1st T20I:ಅಬ್ಬರಿಸಿದ ಟಿಮ್ ಸೀಫರ್ಟ್, ಭಾರತಕ್ಕೆ 80 ರನ್ ಗಳ ಹೀನಾಯ ಸೋಲು

ವೆಲ್ಲಿ೦ಗ್ಟನ್ ನಲ್ಲಿರುವ ವೆಷ್ಟಪ್ಯಾಕ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ದ ಹೀನಾಯ ಸೋಲನ್ನು ಅನುಭಿವಿಸಿದೆ.

Last Updated : Feb 6, 2019, 03:58 PM IST
1st T20I:ಅಬ್ಬರಿಸಿದ ಟಿಮ್ ಸೀಫರ್ಟ್, ಭಾರತಕ್ಕೆ 80 ರನ್ ಗಳ ಹೀನಾಯ ಸೋಲು  title=

ನವದೆಹಲಿ: ವೆಲ್ಲಿ೦ಗ್ಟನ್ ನಲ್ಲಿರುವ ವೆಷ್ಟಪ್ಯಾಕ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ದ ಹೀನಾಯ ಸೋಲನ್ನು ಅನುಭಿವಿಸಿದೆ.

ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರು.ಇದಾದ ನಂತರ ಬ್ಯಾಟಿಂಗ್ ಆರಂಭಿಸಿದ ಕೀವಿಸ್ ತಂಡವು ಟಿಮ್ ಸಿಫರ್ಟ್ ಅವರು ಕೇವಲ 43 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಏಳು ಬೌಂಡರಿಗಳೊಂದಿದೆ 84 ರನ್ ಗಳಿಸಿದರು.ನಂತರ ಬಂದಂತಹ ಕಾಲಿನ್ ಮನ್ರೋ 34 ಹಾಗೂ ಕೆನ್ ವಿಲಿಯಮ್ಸನ್ 34 ರನ್ ಗಳಿಸುವ ಮೂಲಕ ನ್ಯೂಜೆಲೆಂಡ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. 

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು ಆರಂಭದಲ್ಲಿ ಗೆಲ್ಲುವ ಆಸೆ ಮೂಡಿಸಿತ್ತಾದರು ಕೂಡ ಕೊನೆಗೆ ತಂಡವು 18 ರನ್ ಗಲಾಗಿದ್ದಾಗಿ ಮಹತ್ವದ ರೋಹಿತ್ ಶರ್ಮಾ ವಿಕೆಟ್ ಕಳೆದು ಕೊಂಡಿತು.ಇಂತಹ ಬೃಹತ್ ಮೊತ್ತ ಬೆನ್ನತ್ತಿದ ಭಾರತದ ಪರ ಧೋನಿ 39 ರನ್ ಗಳಿಸಿದ್ದು ಅಧಿಕವಾಗಿತ್ತು. ಭಾರತ  ತಂಡವು 19.2 ಓವರ್ ಗಳಲ್ಲಿ 139 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.ಇನ್ನು ನ್ಯೂಜೆಲೆಂಡ್ ತಂಡದ ಪರ ಟಿಮ್ ಸೌಥೀ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತಕ್ಕೆ ಮಾರಕವಾಗಿ ಪರಿಣಿಮಿಸಿದರು. 

Trending News