close

News WrapGet Handpicked Stories from our editors directly to your mailbox

ಕೊರಿಯಾದಲ್ಲಿ ಕ್ವಾಟರ್ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು

ಕೊರಿಯಾದಲ್ಲಿ ನಡೆಯುತ್ತಿರುವ ಮುಕ್ತ ಸೂಪರ್ ಸರಣಿ ಪಂದ್ಯದಲ್ಲಿ ಪಿ.ವಿ.ಸಿಂಧು ಮುನ್ನಡೆ ಸಾಧಿಸಿದ್ದಾರೆ. 

Updated: Sep 14, 2017 , 02:48 PM IST
ಕೊರಿಯಾದಲ್ಲಿ ಕ್ವಾಟರ್ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು

ಸಿಯೋಲ್: ಕೊರಿಯಾದಲ್ಲಿ ನಡೆಯುತ್ತಿರುವ ಸೂಪರ್ ಸರಣಿಯಲ್ಲಿ ಇಂದು ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಸಮೀರ್ ವರ್ಮ ಕ್ವಾಟರ್ ಫೈನಲ್ಸ್ ಗೆ ನೇರ ಜಯ ಸಾಧಿಸಿದ್ದಾರೆ. ಆದರೆ ಎರಡನೇ ಸುತ್ತಿನ ಪಂದ್ಯದಲ್ಲಿ ಪಾರುಪಲ್ಲಿ ಕಶ್ಯಪ್ ಸೋಲು ಅನುಭವಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಸಿಂಧು ಥೈಲ್ಯಾಂಡ್ ನ ನಿಚ್ವಾನ್ ಅವರನ್ನು 22-20, 21-17 ಸೆಟ್ಗಳಿಂದ ಸೋಲಿಸಿದರು. ಕ್ವಾಟರ್ ಫೈನಲ್ಸ್ ನಲ್ಲಿ  ಸಿಂಧು, 2014 ರ ವಿಶ್ವ ಚಾಂಪಿಯನ್ ಶಿಪ್ನ ಕಂಚಿನ ಪದಕ ವಿಜೇತ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು ಎದುರಿಸಲಿದ್ದಾರೆ. ಇವರು 2012ರ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಫೈನಲ್ಸ್ ನಲ್ಲಿ ಸೈನಾ ಅವರನ್ನು ಮಣಿಸಿದ್ದರು.