ಅಗತ್ಯ ಬಿದ್ದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಜಡೇಜಾರನ್ನು ಆಯ್ಕೆ ಮಾಡಲಾಗುವುದು-ಕೊಹ್ಲಿ

  ಟಿವಿ ಷೋ ವೊಂದರಲ್ಲಿ ಹಾರ್ದಿಕ್ ಪಾಂಡ್ಯ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ಈಗ  ಪಾಂಡ್ಯ ವಿಚಾರವಾಗಿ ತಾವು ಒತ್ತಡಕ್ಕೆ  ಒಳಗಾಗಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ತಂಡಕ್ಕೆ ಅಗತ್ಯ ಬಿದ್ದಲ್ಲಿ ಪಾಂಡ್ಯ ಜಾಗದಲ್ಲಿ ಜಡೇಜಾರಿಗೆ ಆದ್ಯತೆ ನೀಡಲಾಗುವುದು ಎಂದರು.

Updated: Jan 11, 2019 , 03:27 PM IST
ಅಗತ್ಯ ಬಿದ್ದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ಜಡೇಜಾರನ್ನು ಆಯ್ಕೆ ಮಾಡಲಾಗುವುದು-ಕೊಹ್ಲಿ

ನವದೆಹಲಿ:  ಟಿವಿ ಷೋ ವೊಂದರಲ್ಲಿ ಹಾರ್ದಿಕ್ ಪಾಂಡ್ಯ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ಈಗ  ಪಾಂಡ್ಯ ವಿಚಾರವಾಗಿ ತಾವು ಒತ್ತಡಕ್ಕೆ  ಒಳಗಾಗಿಲ್ಲ ಎಂದು ತಿಳಿಸಿದ್ದಾರೆ. ಒಂದು ವೇಳೆ ತಂಡಕ್ಕೆ ಅಗತ್ಯ ಬಿದ್ದಲ್ಲಿ ಪಾಂಡ್ಯ ಜಾಗದಲ್ಲಿ ಜಡೇಜಾರಿಗೆ ಆದ್ಯತೆ ನೀಡಲಾಗುವುದು ಎಂದರು.

ನಾವು ಒಂದು ತಂಡವಾಗಿ ಒತ್ತಡಕ್ಕೆ ಒಳಗಾಗಿಲ್ಲ ಏಕೆಂದರೆ ಯಾವಾಗಲೂ ಸಮತೋಲನ ಕಾಪಾಡುವ ಪರಿಸ್ಥಿತಿ ಇದ್ದೆ ಇರುತ್ತದೆ. ಅದಕ್ಕೆ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ನಿಭಾಯಿಸುವ ಆಟಗಾರರನ್ನು ಇಟ್ಟುಕೊಂಡಿರುತ್ತೇವೆ ಎಂದು ಕೊಹ್ಲಿ ಹೇಳಿದರು.

ಇದೇ ವೇಳೆ ಮುಂಬರುವ ವಿಶ್ವಕಪ್ ನಲ್ಲಿ ತಂಡವನ್ನು ಸಿದ್ದಪಡಿಸುವ ಕುರಿತಾಗಿ ಮಾತನಾಡಿದ ಕೊಹ್ಲಿ ಸದ್ಯಕ್ಕೆ ಪ್ರಸ್ತಕ ತಂಡದ ಹೊಂದಾಣಿಕೆಯು ಸರಿಯಾಗಿದೆ, ಆದ್ದರಿಂದ ಮೇ 30 ರಿಂದ ಪ್ರಾರಂಭವಾಗುವ ವಿಶ್ವಕಪ್ ಗೆ ಹೆಚ್ಚಾಗಿ ತಂಡದ ಮೂವತ್ತು ಸಂಭವನಿಯ ಸದಸ್ಯರನ್ನು ಆಯ್ಕೆ ಮಾಡಲು ಅಷ್ಟೇನೂ ಸಮಸ್ಯೆಯಾಗಲಾರದು ಎಂದು ತಿಳಿಸಿದರು.