Watch: ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಮಗ ರಿಯಾನ್ ಪರಾಗ್ ಮೇಲೆ ತಾಯಿಯ ಪ್ರೀತಿಯ ಸುರಿಮಳೆ: ಹೃದಯಸ್ಪರ್ಶಿ ವಿಡಿಯೋ ನೋಡಿ

Riyan Parag Mother Video: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಅವರು, 54 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಅಷ್ಟೇ ಅಲ್ಲದೆ, ರಾಜಸ್ಥಾನ್ ರಾಯಲ್ಸ್‌’ಗೆ ಋತುವಿನ ಸತತ ಮೂರನೇ ಜಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Written by - Bhavishya Shetty | Last Updated : Apr 2, 2024, 02:30 PM IST
    • ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ರಿಯಾನ್ ಪರಾಗ್
    • ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್
    • ಮಗನನ್ನು ಅಪ್ಪಿಹಿಡಿದು ಪ್ರೀತಿಯ ಸುರಿಮಳೆಗೈದಿದ್ದು ವಿಶೇಷ
Watch: ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಮಗ ರಿಯಾನ್ ಪರಾಗ್ ಮೇಲೆ ತಾಯಿಯ ಪ್ರೀತಿಯ ಸುರಿಮಳೆ: ಹೃದಯಸ್ಪರ್ಶಿ ವಿಡಿಯೋ ನೋಡಿ title=
Riyan Parag

Riyan Parag Mother Video: ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಐಪಿಎಲ್ 2024 ರಲ್ಲಿ ಉತ್ತಮ ಫಾರ್ಮ್‌’ನಲ್ಲಿದ್ದಾರೆ. ಇಲ್ಲಿಯವರೆಗೆ ಆಡಿದ 3 ಪಂದ್ಯಗಳಲ್ಲಿ 181 ರನ್ ಗಳಿಸಿರುವ ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಅವರು, 54 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಅಷ್ಟೇ ಅಲ್ಲದೆ, ರಾಜಸ್ಥಾನ್ ರಾಯಲ್ಸ್‌’ಗೆ ಋತುವಿನ ಸತತ ಮೂರನೇ ಜಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ರಿಯಾನ್ ಅವರ ತಾಯಿ, ತನ್ನ ಮಗನನ್ನು ಅಪ್ಪಿಹಿಡಿದು ಪ್ರೀತಿಯ ಸುರಿಮಳೆಗೈದಿದ್ದು ವಿಶೇಷವಾಗಿತ್ತು. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ಲಾಫಿಂಗ್ ಬುದ್ಧ ಶೀಘ್ರದಲ್ಲಿಯೇ ರಿಲೀಸ್

ಪಂದ್ಯದ ನಂತರ ರಿಯಾನ್ ಪರಾಗ್ ತಂಡದ ಹೋಟೆಲ್ ತಲುಪುತ್ತಿದ್ದಂತೆ ಅವರ ತಾಯಿ ಅಲ್ಲಿ ಹಾಜರಿದ್ದರು. ಮಗನನ್ನು ನೋಡಿದ ತಕ್ಷಣ, ತಬ್ಬಿಕೊಂಡು ಮುದ್ದಾಡಿ ಹಣೆಗೆ ಮುತ್ತಿಟ್ಟರು. ಅದೇ ವೇಳೆ ರಿಯಾನ್ ಪರಾಗ್‌’ನ ಬ್ಯಾಗ್‌’ನಿಂದ ಆರೆಂಜ್ ಕ್ಯಾಪ್ ಹೊರತೆಗೆದು ಪರಾಗ್’ಗೆ ಹಾಕಿದರು. ಈ ವೀಡಿಯೊವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸ್ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' ನಲ್ಲಿ ಹಂಚಿಕೊಂಡಿದೆ. 

 

ರಾಜಸ್ಥಾನದ ಈ ಯುವ ಬ್ಯಾಟ್ಸ್‌ಮನ್ ಐಪಿಎಲ್ 2024 ರ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ 43 ರನ್‌’ಗಳ ಇನ್ನಿಂಗ್ಸ್ ಆಡಿದ ಅವರು, ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಇದರಲ್ಲಿ 84 ರನ್‌’ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಒಂದು ಬಾರಿ ರಾಜಸ್ತಾನದ ಬ್ಯಾಟಿಂಗ್ ತತ್ತರಿಸಿದರೂ ರಿಯಾನ್ ಇನ್ನಿಂಗ್ಸ್ ನಿಂದಾಗಿ ತಂಡ ಉತ್ತಮ ಸ್ಕೋರ್ ಗಳಿಸಿ ಜಯಭೇರಿ ಬಾರಿಸಿತ್ತು. ಅದೇ ಸಮಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು 54 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಐಪಿಎಲ್‌ ಪಯಣ! MI ತಂಡಕ್ಕೆ ಮರಳಿದ ಕ್ರಿಕೇಟಿಗನ ಸಂಭಾವನೆ ಎಷ್ಟು ಗೊತ್ತೇ?

ರಾಜಸ್ಥಾನಕ್ಕೆ ಅಗ್ರಸ್ಥಾನ:

ಐಪಿಎಲ್ 2024ರ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 3 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದರ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ 2 ಪಂದ್ಯಗಳನ್ನು ಆಡಿದ್ದು ಎರಡನ್ನೂ ಗೆದ್ದಿದೆ.  ಹೀಗಾಗಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಆಡಿದ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ ತಂಡ ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಪ್ರಿಲ್ 6 ರಂದು ಆಡಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News