shami Wife Hasin Jahan

Mohammed Shami wife urges Viral Post: ಪ್ರಸ್ತುತ ಎಲ್ಲಡೆ ಕೇಳಿಬರುತ್ತಿರುವ ವಿಚಾರವೆಂದರೆ ‘ಇಂಡಿಯಾ’ ಬದಲು ‘ಭಾರತ’ ಎನ್ನುವ ಹೆಸರಿಡಬೇಕು ಎಂಬುದು. ಈ ಬಗ್ಗೆ ಅನೇಕ ದಿಗ್ಗಜರು, ವಿಧ್ವಾಂಸರು, ರಾಜಕಾರಣಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ ಭಾರತ ತಂಡದ ವೇಗಿಯೊಬ್ಬರ ಪತ್ನಿ ವರ್ಷದ ಹಿಂದೆ ಮಾಡಿದ್ದ ಇನ್ಸ್ಟಾಗ್ರಾಂ ಫೋಸ್ಟ್‌ ವೈರಲ್ ಆಗುತ್ತಿದೆ.

ಇದನ್ನೂ ಓದಿ: Shani Margi: ದೀಪಾವಳಿಗೂ ಮುನ್ನ ಶನಿ ನೇರ ಸಂಚಾರ, ಈ 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆ

‘ಇಂಡಿಯಾ’ ಬದಲು ‘ಭಾರತ್’ ಎಂದು ಹೆಸರಿಡಲು ಕೇಂದ್ರ ಸರ್ಕಾರ ಚಿಂತನೆ ರೂಪಿಸಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22ರ ವರೆಗೆ ವಿಶೇಷ ಅಧಿವೇಶನ ಕರೆದಿದ್ದು, ಇಲ್ಲಿ ‘ಇಂಡಿಯಾ’ ಬದಲು ‘ಭಾರತ್ ‘ಎಂದು ಅಧಿಕೃತ ನಾಮಕರಣ ಆಗಲಿದೆಯಾ ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿವೆ.

ಈ ನಡುವೆ, ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಕಳೆದ ವರ್ಷ ಮಾಡಿದ್ದ ಸೋಶಿಯಲ್ ಮೀಡಿಯಾ ಫೋಸ್ಟ್‌ ವೈರಲ್‌ ಆಗುತ್ತಿದೆ. ಈ ಪೋಸ್ಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶೇಷ ಮನವಿ ಮಾಡಿದ್ದರು. “ನಮ್ಮ ದೇಶ, ನಮ್ಮ ಗೌರವ. ನಾನು ಭಾರತವನ್ನು ಪ್ರೀತಿಸುತ್ತೇನೆ. ನಮ್ಮ ದೇಶದ ಹೆಸರು ಹಿಂದೂಸ್ತಾನ್ ಅಥವಾ ಭಾರತ ಎಂದು ಇರಬೇಕು. ಮಾನ್ಯ ಪ್ರಧಾನಮಂತ್ರಿ ಮತ್ತು ಗೃಹಸಚಿವರಲ್ಲಿ ಇಂಡಿಯಾ ಎನ್ನುವ ಹೆಸರನ್ನು ಬದಲಾಯಿಸಲು ವಿನಂತಿಸುತ್ತಿರುವೆ. ನಮ್ಮ ದೇಶದ ಹೆಸರನ್ನು ಇಂಡಿಯಾ ಎಂದು ಕರೆಯುವ ಬದಲು ಭಾರತ ಅಥವಾ ಹಿಂದುಸ್ತಾನ್​ ಎಂದು ಕರೆಯುವಂತೆ ಮಾಡಿ” ಎಂದು ಬರೆದುಕೊಂಡಿದ್ದರು. ಇದೀಗ ಈ ಪೋಸ್ಟ್‌ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: ವಿಶ್ವಕಪ್ ತಂಡ ಪ್ರಕಟವಾಗುತ್ತಿದ್ದಂತೆ ನಿವೃತ್ತಿ ಘೋಷಿಸಿದ ಕೆಎಲ್ ರಾಹುಲ್ ಫೇವರೇಟ್ ಸಹ ಆಟಗಾರ!

ಇನ್ನೊಂದೆಡೆ ‘ಇಂಡಿಯಾ’ ಬದಲು ಭಾರತ ಎಂದು ಮರುನಾಮಕರಣ ಮಾಡುವ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, INDvsPAK ಬದಲಾಗಿ BHAvsPAK ಎಂದು ಬರೆದುಕೊಂಡಿದ್ದರು, ಜೊತೆಗೆ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟಿಗರ ಜರ್ಸಿ ಮೇಲೆ ‘ಭಾರತ್’ ಎಂದು ಬರೆಸಬೇಕು ಎಂದು ಬಿಸಿಸಿಐ ಮತ್ತು ಜೈ ಶಾಗೆ ಮನವಿ ಮಾಡಿಕೊಂಡಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News