ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ರೀತಿಯ ಕೋಚ್ ಅಗತ್ಯವಿದೆ- ರಮೀಜ್ ರಾಜಾ

    

Last Updated : Jan 31, 2018, 06:11 PM IST
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ರೀತಿಯ ಕೋಚ್ ಅಗತ್ಯವಿದೆ- ರಮೀಜ್ ರಾಜಾ  title=

ಕರಾಚಿ: ಯುವ ಭಾರತೀಯ ಆಟಗಾರರ ಬೆಳವಣಿಗೆಯಲ್ಲಿ ರಾಹುಲ್ ದ್ರಾವಿಡ್ ಪಾತ್ರ ಗಮನಾರ್ಹವಾದುದು ಎಂದು  ಪಾಕಿಸ್ತಾನದ ಮಾಜಿ ಆಟಗಾರ ರಮಿಜ್ ರಾಜಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಪಾಕಿಸ್ತಾನದ ಕ್ರಿಕೆಟ್ ಬೆಳವಣಿಗೆಗೆ  ದ್ರಾವಿಡ್ ರೀತಿಯ  ಮಾರ್ಗದರ್ಶಕರು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಝಿಲೆಂಡನಲ್ಲಿ  ಐಸಿಸಿ U-19 ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಹಿನಾಯವಾಗಿ ಭಾರತದ ಕೈಯಲ್ಲಿ 203 ರನ್ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು.ಇದ್ದಕ್ಕೆ ರಮೀಜ್ ರವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.  

ಪಾಕಿಸ್ತಾನದ 1992 ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿರುವ ರಮೀಜ್ ರವರು ಭಾರತದ ಕಿರಿಯ ಆಟಗಾರರು ಒತ್ತಡದ ಸನ್ನಿವೇಶಗಳಲ್ಲಿ ಆಟವಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದೆ ಸಂದರ್ಭದಲ್ಲಿ ಯುವ ಆಟಗಾರರನ್ನು ಸಿದ್ದಪಡಿಸುವಲ್ಲಿ ಮಾಜಿ ಆಟಗಾರ ಮತ್ತು ಕಿರಿಯ ಭಾರತೀಯ ತಂಡದ ಕೋಚ್ ರಾಹುಲ್ ದ್ರಾವಿಡ್ ರವರು ಶ್ರಮವನ್ನು ಅವರು ಕೊಂಡಾಡಿದ್ದಾರೆ

Trending News