IPL 2020: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್ ಸಿರಾಜ್...!

ಬುಧವಾರ ರಾತ್ರಿ ನಡೆದ 39 ನೇ ಐಪಿಎಲ್ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಕೈಚಳಕದಿಂದ (4-2-8-3)ಕೊಲ್ಕತ್ತಾ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ಯಶಸ್ವಿಯಾದರು.

Last Updated : Oct 21, 2020, 10:37 PM IST
IPL 2020: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್ ಸಿರಾಜ್...! title=
Photo Courtesy: Twitter

ನವದೆಹಲಿ: ಬುಧವಾರ ರಾತ್ರಿ ನಡೆದ 39 ನೇ ಐಪಿಎಲ್ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ಕೈಚಳಕದಿಂದ (4-2-8-3)ಕೊಲ್ಕತ್ತಾ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಲ್ಲಿ ಯಶಸ್ವಿಯಾದರು.

ಎ.ಬಿ.ಡಿವಿಲಿಯರ್ಸ್ ವಿರಾಟ್ ರೂಪಕ್ಕೆ ರಾಜಸ್ಥಾನ ರಾಯಲ್ಸ್ ತತ್ತರ

ಸಿರಾಜ್ ಮೊಹಮ್ಮದ್ ತನ್ನ ಮೊದಲ ಎರಡು ಓವರುಗಳಲ್ಲಿಯೇ ಮೂರು ವಿಕೆಟ್ ತೆಗೆದಿದ್ದರಿಂದಾಗಿ ಮೂಲಕ ಕೊಲ್ಕತ್ತಾ ತಂಡವು 14 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಈಗ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನದಿಂದಾಗಿ ಸಿರಾಜ್ ಮೊಹಮ್ಮದ್ ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್ ನಲ್ಲಿ ಎರಡು ಓವರ್ ಗಳನ್ನು ಮೇಡನ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ಚೊಚ್ಚಲ ಓವರ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಯುನಿವರ್ಸ್ ಬಾಸ್ ರನ್ನು ಔಟ್ ಮಾಡುವ ಮೊದಲು ಅವರ ಕಾಲುಗಳನ್ನು ಕಟ್ಟಿ ಹಾಕಬೇಕು- ಆರ್.ಅಶ್ವಿನ್

ಶಹಬಾಜ್ ಅಹ್ಮದ್ ಬದಲಿಗೆ ಆಡುತ್ತಿದ್ದ ಮೊಹಮ್ಮದ್ ಸಿರಾಜ್ ಕೆಕೆಆರ್ ಇನ್ನಿಂಗ್ಸ್‌ನ ಎರಡನೇ ಓವರ್ ನಲ್ಲಿ ಬೌಲ್ ಮಾಡಲು ಬಂದರು. ಆಗ ಅವರು ಮೂರನೇ ಎಸೆತದಲ್ಲಿ ಓಪನರ್ ರಾಹುಲ್ ತ್ರಿಪಾಠಿ ಅವರನ್ನು ಔಟ್ ಮಾಡಿದರು ಇದಾದ ನಂತರ ಮುಂದಿನ ಎಸೆತದಲ್ಲಿ ನಿತೀಶ್ ರಾಣಾ ಬೌಲ್ ಮಾಡಿದರು. ಆಗ ಕೆಕೆಆರ್ 3/2 ಕ್ಕೆ ಇಳಿದ ಕಾರಣ ಓವರ್ ಡಬಲ್ ವಿಕೆಟ್-ಮೇಡನ್ ಆಯಿತು.

ಮುಂದಿನ ಓವರ್‌ನಲ್ಲಿ ಸಿರಾಜ್ ಎಸೆದ ಉತ್ತಮ ಸ್ವಿಂಗ್ ಬೌಲಿಂಗ್ ಗೆ ಟಾಮ್ ಬ್ಯಾಂಟನ್‌ (10) ಅವರು ಎಬಿ ಡಿವಿಲಿಯರ್ಸ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಈ ಸಂದರ್ಭದಲ್ಲಿ ಅವರು ಬ್ಯಾಟ್ಸ್‌ಮನ್‌ಗಳು ತಮ್ಮ ವಿರುದ್ಧ ಒಂದು ರನ್ ಗಳಿಸಲು ಬಿಡಲಿಲ್ಲ ಮತ್ತು ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ಚೊಚ್ಚಲ ಓವರ್‌ಗಳನ್ನು ಮೇಡನ್ ಮಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

Trending News