RCB vs RR:ಆರ್‌ಸಿಬಿ-ಆರ್‌ಆರ್‌ ಪಂದ್ಯದಲ್ಲಿ ಕಳಪೆ ಅಂಪೈರಿಂಗ್‌: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ ಅಂಪೈರಿಂಗ್‌(Cricket)ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆರ್‌ಸಿಬಿ ಮತ್ತು ಆರ್‌ಆರ್‌ ಪಂದ್ಯದ ವೇಳೆ ಪಡಿಕ್ಕಲ್‌ ಅವರ ಹೊಡೆತವನ್ನು ವಿರಾಟ್‌ ಕೊಹ್ಲಿ ಸ್ಪಷ್ಟವಾಗಿ ಹಿಡಿದಿದ್ದರೂ ಸಹ ಫೀಲ್ಡ್‌ ಅಂಪೈರ್‌ ಅನಿಲ್‌ ಚೌಧರಿ ಟಿವಿ ಅಂಪೈರ್‌ ಮೊರೆ ಹೋದರು. ಅಷ್ಟರೊಳಗೆ ಮೈದಾನ ತೊರೆದಿದ್ದ ಪಡಿಕ್ಕಲ್‌ ಅವರನ್ನು ಮೀಸಲು ಅಂಪೈರ್‌ ನಿಖಿಲ್‌ ಪಟವರ್ಧನ್‌ ವಾಪಾಸ್‌ ಕಳುಹಿಸಲು ಯತ್ನಿಸಿದ ದೃಶ್ಯವೂ ಕಂಡುಬಂತು.

Written by - Zee Kannada News Desk | Last Updated : Apr 6, 2022, 09:40 AM IST
  • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 13ನೇ ಪಂದ್ಯ
    ಆರ್‌ಸಿಬಿ-ಆರ್‌ಆರ್‌ ಪಂದ್ಯದಲ್ಲಿ ಕಂಡುಬಂದ ಕಳಪೆ ಅಂಪೈರಿಂಗ್‌
    ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
RCB vs RR:ಆರ್‌ಸಿಬಿ-ಆರ್‌ಆರ್‌ ಪಂದ್ಯದಲ್ಲಿ ಕಳಪೆ ಅಂಪೈರಿಂಗ್‌: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ title=
Poor Umpiring

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಪಿಎಲ್​ನ (IPL 2022)13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)4 ವಿಕೆಟ್​ಗಳ ಜಯ ಸಾಧಿಸಿದೆ. ಆದರೆ ಈ ಪಂದ್ಯದ ಸಂದರ್ಭದಲ್ಲಿ ಕಳಪೆ ಅಂಪೈರಿಂಗ್‌ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 

ಇದನ್ನು ಓದಿ: RR vs RCB, IPL 2022: ರಾಜಸ್ಥಾನ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ ಅಂಪೈರಿಂಗ್‌(Cricket) ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆರ್‌ಸಿಬಿ ಮತ್ತು ಆರ್‌ಆರ್‌ ಪಂದ್ಯದ ವೇಳೆ ಪಡಿಕ್ಕಲ್‌ ಅವರ ಹೊಡೆತವನ್ನು ವಿರಾಟ್‌ ಕೊಹ್ಲಿ ಸ್ಪಷ್ಟವಾಗಿ ಹಿಡಿದಿದ್ದರೂ ಸಹ ಫೀಲ್ಡ್‌ ಅಂಪೈರ್‌ ಅನಿಲ್‌ ಚೌಧರಿ ಟಿವಿ ಅಂಪೈರ್‌ ಮೊರೆ ಹೋದರು. ಅಷ್ಟರೊಳಗೆ ಮೈದಾನ ತೊರೆದಿದ್ದ ಪಡಿಕ್ಕಲ್‌ ಅವರನ್ನು ಮೀಸಲು ಅಂಪೈರ್‌ ನಿಖಿಲ್‌ ಪಟವರ್ಧನ್‌ ವಾಪಾಸ್‌ ಕಳುಹಿಸಲು ಯತ್ನಿಸಿದ ದೃಶ್ಯವೂ ಕಂಡುಬಂತು. 

ಇದನ್ನು ಓದಿ: RR vs RCB:ಬೆಂಗಳೂರಿಗೆ ರಾಯಲ್ಸ್‌ ಚಾಲೆಂಜ್..‌ ಇಂದು ನಿರ್ಮಾಣವಾಗಬಹುದು ಹತ್ತು ಹಲವು ದಾಖಲೆ!

ಅಷ್ಟೇ ಅಲ್ಲದೆ, ಆಕಾಶ್‌ ದೀಪ್‌ ಎಸೆದ ಎಸೆತವನ್ನು ಟಿವಿ ಅಂಪೈರ್‌ ನಿತಿನ್‌ ಮೆನನ್‌ ನೋ ಬಾಲ್‌ ಎಂದು ಘೋಷಿಸಿದರು. ಆದರೆ ಅವರ ಪಾದ ಕ್ರೀಸ್‌ನ ಒಳಗಡೆ ಇರುವುದು ಟಿವಿ ಮರುಪ್ರಸಾರದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಈ ಬಗ್ಗೆ ಸದ್ಯ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. 

4 ವಿಕೆಟ್‌ ಭರ್ಜರಿ ಜಯಗಳಿಸಿದ ಆರ್‌ಸಿಬಿ:  
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR)  ತಂಡಕ್ಕೆ 170 ರನ್​ಗಳ ಗುರಿ ನೀಡಿತ್ತು. ಜೋಸ್ ಬಟ್ಲರ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 169 ರನ್ ​ಗಳಿಸಿತು.
ಬಳಿಕ ಗುರಿ ಬೆನ್ನತ್ತಿ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 87 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದ ಸ್ಥಿತಿ ಎದುರಿಸಿತು. ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ಶಹಬಾಜ್ ಅಹ್ಮದ್ ಕೇವಲ 22 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದರು. ಬಿರುಸಿನ ಬ್ಯಾಟಿಂಗ್ ಮಾಡಿದ ದಿನೇಶ್‌  ಸಿಕ್ಸ್‌-ಫೋರ್‌​ಗಳ ಸುರಿಮಳೆಗೈದರು. ಇನ್ನು ಕೊನೆಯ 3 ಓವರ್​ಗಳಲ್ಲಿ ಆರ್​ಸಿಬಿಗೆ 28 ರನ್​ಗಳ ಅವಶ್ಯಕತೆಯಿತ್ತು. ಅಂತಿಮವಾಗಿ 19.1 ಓವರ್​ಗಳಲ್ಲಿ ಗುರಿ ಮುಟಟಿದ ಆರ್‌ಸಿಬಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News