RR vs RCB, IPL 2022: ಇಂದು ರಾಯಲ್ಸ್ ಗೆ 'ರಾಯಲ್' ಚಾಲೆಂಜ್..!

ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ.

Written by - Puttaraj K Alur | Last Updated : Apr 5, 2022, 04:18 PM IST
  • ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಲಿಷ್ಠ ರಾಜಸ್ಥಾನ್ ರಾಯ್ಲಸ್ ಸವಾಲು
  • ಸಂಜು ಸ್ಯಾಮ್ಸನ್ ಪಡೆ ಮೇಲೆ ಸವಾರಿ ಮಾಡುತ್ತಾ ಫಾಫ್ ಡು ಪ್ಲಸಿಸ್ ಬಳಗ?
  • ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ
RR vs RCB, IPL 2022: ಇಂದು ರಾಯಲ್ಸ್ ಗೆ 'ರಾಯಲ್' ಚಾಲೆಂಜ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್

ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ(ndian Premier League 2022)ಯ 13ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್(RR vs RCB) ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ನಡೆಯಲಿರುವ ಈ ಪಂದ್ಯ ರೋಚಕತೆಯಿಂದ ಕೂಡಿರಲಿದೆ.

ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಇಂದಿನ ಪಂದ್ಯ ಭರ್ಜರಿ ಪೈಪೋಟಿಯಿಂದ ಕೂಡಿರಲಿದೆ. ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 61 ರನ್ ಗಳಿಂದ ಗೆಲುವು ಸಾಧಿಸಿದ್ದ ರಾಜಸ್ಥಾನ್(Rajasthan Royals) 2ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‍ ತಂಡಕ್ಕೆ ಮಣ್ಣುಮುಕ್ಕಿಸಿತ್ತು. ಇದೀಗ RCB ವಿರುದ್ಧವೂ ಗೆಲುವಿನ ವಿಶ್ವಾಸದಲ್ಲಿದೆ. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ರಾಜಸ್ಥಾನ್ ಬಲಿಷ್ಠವಾಗಿದೆ.

ನಾಯಕ ಸಂಜು ಸ್ಯಾಮ್ಸನ್(Sanju Samson), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಿಯರ್, ರಿಯಾನ್ ಪರಾಗ್ ಮುಂತಾದವರು ರಾಜಸ್ಥಾನ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದು, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್ ಮುಂತಾದವರು ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಇದನ್ನೂ ಓದಿ: IPL 2022: ಸಿಎಸ್‌ಕೆ ತಂಡದ ನಿರಂತರ ಸೋಲಿಗೆ 3 ದೊಡ್ಡ ಕಾರಣಗಳು

ಇನ್ನು ಫಾಫ್ ಡು ಪ್ಲೆಸಿಸ್(Faf du Plessis) ನೇತೃತ್ವದ ಆರ್‍ಸಿಬಿ ತಂಡವು ಬ್ಯಾಟಿಂಗ್‍ನಲ್ಲಿ ಬಲಿಷ್ಠವಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಸುಧಾರಿಸಿಕೊಂಡು ಕಣಕ್ಕಿಳಿಯಬೇಕಿದೆ. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ ಆರ್‍ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದು, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‍ಗಳಿಂದ ಸೋಲು ಕಂಡಿದ್ದ ಆರ್‌ಸಿಬಿ (Royal Challengers Bangalore)2ನೇ ಪಂದ್ಯದಲ್ಲಿ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತ್ತು. ರಾಜಸ್ಥಾನ್ ವಿರುದ್ಧವೂ ಆರ್‍ಸಿಬಿ ಗೆಲುವಿನ ವಿಶ್ವಾಸದಲ್ಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಡು ಪ್ಲೆಸಿಸ್ ಪಡೆ ಬೌಲಿಂಗ್‍ನಲ್ಲಿ ಸುಧಾರಿಸಿಕೊಳ್ಳಬೇಕಿದೆ. ಮುಖ್ಯವಾಗಿ ಡೇತ್ ಓವರ್‍ಗಳಲ್ಲಿ ಬೌಲರ್‍ಗಳು ಹೆಚ್ಚಿನ ರನ್ ಬಿಟ್ಟುಕೊಡಬಾರದು. ಅದೇ ರೀತಿ ಹಳೆ ಪಂದ್ಯಗಳಲ್ಲಿ ಆದ ತಪ್ಪುಗಳು ಮರುಕಳಿಸಬಾರದು. ಗೆಲುವಿಗಾಗಿ ನಡೆಯಲಿರುವ ಭರ್ಜರಿ ಸೆಣಸಾಟದಲ್ಲಿ ಯಾರಿಗೆ ಗೆಲುವು ಸಿಗುತ್ತದೋ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2022: ಐಪಿಎಲ್‌ನಲ್ಲಿ ವಿಶ್ವದ ನಂಬರ್ 1 ಬೌಲರ್‌ನ ಪ್ರವೇಶ- ಕೆಕೆಆರ್ ತಂಡಕ್ಕೆ ದೊಡ್ಡ ಅಸ್ತ್ರ

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಚಾಮ್ ವಿ ಮಿಲಿಂದ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್, ಜೇಮ್ಸ್ ನೀಶಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್‌, ಕೆ.ಸಿ.ಕಾರಿಯಪ್ಪ, ಡೇರಿಲ್ ಮಿಚೆಲ್, ಓಬೇದ್ ಮೆಕಾಯ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ನಾಥನ್ ಕೌಲ್ಟರ್-ನೈಲ್, ಧ್ರುವ್ ಜುರೆಲ್, ಶುಭಂ ಗರ್ವಾಲ್

ಐಪಿಎಲ್‌ ಪಂದ್ಯ: 12

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್

ದಿನಾಂಕ: ಏಪ್ರಿಲ್ 5, ಮಂಗಳವಾರ

ಸ್ಥಳ: ಮುಂಬೈನ ವಾಂಖೆಡೆ ಕ್ರೀಡಾಂಗಣ

ಸಮಯ: ಸಂಜೆ 7.30ಕ್ಕೆ

===============================================================================

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News