ತರಬೇತಿ ಕೊರತೆಯಿಂದ 2021 ರ ಸೀಸನ್ ಕೊನೆಗೊಳಿಸಿದ ನೀರಜ್ ಚೋಪ್ರಾ

ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಿಂದ ಮರಳಿದ ನಂತರ ತರಬೇತಿಯ ಕೊರತೆಯಿಂದಾಗಿ ತನ್ನ 2021 ರ ವೃತ್ತಿಪರ ಋತುವನ್ನು ಕೊನೆಗೊಳಿಸಿದರು.

Written by - Zee Kannada News Desk | Last Updated : Aug 26, 2021, 11:21 PM IST
  • ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಿಂದ ಮರಳಿದ ನಂತರ ತರಬೇತಿಯ ಕೊರತೆಯಿಂದಾಗಿ ತನ್ನ 2021 ರ ವೃತ್ತಿಪರ ಋತುವನ್ನು ಕೊನೆಗೊಳಿಸಿದರು.
  • "ಹೆಚ್ಚಿನ ಪ್ರಯಾಣದ ವೇಳಾಪಟ್ಟಿ ಮತ್ತು ಅನಾರೋಗ್ಯದ ಕಾರಣದಿಂದಾಗಿ ಟೋಕಿಯೊದಿಂದ ನಾನು ತರಬೇತಿಯನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ, ನನ್ನ ತಂಡದೊಂದಿಗೆ, ನನ್ನ 2021 ರ ಸ್ಪರ್ಧೆಯ ಋತುವಿನಲ್ಲಿ ಬಿಡುವು ತೆಗೆದುಕೊಳ್ಳಲು ನಿರ್ಧಿಸಿದ್ದೇನೆ,
ತರಬೇತಿ ಕೊರತೆಯಿಂದ 2021 ರ ಸೀಸನ್ ಕೊನೆಗೊಳಿಸಿದ ನೀರಜ್ ಚೋಪ್ರಾ title=
Photo Courtesy: Reuters

ನವದೆಹಲಿ: ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಿಂದ ಮರಳಿದ ನಂತರ ತರಬೇತಿಯ ಕೊರತೆಯಿಂದಾಗಿ ತನ್ನ 2021 ರ ವೃತ್ತಿಪರ ಋತುವನ್ನು ಕೊನೆಗೊಳಿಸಿದರು.

"ಹೆಚ್ಚಿನ ಪ್ರಯಾಣದ ವೇಳಾಪಟ್ಟಿ ಮತ್ತು ಅನಾರೋಗ್ಯದ ಕಾರಣದಿಂದಾಗಿ ಟೋಕಿಯೊದಿಂದ ಬಂದಾಗಿನಿಂದಲೂ ನಾನು ತರಬೇತಿಯನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ, ನನ್ನ ತಂಡದೊಂದಿಗೆ, ನನ್ನ 2021 ರ ಸ್ಪರ್ಧೆಯ ಋತುವಿನಲ್ಲಿ ಬಿಡುವು ತೆಗೆದುಕೊಳ್ಳಲು ನಿರ್ಧಿಸಿದ್ದೇನೆ, ಆ ಮೂಲಕ ಮತ್ತೆ ರಿಚಾರ್ಜ್ ಆಗಿ ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಒಳಗೊಂಡ 2022 ರ ಕ್ಯಾಲೆಂಡರ್‌ ನಲ್ಲಿ ಮರಳಿ ಬರುತ್ತೇನೆ"ಎಂದು ನೀರಜ್ ಚೋಪ್ರಾ (Neeraj Chopra) ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ತೀವ್ರ ಜ್ವರ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಆಸ್ಪತ್ರೆಗೆ ದಾಖಲು..!

ಟೋಕಿಯೊ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.ಭಾರತಕ್ಕೆ ಮರಳಿದ ನಂತರ ಬಿಡುವಿಲ್ಲದ ಸತತ ಅಭಿನಂದನಾ ಸಮಾರಂಭಗಳು ಮತ್ತು ಮಾಧ್ಯಮ ಸಂದರ್ಶನಗಳಿಂದ ನೀರಜ್ ಅವರು ಡೈಮಂಡ್ ಲೀಗ್ ಪಂದ್ಯಾವಳಿಯನ್ನು ತಪ್ಪಿಸಿಕೊಂಡರು ಏಕೆಂದರೆ ಅವರು ನಿರಂತರ ಕಾರ್ಯಕ್ರಮಗಳಿಂದಾಗಿ ತರಬೇತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Tokyo Olympics 2020: ಪದಕ ಗೆದ್ದ ಕ್ರೀಡಾಪಟುಗಳಿಗೆ ಕೋಟಿ ಕೋಟಿ, ಯಾರಿಗೆ ಎಷ್ಟು ಬಹುಮಾನ ಗೊತ್ತಾ..?

"ಒಲಿಂಪಿಕ್ ಯಶಸ್ಸಿನ ನಂತರ ಗಮನ ಹರಿಸುವುದು ನಿಜಕ್ಕೂ ಮುಖ್ಯವಾಗಿದೆ, ಆದರೆ ತಿಂಗಳ ಕೊನೆಯಲ್ಲಿ ಒಂದು ಡೈಮಂಡ್ ಲೀಗ್ ಇದೆ. ನಾನು ಅದರಲ್ಲಿ ಭಾಗವಹಿಸಲು ಯೋಜಿಸಿದ್ದೆ, ಆದರೆ ನಾನು ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದಿರುಗಿದ ನಂತರ ನನ್ನ ತರಬೇತಿ ಸಂಪೂರ್ಣವಾಗಿ ನಿಂತುಹೋಯಿತು" ಎಂದು ನೀರಜ್ ಸಂದರ್ಶನವೊಂದರಲ್ಲಿ ತಿಳಿಸಿದರು.

"ನನ್ನ ಫಿಟ್‌ನೆಸ್ ಈಗ ಇಲ್ಲ ಎಂದು ನನಗೆ ಅನಿಸುತ್ತದೆ. ನಾನು ಸರಿಯಾಗಿ ಸ್ಪರ್ಧಿಸಲು ಸಾಧ್ಯವಿಲ್ಲ.ಅದಕ್ಕಾಗಿಯೇ ನಾನು ಈವೆಂಟ್ ಅನ್ನು ಬಿಡಲು ನಿರ್ಧರಿಸಿದೆ. ನಾನು ಕನಿಷ್ಠ ಎರಡು-ಮೂರು ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಯೋಜಿಸಿದ್ದೆ.ಭಾರತೀಯ ಕ್ರೀಡೆಯಲ್ಲಿ ಈ ವಿಷಯಗಳು ಬದಲಾಗಬೇಕು. ಇತರ ಎಲ್ಲಾ ಒಲಿಂಪಿಕ್ ಚಾಂಪಿಯನ್‌ಗಳು ಡೈಮಂಡ್ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.ಅವರ ಸೀಸನ್ ಮುಂದುವರಿದಿದೆ" ಎಂದರು.

ಇದನ್ನೂ ಓದಿ:Golden Boy: ‘ಚಿನ್ನ’ದ ಹುಡುಗನಿಗಾಗಿ ಬಂಪರ್ ಆಫರ್ ನೀಡಿದ ಪೆಟ್ರೋಲ್ ಬಂಕ್..!

"ನಾವು ಒಂದು ಚಿನ್ನದ ಪದಕದಿಂದ ತೃಪ್ತರಾಗಲು ಸಾಧ್ಯವಿಲ್ಲ. ನಾವು ಜಾಗತಿಕ ಮಟ್ಟದಲ್ಲಿ ಯೋಚಿಸಬೇಕು.ಡೈಮಂಡ್ ಲೀಗ್‌ಗಳಂತಹ ಜಾಗತಿಕ ಕಾರ್ಯಕ್ರಮಗಳಲ್ಲಿ ನಾವು ನಿರಂತರವಾಗಿ ಪ್ರದರ್ಶನ ನೀಡಬೇಕಾಗಿದೆ."ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News