India Open 2023: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಮೊದಲಿನಿಂದಲೂ 'ಫೈಟರ್' ಆಗಿದ್ದು, ಮುಂದೆಯೂ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ಟ್ ಅವರನ್ನು 21-17, 12-21, 21-19 ಸೆಟ್‌ಗಳಿಂದ ಸೋಲಿಸಿದರು. ಸದ್ಯ ನೆಹ್ವಾಲ್ ಅವರು ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಸೈನಾ ನೆಹ್ವಾಲ್, “ನಾನು ಮೊದಲಿನಿಂದಲೂ ಹೋರಾಟಗಾರ್ತಿ. ನಾನು ಸವಾಲು ಇಷ್ಟಪಡುತ್ತೇನೆ. ನಿರಂತರವಾಗಿ ಸೋತಾಗ ಕೆಲವೊಮ್ಮೆ ನನ್ನ ಮೆದುಳು ಕೂಡ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇಂದು ನಾನು ಮ್ಯಾಚ್ ಪಾಯಿಂಟ್ ಬಗ್ಗೆ ಯೋಚಿಸಲಿಲ್ಲ. ಕಳೆದ ಕೆಲವು ಪಂದ್ಯಗಳಲ್ಲಿ, ಪಂದ್ಯದ ಫಲಿತಾಂಶವನ್ನು ನನ್ನ ಪರವಾಗಿ ಮಾಡಲು ಸಾಧ್ಯವಾಗದ ಕಾರಣ ನಾನು ಈ ಬಗ್ಗೆ ಉದ್ವಿಗ್ನನಾಗಿದ್ದೆ” ಎಂದು ಹೇಳಿದ್ದಾರೆ.
ಸೈನಾ ನೆಹ್ವಾಲ್ ಮಾತನ್ನು ಮುಂದುವರೆಸಿ ”ಇಂದಿಗೂ ಆತ್ಮವಿಶ್ವಾಸದ ಕೊರತೆ ಇತ್ತು. ಆದರೆ ಮೊಣಕಾಲಿನ ಯಾವುದೇ ರೀತಿಯ ನೋವಿಲ್ಲದೆ ಆಡಿದ್ದು ಖುಷಿ ತಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಸಾಕಷ್ಟು ಸುಧಾರಿಸಿದ್ದೇನೆ. ನಾನು ನನ್ನ ತ್ರಾಣ ಮತ್ತು ಆಟದ ಮೇಲೆ ಕೆಲಸ ಮಾಡಿದ್ದೇನೆ ಮತ್ತು ಇಂದು ಎಲ್ಲವೂ ಸರಿಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ICC Test ranking: ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶುಭ ಸುದ್ದಿ: ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್-1 ಸ್ಥಾನ!
ಭಾರತಕ್ಕಾಗಿ ಹಲವು ಪ್ರಶಸ್ತಿಗಳನ್ನು ಗೆದ್ದ ಸೈನಾ:
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಅದೇ ಸಮಯದಲ್ಲಿ, ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅವರು ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮಾಜಿ ಆಟಗಾರ್ತಿಯಾಗಿದ್ದಾರೆ. ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿಯೂ ಹೌದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.