ಫೈನಲ್‌ನಲ್ಲಿ ಆಡಿದರೆ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು : ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಆರ್‌ ಅಶ್ವಿನ್‌

Ravichandran Ashwin: ಟೀಮ್‌ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಬಾಲ್ಯದಲ್ಲಿ ತನಗೆ ಹಿಂಸೆ ನೀಡಿದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Sep 12, 2024, 12:28 PM IST
  • ನಮ್ಮ ತಂಡ ಸೋಲಬೇಕು ಎಂಬ ಕಾರಣಕ್ಕೆ ಆಡಲು ಬರದಂತೆ ನನಗೆ ಬೆದರಿಕೆ ಹಾಕಿದ್ದರು.
  • ನಾನು ಫೈನಲ್‌ನಲ್ಲಿ ಆಡಿದರೆ ನನ್ನ ಕೈಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು.
  • ಟೀಮ್‌ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೇಳಿಕೆ
ಫೈನಲ್‌ನಲ್ಲಿ ಆಡಿದರೆ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು : ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಆರ್‌ ಅಶ್ವಿನ್‌  title=

Ravichandran Ashwin: ಟೀಮ್‌ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಬಾಲ್ಯದಲ್ಲಿ ತನಗೆ ಹಿಂಸೆ ನೀಡಿದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಕ್ರಿಕ್‌ಬಜ್ ವೆಬ್‌ಸೈಟ್‌ಗೆ ಸಂದರ್ಶನ ನೀಡಿರುವ ರವಿಚಂದ್ರನ್ ಅಶ್ವಿನ್, ಟೆನಿಸ್ ಚೆಂಡುಗಳೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ. ನನಗೆ 14 - 15 ವರ್ಷ ವಯಸ್ಸಾಗಿತ್ತು. ನಾನು ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆ, ನನ್ನ ತಂದೆಗೆ ನಾನು ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುವುದು ಇಷ್ಟವಿರಲಿಲ್ಲ, ನಾನು ಬೀದಿಯಲ್ಲಿ ಕ್ರಿಕೆಟ್ ಆಡಬಾರದು ಎಂದು ಹೇಳಿದ್ದರು.

ಆದರೆ ನಾನು ನನ್ನ ಸ್ನೇಹಿತರೊಂದಿಗೆ ಟೆನಿಸ್ ಬಾಲ್‌ನೊಂದಿಗೆ ಕ್ರಿಕೆಟ್ ಆಡುತ್ತಿದ್ದೆ. ಒಂದು ದಿನ ನಮ್ಮ ತಂಡ ಫೈನಲ್‌ಗೆ ತಲುಪಿತು. ಆಗ ಎದುರಾಳಿ ತಂಡದ ಆಟಗಾರರು ನಮ್ಮ ತಂಡವನ್ನು ಸೋಲಿಸಬೇಕು ಎಂಬ ಕಾರಣಕ್ಕೆ ಆಡಲು ಬರದಂತೆ ನನಗೆ ಬೆದರಿಕೆ ಹಾಕಿದ್ದರು. ನಾನು ಫೈನಲ್‌ನಲ್ಲಿ ಆಡಿದರೆ ನನ್ನ ಕೈಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದರು. ಆ ದಿನ ನನಗೆ ಇನ್ನೂ ನೆನಪಿದೆ ಎಂದು ತಮ್ಮ ಹಳೆಯ ಘಟನೆಯನ್ನು ನೆನೆದಿದ್ದಾರೆ.

ಇದನ್ನೂ ಓದಿ:ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇ 

ಬೆಳಗ್ಗೆ ಇಬ್ಬರು ಬೈಕ್‌ನಲ್ಲಿ ಮನೆಗೆ ಬಂದಿದ್ದರು. ಕರೆದುಕೊಂಡು ಹೋದರು. ಇದ್ದಕ್ಕಿದ್ದಂತೆ ಅಂಗಡಿಯೊಂದರಲ್ಲಿ ಗಾಡಿ ನಿಲ್ಲಿಸಿ ಇಡ್ಲಿ- ವಡೆ ಎಲ್ಲ ಕೊಡಿಸಿದರು. ನಾನೂ ತಿಂದು ಪಂದ್ಯಕ್ಕೆ ಸಮಯವಾಗಿದೆ ಎಂದು ಹೇಳಿದೆ. ಆದರೆ ಆಗ ಅವರ ಯೋಜನೆ ಬೆಳಕಿಗೆ ಬಂತು. ನನ್ನನ್ನು ಆಟವಾಡಲು ಹೋಗಬೇಡ ಎಂದು ಬೆದರಿಸಿ ಅಲ್ಲೇ ಇರುವಂತೆ ಮಾಡಿದರು. ನಂತರ ನಾನು ಕೂಡ ಮನೆಗೆ ಹೋದೆ. ಮೊದಮೊದಲು ನಾನು ಇದಕ್ಕೆ ಹೆದರಿ ಅಪ್ಪನಿಗೆ ಹೇಳಲಿಲ್ಲ. ಅವರು ಮತ್ತೆ ಮತ್ತೆ ಹೀಗೆ ಮಾಡುತ್ತಿದ್ದರು, ಆಗ ನಾನು ಅಪ್ಪನ ಬಳಿ ಎಲ್ಲವನ್ನೂ ಹೇಳಿದೆ ಎಂದು ತಿಳಿಸಿದ್ದಾರೆ. 

ಅಶ್ವಿನ್ ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ 1 ಬೌಲರ್ ಆಗಿರುವ ಅಶ್ವಿನ್ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಇಲ್ಲಿಯವರೆಗೆ 100 ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 516 ವಿಕೆಟ್ ಮತ್ತು 3309 ರನ್ ಗಳಿಸಿದ್ದಾರೆ.

ಅದೇ ರೀತಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಏಕದಿನದಲ್ಲಿ 707 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 184 ರನ್ ಗಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್ 211 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 180 ವಿಕೆಟ್ ಮತ್ತು 800 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಧೋನಿ vs ವಿರಾಟ್ vs ರೋಹಿತ್: ಈ ಮೂವರಲ್ಲಿ ಯಾರು ಉತ್ತಮ ಆಟಗಾರ..? ವೀರೇಂದ್ರ ಸೆಹ್ವಾಗ್ ಆಯ್ಕೆ ಯಾರು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News