ವರ್ಷಗಳ ಬಳಿಕ ಮತ್ತೆ ತಂಡದ ಸಾರಥ್ಯ ವಹಿಸಲಿದ್ದಾರೆ ಈ ಆಟಗಾರ ! IPL ಮೂಲಕ ಸ್ಟಾರ್ ಬ್ಯಾಟ್ಸ್ ಮ್ಯಾನ್ ಕಂ ಬ್ಯಾಕ್

ರಿಷಬ್ ಪಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮುಂದಿನ ಐಪಿಎಲ್ ಸೀಸನ್ ನಿಂದ ಅವರು ಮತ್ತೆ  ಮೈದಾನಕ್ಕೆ ಇಳಿಯಲಿದ್ದಾರೆ. 

Written by - Ranjitha R K | Last Updated : Nov 10, 2023, 02:51 PM IST
  • ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್ ಪಂತ್
  • ರಿಷಬ್ ಪಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
  • ಕೋಲ್ಕತ್ತ ತರಬೇತಿ ಶಿಬಿರದಲ್ಲೂ ರಿಷಬ್ ಕಾಣಿಸಿಕೊಂಡಿದ್ದಾರೆ.
ವರ್ಷಗಳ ಬಳಿಕ ಮತ್ತೆ ತಂಡದ ಸಾರಥ್ಯ ವಹಿಸಲಿದ್ದಾರೆ ಈ ಆಟಗಾರ !  IPL ಮೂಲಕ ಸ್ಟಾರ್ ಬ್ಯಾಟ್ಸ್ ಮ್ಯಾನ್ ಕಂ ಬ್ಯಾಕ್  title=

IPL 2024 : ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಸೀಸನ್ ನಲ್ಲಿ ರಿಷಬ್ ಪಂತ್ ದೆಹಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಿರ್ದೇಶಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಈ ಮೂಲಕ ವರ್ಷಗಳ ಬಳಿಕ ರಿಷಬ್ ಪಂತ್ ಮತ್ತೆ ಕಂ ಬ್ಯಾಕ್ ಆಗಲಿದ್ದಾರೆ. ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದ ಸಾಲ್ಟ್‌ಲೇಕ್ ಕ್ಯಾಂಪಸ್ ಮೈದಾನದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲೂ ರಿಷಬ್ ಕಾಣಿಸಿಕೊಂಡಿದ್ದಾರೆ. 

ರಿಷಬ್ ಪಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮುಂದಿನ ಐಪಿಎಲ್ ಸೀಸನ್ ನಿಂದ ಅವರು ಮತ್ತೆ  ಮೈದಾನಕ್ಕೆ ಇಳಿಯಲಿದ್ದಾರೆ.  ರಿಷಬ್  ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದ ಸಾಲ್ಟ್‌ಲೇಕ್ ಕ್ಯಾಂಪಸ್ ಮೈದಾನದಲ್ಲಿ ನಡೆಯುತ್ತಿರುವ  ತರಬೇತಿ  ಶಿಬಿರದಲ್ಲಿ ಕಾಣಿಸಿಕೊಂಡಿದ್ದು, ನವೆಂಬರ್ 11 ರವರೆಗೆ ರಿಷಬ್ ಅಲ್ಲಿಯೇ ಉಳಿಯಲಿದ್ದಾರೆ. ಸದ್ಯಕ್ಕೆ ಅವರು ತರಬೇತಿಯಲ್ಲಿ ಭಾಗವಹಿಸುತ್ತಿಲ್ಲ. ಮುಂಬರುವ ಹರಾಜನ್ನು ಪರಿಗಣಿಸಿ,  ಪಂತ್ ಜೊತೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಸೌರವ್ ಗಂಗೂಲಿ ಹೇಳಿದ್ದಾರೆ. 

ಇದನ್ನೂ ಓದಿ : ನ್ಯೂಜಿಲ್ಯಾಂಡ್ ಪರ ಆಡುತ್ತಿರುವ ಈ ಭಾರತೀಯನ ಮನಸ್ಸು ಕದ್ದ ಬೆಡಗಿ ಇವರೇ ! ಎಷ್ಟು ಮುದ್ದಾಗಿದೆ ನೋಡಿ ಇವರ ಕುಟುಂಬ !

ಕಳೆದ ವರ್ಷ ಡಿಸೆಂಬರ್‌ನಲ್ಲಿ ಡೆಹ್ರಾಡೂನ್ ಬಳಿ ನಡೆದ ಭೀಕರ ಕಾರು ಅಪಘಾತದ ನಂತರ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಕಾರು ಅಪಘಾತದ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಶಿಬಿರದಲ್ಲಿ ರಿಷಬ್ ಯಾವುದೇ ರೀತಿಯ ಅಭ್ಯಾಸದಲ್ಲಿ ತೊಡಗಿಕೊಂಡಿಲ್ಲ. ಆದರೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ಮಿನಿ ಹರಾಜಿಗೂ ಮೊದಲು ತಂಡದ ಬಗ್ಗೆ ನಡೆಯುವ ಎಲ್ಲಾ ಚರ್ಚೆಯ ಭಾಗವಾಗಿರಲಿದ್ದಾರೆ ಎನ್ನಲಾಗಿದೆ. ರಿಷಬ್ ದೆಹಲಿ ತಂಡದ ನಾಯಕರಾಗಿರುವ ಕಾರಣ ಮುಂಬರುವ ಹರಾಜಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು  ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಅವರು ತಂಡಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಅಂತಿಮಗೊಳಿಸಲು  ಕೊಲ್ಕತ್ತಾಗೆ ಆಗಮಿಸಿದ್ದಾರೆ ಎಂದು ಗಂಗೂಳಿ ಹೇಳಿದ್ದಾರೆ.  

ಇದನ್ನೂ ಓದಿ : ICC WorldCup 2023: ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ..!

ಕೋಲ್ಕತ್ತಾದಲ್ಲಿ ದೆಹಲಿ ಕ್ಯಾಪಿಟಲ್ಸ್ ತರಬೇತಿ ಶಿಬಿರದಲ್ಲಿ ರಿಷಬ್ ಪಂತ್  : 

 

IPL 2023 ಋತುವಿನಲ್ಲಿ ಪಂತ್ ಅನುಪಸ್ಥಿತಿಯಲ್ಲಿ  ದೆಹಲಿ ತಂಡವನ್ನು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸಿದ್ದರು. ವಾರ್ನರ್ ಸಾರಥ್ಯದಲ್ಲಿ 14 ಪಂದ್ಯಗಳಲ್ಲಿ ಕೇವಲ 5 ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನಕ್ಕೆ ಇಳಿದಿತ್ತು. 

ಇದನ್ನೂ ಓದಿ : IPL 2024 : CSK ಫ್ಯಾನ್ಸ್‌ ಗೆ ಬಿಗ್‌ ಶಾಕ್..‌ ಹರಾಜಿಗೂ ಮುನ್ನವೇ ಈ 3 ಆಟಗಾರರು ತಂಡದಿಂದ ಔಟ್!?

ಪಂತ್ ಐಪಿಎಲ್‌ನಲ್ಲಿ ಇದುವರೆಗೆ 98 ಪಂದ್ಯಗಳಲ್ಲಿ  147.97 ಸ್ಟ್ರೈಕ್ ರೇಟ್‌ನೊಂದಿಗೆ 34.61 ರ ಸರಾಸರಿಯಲ್ಲಿ 2,838 ರನ್  ಕೆಲ ಹಾಕಿದ್ದಾರೆ.  ಇದರಲ್ಲಿ ಒಂದು ಶತಕ ಮತ್ತು 15 ಅರ್ಧಶತಕ ಸೇರಿದೆ.  ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ  ರಿಷಬ್ ಅಂತಾರಾಷ್ಟ್ರೀಯ  ಪಂದ್ಯಕ್ಕೆ  ಕಂಬ್ಯಾಕ್ ಆಗುವ ನಿರೀಕ್ಷೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News