ʼವಿಶ್ವದ ನಂ.1 ಜಾವೆಲಿನ್‌ ಪಟುʼ ಸ್ಥಾನಕ್ಕೇರಿದ ಚಿನ್ನದ ಹುಡುಗ ʼನೀರಜ್‌ ಚೋಪ್ರಾʼ..!

Neeraj Chopra in doha diamond league : ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಮ್ಮೆ ಐತಿಹಾಸಿಕ ಸಾಧನೆಯೊಂದಿಗೆ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪುರುಷರ ಜಾವೆಲಿಂಗ್ ಥ್ರೋ ಶ್ರೇಯಾಂಕದಲ್ಲಿ ವಿಶ್ವದಲ್ಲೇ ಅಗ್ರಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ ಹೊರಹೊಮ್ಮಿದ್ದಾರೆ.

Written by - Krishna N K | Last Updated : May 23, 2023, 04:12 PM IST
  • ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಮ್ಮೆ ಐತಿಹಾಸಿಕ ಸಾಧನೆ.
  • ಡೈಮಂಡ್ ಲೀಗ್‌ನಲ್ಲಿ ನೀರಜ್ 88.67 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
  • ನೀರಜ್ 1455 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ʼವಿಶ್ವದ ನಂ.1 ಜಾವೆಲಿನ್‌ ಪಟುʼ ಸ್ಥಾನಕ್ಕೇರಿದ ಚಿನ್ನದ ಹುಡುಗ ʼನೀರಜ್‌ ಚೋಪ್ರಾʼ..! title=

Neeraj Chopra : ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ದಾಖಲೆ ನಿರ್ಮಿಸಿದ್ದಾರೆ. ಪುರುಷರ ವಿಶ್ವ ಜಾವೆಲಿಂಗ್ ಥ್ರೋ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಜಾವೆಲಿನ್ ಥ್ರೋ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ಭಾರತದ ಅಥ್ಲೀಟ್ ಒಬ್ಬರು ಈ ಅಗ್ರಸ್ಥಾನ ಪಡೆದಿರುವುದು ಗಮನಾರ್ಹ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನವನ್ನು ನೀಡಿದ್ದರು. ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಅವರನ್ನು ಸೋಲಿಸಿ ನೀರಜ್ ಮೊದಲಿಗರಾಗಿದ್ದರು.

ಮೇ 6 ರಂದು ದೋಹಾದಲ್ಲಿ ನಡೆದ ಮೊದಲ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 88.67 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ನೀರಜ್ 1455 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಗ್ರನೆಡಾದ ಆಂಡರ್​​​ಸನ್ ಪೀಟರ್ಸ್ 1433 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಸೀಮಿತರಾದರು. ಇನ್ನು ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಶ್ 1416 ಅಂಕಗಳೊಂದಿಗೆ ಮೂರನೇ ಪಡೆದುಕೊಂಡರು, ಜರ್ಮನಿಯ ಜೂಲಿಯನ್ ವೆಬ್ಬರ್ 1385 ಪಡೆದು ನಾಲ್ಕನೇ ಸ್ಥಾನ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ 1306 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Virat Kohli : ʼಧನ್ಯವಾದಗಳು ಬೆಂಗಳೂರುʼ.. ಫ್ಯಾನ್ಸ್‌ಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ..!

ನೀರಜ್ ಈ ಬಾರಿಯೂ 90 ಮೀಟರ್ ಗುರಿಯನ್ನು ತಲುಪಲು ವಿಫಲರಾಗಿದ್ದಾರೆ. ಇನ್ನು 2021ರ ಟೋಕಿಯೊ ಒಲಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ 87.58 ಮೀಟರ್ಸ್‌ ಜಾವೆಲಿನ್‌ ಎಸೆದು ಚಿನ್ನ ಗೆದ್ದಿದ್ದರು. ಜಾಕೂಬ್ 86.67 ಮೀಟರ್ಸ್ ಎಸೆದು ಎರಡನೇ ಸ್ಥಾನ ಪಡೆದರು. ಮಾಜಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸನ್ 85.88 ಮೀ.ನೊಂದಿಗೆ ಮೂರನೇ ಸ್ಥಾನದಲ್ಲಿದ್ದರು. ಈ ಸೀಸನ್‌ ಎರಡನೇ ಡೈಮಂಡ್ ಲೀಗ್ ಪಂದ್ಯ ಇದೇ ತಿಂಗಳ 28 ರಂದು ಮೊರಾಕೊದಲ್ಲಿ ನಡೆಯಲಿದೆ.

ಅಲ್ಲದೆ, ಮುಂದಿನ ತಿಂಗಳು ಅಂದ್ರೆ, ಜೂನ್ 4ರಂದು ನೆದರ್‌ಲೆಂಡ್ಸ್‌ನ ಹೆಂಗೆಲೋದಲ್ಲಿ ನಡೆಯಲಿರುವ ಫ್ಯಾನಿ ಬ್ಲಾಂಕರ್ಸ್-ಕೋಯೆನ್ ಗೇಮ್ಸ್‌ನಲ್ಲಿ ನೀರಜ್‌ ಪಾಲ್ಗೊಳ್ಳಲಿದ್ದಾರೆ. ತದನಂತರ ಜೂನ್ 13 ರಂದು ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಭಾಗಿಯಾಗಲಿದ್ದಾರೆ.

ಅಂಕಗಳು ಈ ರೀತಿ ಇವೆ.

  • ನೀರಜ್ ಚೋಪ್ರಾ (ಭಾರತ) - 1,455 ಅಂಕಗಳು (88.67 ಮೀ)
  • ಆಂಡರ್ಸನ್ ಪೀಟರ್ಸ್ (ಗ್ರೆನಡಾ) - 1,433 ಅಂಕಗಳು
  • ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್) - 1,416 ಅಂಕಗಳು
  • ಜೂಲಿಯನ್ ವೆಬ್ಬರ್ (ಜರ್ಮನಿ) - 1,385 ಅಂಕಗಳು
  • ರ್ಶಾದ್ ನದೀಮ್ (ಪಾಕಿಸ್ತಾನ) - 1,306 ಅಂಕಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News