Nepal Team announced for World Cup 2023: ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ನ ಆಯ್ಕೆ ಸಮಿತಿಯು ಜೂನ್ 18 ರಂದು ಪ್ರಾರಂಭವಾಗುವ 2023 ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯಕ್ಕಾಗಿ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿ ಜಿಂಬಾಬ್ವೆ ಆತಿಥ್ಯದಲ್ಲಿ ನಡೆಯಲಿದೆ. ರೋಹಿತ್ ಪೌಡೆಲ್ ತಂಡದ ನಾಯಕರಾಗಿದ್ದಾರೆ. ನೇಪಾಳ ಆಡಿರುವ ತನ್ನ ಕೊನೆಯ 18 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋಲುಕಂಡಿದೆ. ಈ ಮೂಲಕ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಮತ್ತು ಏಷ್ಯಾ ಕಪ್ ಗೆ ಅರ್ಹತೆ ಪಡೆದಿದೆ.
ಇದನ್ನೂ ಓದಿ: WTC Finalಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್ ಅಬ್ಬರ: ಆಸೀಸ್ ಪಡೆಗೆ ದುಃಸ್ವಪ್ನವಾಗುವುದು ಖಂಡಿತ!
ಅರ್ಹತಾ ಸುತ್ತಿನಲ್ಲಿ ಹತ್ತು ತಂಡಗಳು ಇರುತ್ತವೆ. ಗ್ರೂಪ್ ಎ ವೆಸ್ಟ್ ಇಂಡೀಸ್, ಜಿಂಬಾಬ್ವೆ, ನೆದರ್ಲ್ಯಾಂಡ್ಸ್, ನೇಪಾಳ ಮತ್ತು ಯು ಎಸ್ ಎ ಗಳನ್ನು ಒಳಗೊಂಡಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್, ಓಮನ್ ಮತ್ತು ಯುಎಇ ತಂಡಗಳಿವೆ. ಈ ಎಲ್ಲಾ ತಂಡಗಳು ಭಾರತದಲ್ಲಿ ನಡೆಯಲಿರುವ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಕೊನೆಯ ಎರಡು ಸ್ಥಾನಗಳಿಗಾಗಿ ಸ್ಪರ್ಧಿಸಲಿವೆ. ಇತ್ತೀಚಿನ ದಿನಗಳಲ್ಲಿ ನೇಪಾಳದ ತಂಡವು ತೋರಿದ ವಿಭಿನ್ನ ರೀತಿಯ ಕ್ರಿಕೆಟ್ ಕಂಡರೆ ಎಂಥವರಿಗೂ ಶಾಕ್ ಆಗಬಹುದು. ಇದೀಗ ನೇಪಾಳ ತಂಡ ಅಕ್ಟೋಬರ್-ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ICC ODI ವಿಶ್ವಕಪ್ 2023 ಭಾರತದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಆತಿಥೇಯ ಭಾರತ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿದೆ. ಮತ್ತೊಂದೆಡೆ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2023 ರ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಇನ್ನೂ ಎರಡು ತಂಡಗಳು ಅರ್ಹತೆ ಪಡೆಯಬೇಕಿದೆ. ಜೂನ್ 18 ರಂದು 10 ತಂಡಗಳ ನಡುವೆ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ ನಡೆಯಲಿದೆ. ಈ ಪೈಕಿ ಎರಡು ತಂಡಗಳು 2023ರ ODI ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.
ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಸಿಕ್ಕಾಯ್ತು ಧೋನಿಯಂತಹ ‘ಸ್ಮಾರ್ಟ್ ಕ್ಯಾಪ್ಟನ್’: ಈ ಆಲ್ ರೌಂಡರ್ ಹೆಸರೇಳಿದ ಗವಾಸ್ಕರ್!
ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ನೇಪಾಳ ತಂಡ:
ಕುಶಾಲ್ ಭುರ್ಟೈಲ್, ಆಸಿಫ್ ಶೇಖ್ (ವಿ ಕೀ), ಜ್ಞಾನೇಂದ್ರ ಮಲ್ಲ, ರೋಹಿತ್ ಪೌಡೆಲ್ (ಕ್ಯಾ), ಕುಶಾಲ್ ಮಲ್ಲ, ಆರಿಫ್ ಶೇಖ್, ದೀಪೇಂದರ್ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಭೀಮ್ ಸರ್ಕಿ, ಲಲಿತ್ ರಾಜವಂಶಿ, ಪ್ರತೀಶ್ ಜೆಸಿ, ಅರ್ಜುನ್ ಸೌದ್ (ವಿಕೆಟ್ ಕೀಪರ್), ಕಿಶೋರ್ ಮಹ್ತೊ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.