IPL ಪ್ಲೇ ಆಫ್‌ ಪಂದ್ಯಗಳ ಅಧಿಕೃತ ವೇಳಾಪಟ್ಟಿ ಪ್ರಕಟ: ಸಿಹಿ ಸುದ್ದಿ ಕೊಟ್ಟ ಬಿಸಿಸಿಐ.!

IPL 2022: ಕೊರೊನಾ ಕಂಟಕದ ನಡುವೆ 2022ರ IPL ಮ್ಯಾಚ್‌ಗಳು ಮಹಾರಾಷ್ಟ್ರದ ವಿವಿಧ ಸ್ಟೇಡಿಯಂಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ.  ಲೀಗ್ ಪಂದ್ಯಗಳು ಮೇ 22ರಂದು ಮುಕ್ತಾಯಗೊಳ್ಳುತ್ತವೆ. ನಂತರ ಒಂದು ದಿನ ವಿಶ್ರಾಂತಿ ನಂತರ ಮೇ 24ರಿಂದ ಪ್ಲೇ ಆಫ್‌ ಮ್ಯಾಚ್‌ಗಳು ಪ್ರಾರಂಭವಾಗುತ್ತವೆ.

Written by - Zee Kannada News Desk | Last Updated : May 4, 2022, 03:12 PM IST
  • IPL 2022ರ ಮ್ಯಾಚ್‌ಗಳು ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ
  • ಲೀಗ್ ಪಂದ್ಯಗಳು ಮೇ 22ರಂದು ಮುಕ್ತಾಯಗೊಳ್ಳುತ್ತವೆ
  • ಮೇ 24ರಿಂದ ಪ್ಲೇ ಆಫ್‌ ಮ್ಯಾಚ್‌ಗಳು ಪ್ರಾರಂಭವಾಗುತ್ತವೆ
IPL ಪ್ಲೇ ಆಫ್‌ ಪಂದ್ಯಗಳ ಅಧಿಕೃತ  ವೇಳಾಪಟ್ಟಿ ಪ್ರಕಟ: ಸಿಹಿ ಸುದ್ದಿ ಕೊಟ್ಟ ಬಿಸಿಸಿಐ.! title=
ಐಪಿಎಲ್‌

IPL 2022: ಕೊರೊನಾ ಕಂಟಕದ ನಡುವೆ 2022ರ IPL ಮ್ಯಾಚ್‌ಗಳು ಮಹಾರಾಷ್ಟ್ರದ ವಿವಿಧ ಸ್ಟೇಡಿಯಂಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ.  ಲೀಗ್ ಪಂದ್ಯಗಳು ಮೇ 22ರಂದು ಮುಕ್ತಾಯಗೊಳ್ಳುತ್ತವೆ. ನಂತರ ಒಂದು ದಿನ ವಿಶ್ರಾಂತಿ ನಂತರ ಮೇ 24ರಿಂದ ಪ್ಲೇ ಆಫ್‌ ಮ್ಯಾಚ್‌ಗಳು ಪ್ರಾರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಪ್ಲೇ ಆಫ್‌ ಮ್ಯಾಚ್‌ಗಳ ಅಧಿಕೃತ  ವೇಳಾಪಟ್ಟಿ ಪ್ರಕಟಿಸಿದೆ. ಜೊತೆಗೆ ಕ್ರೀಡಾ ಅಭಿಮಾನಿಗಳಿಗೂ ಬಿಸಿಸಿಐ ಸಿಹಿ ಸುದ್ದಿ ನೀಡಿದೆ.

ಇದನ್ನೂ ಓದಿ: CSK vs RCB: ಇಂದು ಬೆಂಗಳೂರು-ಚೆನ್ನೈ ಹೈವೋಲ್ಟೇಜ್‌ ಪಂದ್ಯ: ಇತ್ತಂಡಗಳಿಗೂ ಗೆಲುವು ಅವಶ್ಯಕ

IPL ಹಣಾಹಣಿಯ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಹಾಗೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು‌, ಪಂದ್ಯಾಟ ನೋಡಲು ಬಿಸಿಸಿಐ 100% ಸೀಟು ಭರ್ತಿಗೆ ಅವಕಾಶ ಕೂಡ ನೀಡಿದೆ. ಕೊರೊನಾ 4ನೇ ಅಲೆ ಆತಂಕದ ನಡುವೆ ಪ್ರೇಕ್ಷಕರು ಕ್ರೀಡಾಂಗಣ ಪ್ರವೇಶಕ್ಕೆ 100% ಅವಕಾಶ ನೀಡಿರುವುದು ಕ್ರಿಕೆಟ್‌ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.

ಪ್ಲೇ ಆಫ್‌ನ ಮೊದಲ ಕ್ವಾಲಿಫೈಯರ್ ಪಂದ್ಯ ಮೇ 24ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ನೇರವಾಗಿ ಫೈನಲ್‌ಗೆ ಎಂಟ್ರಿ ನೀಡಲಿದೆ. ನಂತರ 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಮೇ 25ರಂದು ಕೋಲ್ಕತ್ತಾದಲ್ಲೇ ಪಂದ್ಯ ಆಡಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಎರಡನೇ ಕ್ವಾಲಿಫೈಯರ್‌ ಪಂದ್ಯಕ್ಕೆ ಎಂಟ್ರಿ ಪಡೆಯಲಿದೆ. ಮೇ 27ರಂದು ಎಲಿಮಿನೇಟರ್ ವಿಜೇತ vs ಕ್ವಾಲಿಫೈಯರ್ 1ರ ಸೋತವರ ನಡುವೆ ಕ್ವಾಲಿಫೈಯರ್ 2 ಮ್ಯಾಚ್‌ ನಡೆಯಲಿದೆ.

  • ಮೇ 24: ಕ್ವಾಲಿಫೈಯರ್‌ 1: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ 
  • ಮೇ 25: ಎಲಿಮಿನೇಟರ್‌ ಪಂದ್ಯ : ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ 
  • ಮೇ 27: ಕ್ವಾಲಿಫೈಯರ್‌ 2 : ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ
  • ಮೇ 29: IPL ಫೈನಲ್‌ ಪಂದ್ಯ : ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ

ಇದನ್ನೂ ಓದಿ: GT vs PBKS, IPL 2022: ಟೈಟಾನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್

ಇನ್ನು ಈ ವರ್ಷ ನಡೆಯಲಿರುವ ಮಹಿಳಾ ಟಿ-20 ಚಾಲೆಂಜ್‌ ಪಂದ್ಯಾವಳಿ ವೇಳಾಪಟ್ಟಿಯನ್ನೂ ಬಿಸಿಸಿಐ ಬಿಡುಗಡೆ ಮಾಡಿದೆ. ಮೇ 23, 24, 26, 28ರಂದು ಪಂದ್ಯಗಳು ನಡೆಯಲಿವೆ. ಈ ಎಲ್ಲ ಪಂದ್ಯಗಳು ಮಹಾರಾಷ್ಟ್ರದ ಪುಣೆ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News