“ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಸೂತ್ರ ಅದೇ...”- IPL ಆರಂಭಕ್ಕೂ ಮುನ್ನ ಸೀಕ್ರೆಟ್ ಬಿಚ್ಚಿಟ್ಟ ಕ್ಯಾಪ್ಟನ್ ಕೂಲ್ ಧೋನಿ

MS Dhoni on Chennai Super Kings: ಮಾರ್ಚ್ ಆರಂಭದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಚೆನ್ನೈನ ಚೆಪಾಕ್‌’ನಿಂದ ಅಭ್ಯಾಸ ಆರಂಭಿಸಲಿದ್ದು, ಧೋನಿ ಕೂಡ ನೇರವಾಗಿ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

Written by - Bhavishya Shetty | Last Updated : Feb 12, 2024, 07:08 PM IST
    • ಐಪಿಎಲ್ 2024 ಕ್ಕಾಗಿ ತವರಿನಲ್ಲಿ ತರಬೇತಿ ಪಡೆಯುತ್ತಿರುವ ಧೋನಿ
    • ಮಾರ್ಚ್ ಆರಂಭದಲ್ಲಿ ಚೆನ್ನೈನ ಚೆಪಾಕ್‌’ನಿಂದ ಅಭ್ಯಾಸ ಆರಂಭ
    • ಕೆಲ ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ ಧೋನಿ
“ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಸೂತ್ರ ಅದೇ...”- IPL ಆರಂಭಕ್ಕೂ ಮುನ್ನ ಸೀಕ್ರೆಟ್ ಬಿಚ್ಚಿಟ್ಟ ಕ್ಯಾಪ್ಟನ್ ಕೂಲ್ ಧೋನಿ title=
Chennai Super Kings

MS Dhoni on Chennai Super Kings: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಐಪಿಎಲ್ 2024 ಕ್ಕಾಗಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಸದ್ಯ ತವರಿನಲ್ಲಿ ತರಬೇತಿ ಪಡೆಯುತ್ತಿರುವ ಧೋನಿ ಅಲ್ಲಿಂದಲೇ ಸಿಎಸ್ ಕೆ ಆಟಗಾರರಿಗೆ ಸಂದೇಶ ರವಾನಿಸುತ್ತಿದ್ದಾರೆ.

ಮಾರ್ಚ್ ಆರಂಭದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಚೆನ್ನೈನ ಚೆಪಾಕ್‌’ನಿಂದ ಅಭ್ಯಾಸ ಆರಂಭಿಸಲಿದ್ದು, ಧೋನಿ ಕೂಡ ನೇರವಾಗಿ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಮಹಿಳೆಯರ ದೇಹದ ಈ ಭಾಗದಲ್ಲಿ ಕೂದಲು ಬೆಳೆದರೆ ಅದು ಸಿರಿವಂತಿಕೆ ಆಗಮನದ ಸಂಕೇತ

ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆಲ ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಇದರ ಜೊತೆಗೆ ಸಿ ಎಸ್ ಕೆ ತಂಡದ ಟಾಪ್ ಸೀಕ್ರೆಟ್ ರಿವೀಲ್ ಮಾಡಿದ ಮಾಹಿ, “ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ಸೂತ್ರ ಮತ್ತು ಟಾಪ್ ಸೀಕ್ರೆಟ್ ಕೂಡ ಅದೇ.. ಆದರೆ ಅದನ್ನು ಹೇಳಿದರೆ ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ” ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ರಾಜಯೋಗದಿಂದ ಈ ಜನ್ಮರಾಶಿಗೆ ಶುಕ್ರದೆಸೆ ಶುರು: ಇನ್ಮುಂದೆ ಇವರದ್ದೇ ರಾಜ್ಯಭಾರ-ಹೆಜ್ಜೆಯಿಟ್ಟರೆ ಸಾಕು ಗೆಲುವಿನದ್ದೇ ವೈಭವ!

ಧೋನಿ ಯಶಸ್ಸಿನ ಸೂತ್ರದ ಬಗ್ಗೆ ಮಾತನಾಡುವಾಗ, “ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದಕ್ಕಾಗಿಯೇ ಅವರು ಆಡುತ್ತಾರೆ. ಆದರೆ ಅಷ್ಟು ಮಾತ್ರ ಸಾಕಾಗುವುದಿಲ್ಲ. ತರಬೇತಿಯಲ್ಲಿ ನೀವು ಪಡೆಯುವ ಅನುಭವಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ವಿಶ್ಲೇಷಿಸಿ ಮತ್ತು ಅದರಿಂದ ಕೆಲವು ಬದಲಾವಣೆಗಳನ್ನು ಮಾಡಿ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News