ವಿಶ್ವಕಪ್ ತಂಡ ಪ್ರಕಟವಾಗುತ್ತಿದ್ದಂತೆ ನಿವೃತ್ತಿ ಘೋಷಿಸಿದ ಕೆಎಲ್ ರಾಹುಲ್ ಫೇವರೇಟ್ ಸಹ ಆಟಗಾರ!

Quinton de Kock retirement: 2023ರ ಏಕದಿನ ವಿಶ್ವಕಪ್‌’ಗೆ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡದ ಘೋಷಣೆಯ ಜೊತೆಗೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ನಿವೃತ್ತಿ ಘೋಷಿಸಿರುವುದು ಆಘಾತ ತಂದಿದೆ.

Written by - Bhavishya Shetty | Last Updated : Sep 6, 2023, 07:37 AM IST
    • 2023ರ ಏಕದಿನ ವಿಶ್ವಕಪ್‌’ಗೆ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡವನ್ನು ಪ್ರಕಟಿಸಿದೆ
    • ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ನಿವೃತ್ತಿ ಘೋಷಿಸಿರುವುದು ಆಘಾತ ತಂದಿದೆ
    • ಟೆಸ್ಟ್ ಕ್ರಿಕೆಟ್‌’ನಲ್ಲಿ ಒಟ್ಟು ಆರು ಶತಕಗಳು ಮತ್ತು 22 ಅರ್ಧ ಶತಕಗಳನ್ನು ಸಿಡಿಸಿದ್ದಾರೆ
ವಿಶ್ವಕಪ್ ತಂಡ ಪ್ರಕಟವಾಗುತ್ತಿದ್ದಂತೆ ನಿವೃತ್ತಿ ಘೋಷಿಸಿದ ಕೆಎಲ್ ರಾಹುಲ್ ಫೇವರೇಟ್ ಸಹ ಆಟಗಾರ!  title=
Quinton De Kock Retirement

Quinton de Kock retirement: 2023 ರ ಏಕದಿನ ವಿಶ್ವಕಪ್‌’ಗಾಗಿ ತಂಡಗಳು ತಮ್ಮ ತಂಡವನ್ನು ಪ್ರಕಟಿಸಲು ಪ್ರಾರಂಭಿಸಿವೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ಕೂಡ ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಈ ಬೆನ್ನಲ್ಲೇ ಆಟಗಾರನೊಬ್ಬ ಏಕದಿನ ಮಾದರಿಯಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾನೆ. 2021 ರಲ್ಲಿ ಈ ಆಟಗಾರ ಟೆಸ್ಟ್ ಸ್ವರೂಪದಿಂದ ನಿವೃತ್ತಿ ಹೊಂದಿದ್ದಾನೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಇದನ್ನೂ ಓದಿ: 30 ವರ್ಷಗಳಲ್ಲಿ ಇದೇ ಮೊದಲು... ಜನ್ಮಾಷ್ಟಮಿಯಂದು ಈ ರಾಶಿಯವರಿಗೆ ಅಖಂಡ ವರ ಸಿದ್ಧಿ! ಶ್ರೀಕೃಷ್ಣನ ದಯೆಯಿಂದ ಹಣದ ಸುರಿಮಳೆ, ಬ್ಯಾಕ್ ಟು ಬ್ಯಾಕ್ ಸಕ್ಸಸ್

2023ರ ಏಕದಿನ ವಿಶ್ವಕಪ್‌’ಗೆ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಿಂದ ಹಲವು ಸ್ಟಾರ್ ಆಟಗಾರರನ್ನು ಕೈಬಿಡಲಾಗಿದೆ. ಆದರೆ ಈ ತಂಡದ ಘೋಷಣೆಯ ಜೊತೆಗೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ನಿವೃತ್ತಿ ಘೋಷಿಸಿರುವುದು ಆಘಾತ ತಂದಿದೆ.

ಕ್ವಿಂಟನ್ ಡಿ ಕಾಕ್ ಈ ಹಿಂದೆ 2021 ರಲ್ಲಿ ಟೆಸ್ಟ್ ಮಾದರಿಯಿಂದ ನಿವೃತ್ತರಾಗಿದ್ದರು. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌’ಗೆ ಪದಾರ್ಪಣೆ ಮಾಡಿದ್ದ ಡಿ ಕಾಕ್, ದಕ್ಷಿಣ ಆಫ್ರಿಕಾ ಪರ ಒಟ್ಟು 54 ಟೆಸ್ಟ್ ಆಡಿದ್ದಾರೆ. ಈ ಅವಧಿಯಲ್ಲಿ ಅವರು 38.82 ಸರಾಸರಿಯಲ್ಲಿ 3300 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌’ನಲ್ಲಿ ಒಟ್ಟು ಆರು ಶತಕಗಳು ಮತ್ತು 22 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಅವರ ಗರಿಷ್ಠ ಸ್ಕೋರ್ 141 ರನ್.

ಏಕದಿನ ಪಂದ್ಯಗಳ ಕುರಿತು ಮಾತನಾಡುವುದಾದರೆ, ದಕ್ಷಿಣ ಆಫ್ರಿಕಾ ಪರ ಇದುವರೆಗೆ 140 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 17 ಶತಕ ಮತ್ತು 29 ಅರ್ಧ ಶತಕಗಳು ಸೇರಿದ್ದು, ಒಟ್ಟು 5966 ರನ್ ಗಳಿಸಿದ್ದಾರೆ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಬ್ಯಾಟ್ ಬೀಸಿದ್ದ ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್ ಅವರ ನಂಬಿಕಸ್ಥ ಆಟಗಾರರಲ್ಲಿ ಒಬ್ಬರಾಗಿದ್ದರು.

ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭದಿನದ ರಾಶಿಫಲ: ದ್ವಾದಶ ರಾಶಿಗಳ ದಿನಭವಿಷ್ಯ ತಿಳಿಯಿರಿ

ವಿಶ್ವಕಪ್ 2023 ಗಾಗಿ ದಕ್ಷಿಣ ಆಫ್ರಿಕಾ ತಂಡ-

ಟೆಂಬಾ ಬವುಮಾ (ನಾ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಸಿಸಂದಾ ಮಗಾಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ, ತಬ್ರೈಜ್ ಶಹಮ್ಸಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News