Pro Kabaddi League 10 : ಕಬಡ್ಡಿ ಪ್ರೇಮಿಗಳಿಗೆ ಸಿಹಿ ಸುದ್ದಿ..! ಪ್ರೊ ಕಬಡ್ಡಿ ಲೀಗ್‌ 10ರ ವೇಳಾಪಟ್ಟಿ ಪ್ರಕಟ

Pro Kabaddi League 2023 : ಪ್ರೊ ಕಬಡ್ಡಿ ಲೀಗ್‌ 10ರ ವೇಳಾಪಟ್ಟಿ ಪ್ರಕಟವಾಗಿದೆ. ಪ್ರೊ ಕಬಡ್ಡಿ ಲೀಗ್‌ನ ಆಯೋಜಕ ಸಂಸ್ಥೆ ಮಶಾಲ್‌ ಸ್ಪೋರ್ಟ್ಸ್ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

Written by - VISHWANATH HARIHARA | Edited by - Krishna N K | Last Updated : Oct 21, 2023, 05:46 PM IST
  • ಪ್ರೊ ಕಬಡ್ಡಿ ಲೀಗ್‌ 10ರ ವೇಳಾಪಟ್ಟಿ ಪ್ರಕಟ
  • ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಆರಂಭ
  • ಫ್ರಾಂಚೈಸಿಯ ತವರು ನಗರಗಳಲ್ಲಿ ಪಂದ್ಯಗಳು ನಡೆಯವಲಿವೆ
Pro Kabaddi League 10 : ಕಬಡ್ಡಿ ಪ್ರೇಮಿಗಳಿಗೆ ಸಿಹಿ ಸುದ್ದಿ..! ಪ್ರೊ ಕಬಡ್ಡಿ ಲೀಗ್‌ 10ರ ವೇಳಾಪಟ್ಟಿ ಪ್ರಕಟ title=
Pro Kabaddi League Season 10

Pro Kabaddi League Season 10: ಪ್ರೊ ಕಬಡ್ಡಿ ಲೀಗ್‌ನ ಆಯೋಜಕ ಸಂಸ್ಥೆ ಮಶಾಲ್‌ ಸ್ಪೋರ್ಟ್ಸ್ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರೊ ಕಬಡ್ಡಿ ಲೀಗ್‌ 2023 ರ ಡಿಸೆಂಬರ್‌ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ನಂತರ ಫ್ರಾಂಚೈಸಿಯ ತವರು ನಗರಗಳಲ್ಲಿ ಪಂದ್ಯಗಳು ನಡೆಯವಲಿವೆ. ಲೀಗ್‌ ಹಂತವು 2023 ಡಿಸೆಂಬರ್‌ 2 ರಿಂದ 2024ರ ಫೆಬ್ರವರಿ 21 ರವರೆಗೆ ನಡೆಯಲಿದೆ. ಪ್ಲೇಆಫ್‌ಗಳ ವೇಳಾ ಪಟ್ಟಿ ನಂತರ ಪ್ರಕಟಗೊಳ್ಳಲಿದೆ.

ಅಹಮದಾಬಾದ್‌ ನಲ್ಲಿ 2023ರ ಡಿಸೆಂಬರ್‌ 2ರಿಂದ 7ರವರೆಗೆ ಪಂದ್ಯಗಳು ನಡೆಯಲಿದೆ. ನಂತರ ಬೆಂಗಳೂರು (8-13 ಡಿಸೆಂಬರ್‌ 2023), ಪುಣೆ (15-20 ಡಿಸೆಂಬರ್‌ 2023), ಚೆನ್ನೈ (22-27 ಡಿಸೆಂಬರ್‌ 2023), ನೋಯ್ಡಾ (29 ಡಿಸೆಂಬರ್‌ 2023 - 3 ಜನವರಿ 2024), ಮುಂಬೈ (5-10 ಜನವರಿ 2024), ಜೈಪುರ (12-17 ಜನವರಿ 2024), ಹೈದರಾಬಾದ್‌ (19-24 ಜನವರಿ 2024), ಪಟನಾ (26-31 ಜನವರಿ 2024), ಡೆಲ್ಲಿ(2-7 ಫೆಬ್ರವರಿ 2024), ಕೋಲ್ಕೊತಾ (9-14 ಫೆಬ್ರವರಿ 2024) ಮತ್ತು ಪಂಚಕುಲ (16-21 ಫೆಬ್ರವರಿ 2024) ಗುಜರಾತ್‌ ಜಯಂಟ್ಸ್‌ ಹಾಗೂ ತೆಲುಗು ಟೈಟನ್ಸ್‌ ತಂಡಗಳು ಮುಖಾಮುಖಿಯೊಂದಿಗೆ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ನಡೆಯಲಿದೆ. ಪವನ್‌ ಶೆರಾವತ್‌, ಫಜೆಲ್‌ ಅತ್ರಾಚಲಿ, ಅಜಿಂಕ್ಯ ಪವಾರ್‌ ಮತ್ತು ನವೀನ್‌ ಕುಮಾರ್‌ ಅವರಂತಹ ಸ್ಟಾರ್‌ಗಳು ವಾರಾಂತ್ಯದ ಹೈವೋಲ್ಟೇಜ್‌ ಪಂದ್ಯಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:  4 ರನ್’ಗೆ 2 ವಿಕೆಟ್ ಕಿತ್ತ ಕಿಲಾಡಿ! ಮಾವನ ದಾಖಲೆಯನ್ನೇ ಮುರಿದು ವಿಶ್ವದಾಖಲೆ ಬರೆದ ಸ್ಟಾರ್ ವೇಗಿ

ಪಿಕೆಎಲ್‌ 10ನೇ ಆವೃತ್ತಿಯ ವೇಳಾಪಟ್ಟಿಯ (Pro Kabaddi League Season 10) ಬಗ್ಗೆ ಮಾಹಿತಿ ನೀಡಿರುವ ಮಶಾಲ್‌ ಸ್ಪೋರ್ಟ್ಸ್ ಮತ್ತು ಪ್ರೊ ಕಬಡ್ಡಿ ಲೀಗ್‌ನ ಲೀಗ್‌ ಮುಖ್ಯಸ್ಥ ಅನುಪಮ್‌ ಗೋಸ್ವಾಮಿ, ‘‘ ಪ್ರೊ ಕಬಡ್ಡಿ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಮಶಾಲ್‌ ಸ್ಪೋರ್ಟ್ಸ್ ಸಂತಸ ವ್ಯಕ್ತಪಡಿಸುತ್ತದೆ. ಹಿಂದಿನ ಆವೃತ್ತಿಗಳಂತೆ ಈ ವೇಳಾ ಪಟ್ಟಿಯು ಮೂಲಕ ಪ್ರೇಕ್ಷರನ್ನು ರಂಜಿಸಿ ಗುಣಮಟ್ಟದ ಕಬಡ್ಡಿ ಆಟವನ್ನು ನೀರಿಕ್ಷಿಸುತ್ತಿದ್ದೇವೆ ಎಂದರು. ಅದೆನೇ ಇರ್ಲಿ ಈ ಬಾರಿಯ ಪ್ರೋ ಕಬಡ್ಡಿ ಸಹ ಪ್ರತಿ ಬಾರಿಯಂತೆ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News