T20 ಸರಣಿಗೂ ಮುನ್ನ ಈ ಆಟಗಾರ ತಂಡದಿಂದ ಹೊರಕ್ಕೆ! ವಿರಾಟ್ ಶತ್ರುವಿಗೆ ಕೊನೆಗೂ ಗೇಟ್’ಪಾಸ್ ಕೊಟ್ಟ ಸಮಿತಿ

Naveen Ul Haq-T20 Series: ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ತಂಡ ತನ್ನ ಟಿ20 ತಂಡವನ್ನು ಪ್ರಕಟಿಸಿದೆ. ಜುಲೈ 14 ಮತ್ತು 16 ರಂದು ಬಾಂಗ್ಲಾದೇಶ ಪ್ರವಾಸದಲ್ಲಿ ತಂಡವು ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

Written by - Bhavishya Shetty | Last Updated : Jul 9, 2023, 01:56 PM IST
    • ಅಫ್ಘಾನಿಸ್ತಾನ ತಂಡವು 2 ಪಂದ್ಯಗಳ T20I ಸರಣಿಯ ನಂತರ 3 ಪಂದ್ಯಗಳ ODI ಸರಣಿಯನ್ನು ಆಡಲಿದೆ.
    • ಬಾಂಗ್ಲಾದೇಶ ಪ್ರವಾಸದಲ್ಲಿ ತಂಡವು ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ
    • ನವೀನ್-ಉಲ್-ಹಕ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ
T20 ಸರಣಿಗೂ ಮುನ್ನ ಈ ಆಟಗಾರ ತಂಡದಿಂದ ಹೊರಕ್ಕೆ! ವಿರಾಟ್ ಶತ್ರುವಿಗೆ ಕೊನೆಗೂ ಗೇಟ್’ಪಾಸ್ ಕೊಟ್ಟ ಸಮಿತಿ title=
Cricket News

Naveen Ul Haq- T20 Series: ಏಕದಿನ ಸರಣಿ ಬಳಿಕ ನಡೆಯಲಿರುವ ಟಿ20 ಸರಣಿಗೂ ಮುನ್ನ ಅಫ್ಘಾನಿಸ್ತಾನ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ಬಾಂಗ್ಲಾದೇಶ ಪ್ರವಾಸದಲ್ಲಿ ಅಫ್ಘಾನಿಸ್ತಾನ ತಂಡವು ಎರಡು ಪಂದ್ಯಗಳ T20I ಸರಣಿಯ ನಂತರ ಮೂರು ಪಂದ್ಯಗಳ ODI ಸರಣಿಯನ್ನು ಆಡಲಿದೆ. ಇದಕ್ಕೂ ಮೊದಲು, ತಂಡದ ಸ್ಟಾರ್ ಆಟಗಾರ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:  ವಿಶ್ವ ಕಪ್ ಕ್ರಿಕೆಟ್ ಗಾಗಿ ಭಾರತಕ್ಕೆ ಬರುವುದಿಲ್ಲವೇ ಪಾಕ್ ತಂಡ? ಪ್ರಧಾನಿ ಶಹಬಾಜ್ ಶರೀಫ್ ಕೈಗೊಂಡ ನಿರ್ಧಾರ ಇಲ್ಲಿದೆ

ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ತಂಡ ತನ್ನ ಟಿ20 ತಂಡವನ್ನು ಪ್ರಕಟಿಸಿದೆ. ಜುಲೈ 14 ಮತ್ತು 16 ರಂದು ಬಾಂಗ್ಲಾದೇಶ ಪ್ರವಾಸದಲ್ಲಿ ತಂಡವು ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆದರೆ ಇದಕ್ಕೂ ಮುಂಚಿತವಾಗಿ ತಂಡದ ವೇಗಿಯೊಬ್ಬರನ್ನು ಕೈಬಿಡಲಾಗಿದೆ, ಈತ ಇತ್ತೀಚೆಗೆ ಐಪಿಎಲ್ 2023ರ ಸಮಯದಲ್ಲಿ ವಿರಾಟ್ ಜೊತೆ ಕಿತ್ತಾಡಿಕೊಂಡು ಸಖತ್ ಸುದ್ದಿ ಮಾಡಿದ್ದರು.

ಐಪಿಎಲ್‌ ನಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ ಅಫ್ಘಾನ್ ವೇಗಿ ನವೀನ್-ಉಲ್-ಹಕ್ ಐಪಿಎಲ್ ನಂತರ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ ಬಾಂಗ್ಲಾದೇಶ ಪ್ರವಾಸದಲ್ಲಿ T20I ಸರಣಿಗೆ ಮರಳುವ ನಿರೀಕ್ಷೆಯಿತ್ತು, ಜೊತೆಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇದೀಗ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ನಿಜಾತ್ ಮಸೂದ್ ಅವರನ್ನು ಎರಡು ಪಂದ್ಯಗಳ T20I ಸರಣಿಗೆ ತಂಡಕ್ಕೆ ಸೇರಿಸಿದೆ.

ಮಾಹಿತಿಯ ಪ್ರಕಾರ, ನವೀನ್ ಈಗ ಚಿಕಿತ್ಸೆಗಾಗಿ ಇಂಗ್ಲೆಂಡ್‌ ಗೆ ತೆರಳಲಿದ್ದು, ಅಲ್ಲಿ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಮೂಳೆ ತಜ್ಞರ ಮೇಲ್ವಿಚಾರಣೆಯಲ್ಲಿ ಮಾಡಲಾಗುತ್ತದೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಆಯ್ಕೆಗಾರ ಅಸಾದುಲ್ಲಾ ಖಾನ್ ಕ್ರಿಕ್‌ಬಜ್‌ ಮಾಹಿತಿ ನೀಡಿದ್ದು, ನವೀನ್ ಮುಂದಿನ ಎರಡು ತಿಂಗಳ ಕಾಲ ತಂಡದಿಂದ ಹೊರಗುಳಿಯಬಹುದು ಎಂದು ಹೇಳಿದ್ದಾರೆ. “ನವೀನ್ ಬದಲಿಗೆ, ನಾವು ನಿಜಾತ್ ಮಸೂದ್ ಅವರನ್ನು ಆರಿಸಿದ್ದೇವೆ” ಎಂದರು. ಇನ್ನು ನಿಜಾತ್ ಸದ್ಯ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ.

ಇದನ್ನೂ ಓದಿ: 21 ವರ್ಷದಿಂದ ಟೆಸ್ಟ್ ಸರಣಿಯಲ್ಲಿ Team Indiaವನ್ನು ಸೋಲಿಸಲು ಹವಣಿಸುತ್ತಿದೆ ಈ ತಂಡ! ಆದ್ರೆ ಸೋತಿದ್ದು ಅವರೇ…

ಅಫ್ಘಾನಿಸ್ತಾನ ತಂಡ ಪ್ರಸ್ತುತ ಚಟ್ಟೋಗ್ರಾಮ್‌ ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ಎರಡು ಪಂದ್ಯಗಳ ಟಿ20 ಸರಣಿಗಾಗಿ ಸಿಲ್ಹೆಟ್‌ ಗೆ ತೆರಳಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News