Punjab vs Bangalore, 3rd Match: ಪಂಜಾಬ್ ಕಿಂಗ್ಸ್ ಗೆ ಐದು ವಿಕೆಟ್ ಗಳ ಜಯ

ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ (Indian Premier League 2022) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ಗಳ  ಭರ್ಜರಿ ಗೆಲುವು ಸಾಧಿಸಿದೆ.

Written by - Zee Kannada News Desk | Last Updated : Mar 28, 2022, 12:40 AM IST
  • ಕೊನೆಯಲ್ಲಿ ಶಾರುಖ್ ಖಾನ್ ಮತ್ತು ಒಡೆನ್ ಸ್ಮಿತ್ ಕ್ರಮವಾಗಿ 24,25 ರನ್ ಗಳಿಸುವ ಮೂಲಕ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವಿನ ತಡಕ್ಕೆ ಸೇರಿಸಿದರು.
Punjab vs Bangalore, 3rd Match: ಪಂಜಾಬ್ ಕಿಂಗ್ಸ್ ಗೆ ಐದು ವಿಕೆಟ್ ಗಳ ಜಯ  title=
Photo Courtesy: Twitter

ಮುಂಬೈ: ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ (Indian Premier League 2022) ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: IPL 2022 : ಐಪಿಎಲ್‌ 2022 ಗೂ ಮುನ್ನ ಭವಿಷ್ಯ ನುಡಿದ ಸುನಿಲ್ ಗವಾಸ್ಕರ್!

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ತಂಡವು ಬೆಂಗಳೂರು ತಂಡವನ್ನು 20 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಪಡೆಯುವ ಮೂಲಕ 205 ರನ್ ಗಳಿಗೆ ನಿಯಂತ್ರಿಸಿತು. ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ದುಫ್ಲೆಸಿಸ್ ನಾಯಕನ ಆಟವನ್ನು ಆಡಿದರು.ಕೇವಲ 57 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್ ಗಳ ನೆರವಿನಿಂದ 88 ರನ್ ಗಳನ್ನು ಗಳಿಸಿದರು.

ಇದಾದ ನಂತರ ಅನುಜ್ ರಾವತ್ 21 ರನ್ ಗಳಿಸಿ ಔಟಾದಾಗ ಕ್ರೀಸ್ ಗೆ ಬಂದಂತಹ ಕೊಹ್ಲಿ ಹಾಗೂ ಕಾರ್ತಿಕ್ ಕ್ರಮವಾಗಿ 41 ಹಾಗೂ 32 ರನ್ ಗಳಿಸುವ ಮೂಲಕ ತಂಡದ ಮೊತ್ತವು 200 ರ ಗಡಿಯನ್ನು ದಾಟಲು ನೆರವಾದರು.

ಇದನ್ನೂ ಓದಿ: CSK vs KKR: ಐಪಿಎಲ್ 2022ರ ಮೊದಲ ಬಾಲೇ ನೋ ಬಾಲ್!

ರಾಯಲ್ ಚಾಲೆಂಜರ್ಸ್ ತಂಡವು ನೀಡಿದ 206 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲಿ ಮಾಯಾಂಕ್ ಅಗರವಾಲ್ ಶಿಖರ್ ಧವನ್ ಹಾಗೂ ಭಾನುಷಾ ರಾಜಪಕ್ಷ ಅವರು ಕ್ರಮವಾಗಿ 32,43 43 ರನ್ ಗಳಿಸುವ ಮೂಲಕ ತಂಡವು ಗೆಲುವಿತ್ತ ಕೊಂಡೊಯ್ದರು.

ಇದಾದ ನಂತರ ಕೊನೆಯಲ್ಲಿ ಶಾರುಖ್ ಖಾನ್ ಮತ್ತು ಒಡೆನ್ ಸ್ಮಿತ್ ಕ್ರಮವಾಗಿ 24,25 ರನ್ ಗಳಿಸುವ ಮೂಲಕ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವಿನ ತಡಕ್ಕೆ ಸೇರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News