ಮುಂಬೈ: ಇಲ್ಲಿನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಆವಕಾಶ ಪಡೆದ ದೆಹಲಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳ ಸ್ಪೆರ್ಧಾತ್ಮಕ ಮೊತ್ತ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ಕೊನೆವರೆಗೂ ಹೋರಾಟ ನಡೆಸಿ ಸೋಲು ಕಾಣಬೇಕಾಯಿತು.
ಇದನ್ನೂ ಓದಿ: RCB vs CSK ಲೈವ್ ಮ್ಯಾಚ್ ವೇಳೆ ಲವ್ ಪ್ರಪೋಸ್ ಮಾಡಿದ ಹುಡುಗಿ!
ಈ ಪಂದ್ಯದ ಗೆಲುವಿನೊಂದಿಗೆ ದೆಹಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಪಂಜಾಬ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾದಂತಾಗಿದೆ.
ಸ್ಪರ್ಧಾತ್ಮಕ ಮೊತ್ತ ಗಳಿಸಿದ ದೆಹಲಿ
ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ಪರ ಆಲ್‍ರೌಂಡರ್ ಮಿಚೆಲ್ ಮಾರ್ಷ್(61) ಭರ್ಜರಿ ಅರ್ಧಶತಕ ಭಾರಿಸಿದರು. ಇನ್ನುಳಿದಂತೆ ಸರ್ಫರಾಜ್ ಖಾನ್(32), ಲಲಿತ್ ಯಾದವ್(24) ಮತ್ತು ಅಕ್ಸರ್ ಪಟೇಲ್(17) ರನ್ ಗಳಿಸಿದರು. ಪಂಜಾಬ್ ಪರ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ ವಿಕೆಟ್ ಮತ್ತು ಕಗಿಸೊ ರಬಾಡ 1 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: IPL 2022: ಅಂದೊಂದು ವೇಳೆ ಇವರ ತಾಯಿ abortion ಮಾಡಿಸಿಕೊಂಡಿದ್ದರೆ ಈ ಕ್ರಿಕೆಟಿಗ ನಮಗೆ ದೊರೆಯುತ್ತಿರಲಿಲ್ಲ
ಶಾರ್ದೂಲ್ ಠಾಕೂರ್ ಮಾರಕ ಬೌಲಿಂಗ್ ದಾಳಿ
ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ಶಾರ್ದೂಲ್ ಠಾಕೂರ್(36ಕ್ಕೆ 4 ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಪರಿಣಾಮ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಗಿ, 17 ರನ್ ಗಳಿಂದ ಸೋಲು ಕಂಡಿತು. ಪಂಜಾಬ್ ಪರ ಜಿತೇಶ್ ಶರ್ಮಾ(44), ಜಾನಿ ಬೈರ್ಸ್ಟೋವ್(28), ರಾಹುಲ್ ಚಹಾರ್(ಅಜೇಯ 25) ಮತ್ತು ಶಿಖರ್ ಧವನ್(19) ರನ್ ಗಳಿಸಿದರು. ದೆಹಲಿ ಪರ ಶಾರ್ದೂಲ್ ಠಾಕೂರ್ 4, ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 2 ಹಾಗೂ ಅನ್ರಿಚ್ ನಾರ್ಟ್ಜೆ 1 ವಿಕೆಟ್ ಕಬಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.