IND vs IRE: ಐರ್ಲೆಂಡ್ ಟಿ20 ಸರಣಿಗೆ ತಂಡ ಪ್ರಕಟ: ಟೀ ಇಂಡಿಯಾದ 6 ಸ್ಟಾರ್ ಆಟಗಾರರು ಹೊರಕ್ಕೆ!

IND vs IRE, T20 Series: ವೆಸ್ಟ್ ಇಂಡೀಸ್ ವಿರುದ್ಧದ ನಡೆದ ಮೊದಲ ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ 20 ಐ ಸರಣಿಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲು ಅನುಭವಿಸಿದೆ.   

Written by - Bhavishya Shetty | Last Updated : Aug 14, 2023, 11:54 AM IST
    • ಆಗಸ್ಟ್ 18 ರಿಂದ ಭಾರತೀಯ ತಂಡವು ಮೂರು ಟಿ 20 ಸರಣಿನ್ನು ಐರ್ಲೆಂಡ್ ವಿರುದ್ಧ ಆಡಲಿದೆ,
    • ಐರಿಶ್ ಪ್ರವಾಸಕ್ಕೆ ಹೊಸ ನಾಯಕನಾಗಿ ಜಸ್ಪ್ರೀತ್ ಬುಮ್ರಾ ಸ್ಥಾನ
    • ಜಸ್ಪ್ರೀತ್ ಬುಮ್ರಾ ಅವರ ನಾಯಕತ್ವದಲ್ಲಿ ಭಾರತೀಯ ತಂಡವು ಈಗ ಐರ್ಲೆಂಡ್‌’ಗೆ ತೆರಳಲಿದೆ.
IND vs IRE: ಐರ್ಲೆಂಡ್ ಟಿ20 ಸರಣಿಗೆ ತಂಡ ಪ್ರಕಟ: ಟೀ ಇಂಡಿಯಾದ 6 ಸ್ಟಾರ್ ಆಟಗಾರರು ಹೊರಕ್ಕೆ!  title=
India Ireland Series

IND vs IRE, T20 Series: ಸದ್ಯ ವಿಂಡೀಸ್ ಪ್ರವಾಸವು ಮುಗಿದಿದ್ದು, ಈಗ ಕೆಲವು ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಏಕದಿನ ವಿಶ್ವಕಪ್, ಏಷ್ಯಾಕಪ್’ಗೂ ಮುನ್ನ ಐರ್ಲೆಂಡ್ ಟಿ 20 ಸಿರೀಸ್ ಇದೆ. ಆಗಸ್ಟ್ 18 ರಿಂದ ಭಾರತೀಯ ತಂಡವು ಮೂರು ಟಿ 20 ಸರಣಿನ್ನು ಐರ್ಲೆಂಡ್ ವಿರುದ್ಧ ಆಡಲಿದೆ, ಈ ಸರಣಿ ಬಳಿಕ ಏಷ್ಯಾ ಕಪ್ 2023 ತಂಡವನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ:Moles Astrology: ಯಾವ ಭಾಗದ ಮಚ್ಚೆ ಯಾವ ರಾಶಿಗೆ ಶುಭದಾಯಕ?

ಇನ್ನು ಭಾರತದ ಐರಿಶ್ ಪ್ರವಾಸಕ್ಕೆ ಹೊಸ ನಾಯಕನಾಗಿ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದು, ಗಾಯದ ನಂತರ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಸುಮಾರು 11 ತಿಂಗಳ ಬಳಿಕ ಬುಮ್ರಾ ಆಟ ನೋಡಬಹುದಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ನಡೆದ ಮೊದಲ ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ 20 ಐ ಸರಣಿಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲು ಅನುಭವಿಸಿದೆ.   

ಜಸ್ಪ್ರೀತ್ ಬುಮ್ರಾ ಅವರ ನಾಯಕತ್ವದಲ್ಲಿ ಭಾರತೀಯ ತಂಡವು ಈಗ ಐರ್ಲೆಂಡ್‌’ಗೆ ತೆರಳಲಿದೆ. ಅಲ್ಲಿ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಬೇಕಾಗುತ್ತದೆ.

ವಿಶ್ವಕಪ್ ಮೊದಲು, ಟೀಮ್ ಇಂಡಿಯಾ ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಸ್ಪರ್ಧಿಸಲಿದೆ. ಐರ್ಲೆಂಡ್ ಪ್ರವಾಸದಲ್ಲಿ, ಭಾರತವು ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಬೇಕಾಗಿದೆ. ಆಗಸ್ಟ್ 18 ರಂದು, ಈ ಪ್ರವಾಸದ ಆರಂಭಿಕ ಆಟ ನಡೆಯಲಿದೆ. ಈ ತಂಡವನ್ನು ಈಗಾಗಲೇ ಬಿಸಿಸಿಐ ಘೋಷಿಸಿದೆ. ಇತ್ತೀಚೆಗೆ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ಆಡಿದ ಜಸ್ಪ್ರಿತ್ ಬುಮ್ರಾ ಅವರು ಭಾರತೀಯ ತಂಡದ ನಾಯಕತ್ವ ವಹಿಸಲಿದ್ದಾರೆ.

ಭಾರತ ಮತ್ತು ಐರ್ಲೆಂಡ್ ತಮ್ಮ ಮೊದಲ ಟಿ 20 ಪಂದ್ಯವನ್ನು ಆಗಸ್ಟ್ 18 ರಂದು ಮತ್ತು ಆಗಸ್ಟ್ 20 ರಂದು ಎರಡನೇ ಟಿ 20 ಪಂದ್ಯವನ್ನು ಆಡಲಿದೆ. ಆಗಸ್ಟ್ 23 ರಂದು, ಮೂರನೇ ಮತ್ತು ಅಂತಿಮ ಟಿ 20 ಪಂದ್ಯ ನಡೆಯಲಿದೆ.

ಭಾರತ ಮತ್ತು ಐರ್ಲೆಂಡ್ ಪೂರ್ಣ ವೇಳಾಪಟ್ಟಿ

  • 1 ನೇ ಟಿ 20 - 18 ಆಗಸ್ಟ್ - ಮಲಹೈಡ್ ಕ್ರಿಕೆಟ್ ಕ್ಲಬ್, ಡಬ್ಲಿನ್
  • 2 ನೇ ಟಿ 20 - 20 ಆಗಸ್ಟ್ - ಮಲಾಹೈಡ್ ಕ್ರಿಕೆಟ್ ಕ್ಲಬ್, ಡಬ್ಲಿನ್
  • 3 ನೇ ಟಿ 20 - 23 ಆಗಸ್ಟ್ - ಮಲಾಹೈಡ್ ಕ್ರಿಕೆಟ್ ಕ್ಲಬ್, ಡಬ್ಲಿನ್

ಇದನ್ನೂ ಓದಿ: ಅಂದು ನಿವೃತ್ತಿ ಘೋಷಿಸಿದ್ದ ಧೋನಿ ಗೆಳಯನಿಗೆ ವಿಶ್ವಕಪ್ 2023ರಲ್ಲಿ ಚ್ಯಾನ್ಸ್ ಕೊಟ್ಟ ಸಮಿತಿ!

ಟೀಂ ಇಂಡಿಯಾದಿಂದ ಹೊರ ಉಳಿದ ಆಟಗಾರರು: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಯುಜುವೇಂದ್ರ ಚಹಾಲ್, ಶುಭ್ಮನ್ ಗಿಲ್,

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News