ನವದೆಹಲಿ: ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 22 ರನ್ ಗಳ ಸೋಲನ್ನು ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 273 ಗಳಿಗೆ ಕಟ್ಟಿ ಹಾಕಿತು. ನ್ಯೂಜಿಲೆಂಡ್ ತಂಡದ ಪರವಾಗಿ ಮಾರ್ಟಿನ್ ಗುಪ್ತಿಲ್ 79 ಹಾಗೂ ರಾಸ್ ಟೇಲರ್ 73 ರನ್ ಗಳಿಸಿದರು. ಭಾರತ ತಂಡದ ಪರವಾಗಿ ಯಜುವೆಂದ್ರ ಚಹಾಲ್ ಅವರು ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ಗಮನ ಸೆಳೆದರು.
💪#NZvIND pic.twitter.com/UrvDbMjTu0
— ICC (@ICC) February 8, 2020
274 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ ತಂಡವು 48.3 ಓವರ್ ಗಳಲ್ಲಿ 251 ರನ್ ಗಳಿಗೆ ಸರ್ವಪತನವನ್ನು ಕಂಡಿತು. ಭಾರತ ತಂಡದ ಪರವಾಗಿ ಶ್ರೇಯಸ್ ಅಯ್ಯರ್ 52,ರವೀಂದ್ರ ಜಡೇಜಾ 55 ಹಾಗೂ ನವದೀಪ್ ಸೈನಿ 45 ರನ್ ಗಳ ಮೂಲಕ ಗೆಲುವಿನ ದಡಕ್ಕೆ ತಂದಿದ್ದಾದರೂ ಕೂಡ ಕೊನೆಯಲ್ಲಿ ರವಿಂದ್ರ ಜಡೇಜಾ ವಿಕೆಟ್ ಒಪ್ಪಿಸುವ ಮೂಲಕ ಪಂದ್ಯವು ಕೀವಿಸ್ ಕೈ ಸೇರಿತು.