Herschelle Gibs: ಕ್ರಿಕೆಟ್ ಲೋಕದಲ್ಲಿ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಹೊಡೆದು ದಾಖಲೆ ಬರೆದ ಆಟಗಾರರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೊಟ್ಟಮೊದಲ ಬಾರಿಗೆ ಈ ದಾಖಲೆ ಬರೆದ ಕೀರ್ತಿ ಸೌತ್ ಆಫ್ರಿಕಾ ತಂಡದ ಹರ್ಷಲ್ ಗಿಬ್ಸ್ ಗೆ ಸಲ್ಲುತ್ತದೆ. ಗಿಬ್ಸ್ ಯಾವಾಗಲೂ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಗಾಗಿ ಹೆಚ್ಚು ಚರ್ಚೆಯಲ್ಲಿರುತ್ತಿದ್ದರು. ಆದರೆ, ಇದೀಗ ತನ್ನ 49ನೇ ವಯಸ್ಸಿನಲ್ಲಿ ಈ ಆಟಗಾರ ಬೇರೊಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
49ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ
ಇತ್ತೀಚೆಗಷ್ಟೇ ಹರ್ಷಲ್ ಗಿಬ್ಸ್ ತನ್ನ 49ನೇ ವಯಸ್ಸಿನಲ್ಲಿ ವೈವಾಹಿಕ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗಿಬ್ಸ್ ಆಪ್ತ ಗೆಳತಿ ನೇಮಥ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಸುಂದರ ಛಾಯಾಚಿತ್ರಗಳನ್ನು ಇದೀಗ ಈ ಜೋಡಿ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದೆ. ಒಂದು ರೊಮ್ಯಾಂಟಿಕ್ ಪ್ರಸ್ತಾವನೆಯೊಂದಿಗೆ ಗಿಬ್ಸ್ ನೇಮಥ್ ಗೆ ತನ್ನ ಹೃದಯಾಳದ ಮಾತನ್ನು ಹೇಳಿದ್ದಾರೆ. ಚಿತ್ರಗಳಲ್ಲಿ ಗಿಬ್ಸ್-ನೇಮಥ್ ತುಂಬಾ ಖುಷಿಯಾಗಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ-ಒಂದು ಕೋಟಿ ಗಳಿಕೆ, ಊಟ-ತಿಂಡಿ-ವಾಸ್ತವ್ಯ ಉಚಿತ, ಅಷ್ಟಕ್ಕೂ ಈ ಸುಂದರಿ ಮಾಡುವ ಕೆಲಸ ಏನು ಗೊತ್ತಾ?
ಈ ಮೊದಲೂ ಗಿಬ್ಸ್ ವಿವಾಹ ಮಾಡಿಕೊಂಡಿದ್ದಾರೆ
ಇದಕ್ಕೂ ಮೊದಲು ಗಿಬ್ಸ್ 2007 ರಲ್ಲಿ ವಿವಾಹವಾಗಿದ್ದರು, ಸೆಂಟ್ ಕಿಟ್ಸ್ ನ ಐಲ್ಯಾಂಡ್ ವೊಂದರಲ್ಲಿ ಟೆನಿಲಿ ಪೊವಾಯಿ ಜೊತೆ ಗಿಬ್ಸ್ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಆದರೆ, ಅವರ ಈ ಬಂಧ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಉಭಯರು ಬೇಗನೆ ವಿವಾಹ ವಿಚ್ಛೇದನೆ ಪಡೆದುಕೊಂಡರು. ಇದಾದ ಬಳಿಕ ಗಿಬ್ಸ್ ಹಲವು ವಿವಾದಗಳಿಂದ ಸುದ್ದಿಯಲ್ಲಿದ್ದರು. ಒಂದೊಮ್ಮೆ ಫಿಕ್ಸಿಂಗ್ ಕಾರಣ ಸುದ್ದಿಯಲ್ಲಿದ್ದರೆ, ಮಗದೊಮ್ಮೆ ಕುಡಿದ ಮತ್ತಿನಲ್ಲಿ ಮೈದಾನಿಗೆ ಬ್ಯಾಟ್ ಮಾಡಲು ಇಳಿದ ಕಾರಣ ಸುದ್ದಿಯಲ್ಲಿದ್ದರು.
ಇದನ್ನೂ ಓದಿ-ಅಯ್ಯೋ ದೇವರೇ! ವಿವಾಹಕ್ಕೂ ಮುನ್ನ ಅಲ್ಲಿನ ಯುವಕರು ತಮ್ಮ ಗಂಡಸ್ತನ ಸಾಬೀತುಪಡಿಸಬೇಕಂತೆ! ಪರೀಕ್ಷೆ ಏನು ಗೊತ್ತಾ?
ವಿದಾಯದ ಬಳಿಕ ಕೋಚ್ ಹುದ್ದೆ ಅಲಂಕರಿಸಿದ ಗಿಬ್ಸ್
ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದ ಬಳಿಕ ಗಿಬ್ಸ್ ಇದೀಗ ತರಬೇತುದಾರರಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಗಿಬ್ಸ್ ಹಲವು ಟಿ20 ಲೀಗ್ ಗಳಲ್ಲಿ ತಂಡಗಳ ಹೆಡ್ ಕೋಚ್ ಸ್ಥಾನವನ್ನು ಅಲಂಕರಿಸಿದ್ದಾರೆ. ಪಾಕಿಸ್ತಾನದ ಸೂಪರ್ ಲೀಗ್ ನಲ್ಲಿ ಕರಾಚಿ ಕಿಂಗ್ಸ್ ತಂಡಕ್ಕೆ ಗಿಬ್ಸ್ ತರಬೇತುದಾರರಾಗಿದ್ದರು. 2019ರಲ್ಲಿ ಅವರು ಯೂರೊ ಟಿ20 ಸ್ಲ್ಯಾಮ್ ನಲ್ಲಿ ರೋಟರ್ಡಾಮ್ ರಾಯಿನೋ ತಂಡದ ಕೋಚ್ ಕೂಡ ಆಗಿದ್ದರು. ಲಂಕಾ ಪ್ರಿಮಿಯರ್ ಲೀಗ್ ನಲ್ಲಿ ಅವರು ಕೊಲಂಬೊ ಕಿಂಗ್ಸ್ ತಂಡಕ್ಕೂ ಕೂಡ ಆರು ತರಬೇತಿಯನ್ನು ನೀಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.