ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಕದಿನದ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಆರಂಭದಲ್ಲಿಯೇ ಆರನ್ ಫಿಂಚ್ ಅವರ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ನಂತರ ಉಸ್ಮಾನ್ ಖವಾಜಾ(50) ಮಾರ್ಕಸ್ ಸ್ಟೋನಿಸ್ ಉತ್ತಮ ಜೊತೆಯಾಟವಾಡಿದರು. ಇನ್ನೊಂದೆಡೆ ಗ್ಲೆನ್ ಮ್ಯಾಕ್ಸ್ ವೆಲ್ (40 )ಹಾಗೂ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರು ಅಜೇಯ 36 ರನ್ ಗಳಿಂದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 236 ರನ್ ಗಳನ್ನು ಗಳಿಸಿತು.
An unbeaten 141-run partnership between @msdhoni and @JadhavKedar pulled India to the line after a middle-overs wobble to go 1-0 up in the five-match series.
— ICC (@ICC) March 2, 2019
ಆಸ್ಟ್ರೇಲಿಯಾದ ರನ್ ವೇಗಕ್ಕೆ ಭಾರತದ ಬೌಲರ್ ಗಳು ತಮ್ಮ ಕರಾರುವಕ್ಕಾದ ಬೌಲಿಂಗ್ ನಿಂದಾಗಿ ಕಡಿವಾಣ ಹಾಕಿದರು. ಭಾರತದ ಪರ ಮೊಹಮ್ಮದ್ ಶಮಿ, ಬುಮ್ರಾ , ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.
ಆಸ್ಟ್ರೇಲಿಯಾ ತಂಡವು ನೀಡಿದ 237 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡವು ಆರಂಭದಲ್ಲಿಯೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಆದರೆ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉತ್ತಮ ಜೊತೆಯಾಟವು ತಂಡಕ್ಕೆ ಆಸರೆಯಾಯಿತು ಆದರೆ ನಂತರ 99 ರನ್ ಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿದ ಭಾರತ ತಂಡಕ್ಕೆ ಧೋನಿ ಅಜೇಯ 59 ಹಾಗೂ ಕೇದಾರ್ ಜಾಧವ್ 81 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.