ಅಂತರಾಷ್ಟ್ರೀಯ ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ? IPL ಮಧ್ಯೆಯೇ ಬಿಗ್ ಶಾಕ್ ನೀಡಿದ 'ಹಿಟ್ಮ್ಯಾನ್'

Rohit Sharma Retirement: ಇದೀಗ ಹಿಟ್‌ಮ್ಯಾನ್ ಅವರ ನಿವೃತ್ತಿಯ ಬಗ್ಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ.  ಗೌರವ್ ಕಪೂರ್ ಅವರ 'ಬ್ರೇಕ್‌ ಫಾಸ್ಟ್ ವಿತ್ ಚಾಂಪಿಯನ್' ಶೋನಲ್ಲಿ ಮಾತನಾಡುವಾಗ ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ.

Written by - Bhavishya Shetty | Last Updated : Apr 12, 2024, 07:21 PM IST
    • ಹಿಟ್‌ಮ್ಯಾನ್ ಅವರ ನಿವೃತ್ತಿಯ ಬಗ್ಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ
    • 'ಬ್ರೇಕ್‌ ಫಾಸ್ಟ್ ವಿತ್ ಚಾಂಪಿಯನ್' ಶೋನಲ್ಲಿ ಮಾತನಾಡಿದ ರೋಹಿತ್
    • ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ? IPL ಮಧ್ಯೆಯೇ ಬಿಗ್ ಶಾಕ್ ನೀಡಿದ 'ಹಿಟ್ಮ್ಯಾನ್'  title=
Rohit Sharma

Rohit Sharma Retirement: ರೋಹಿತ್ ಶರ್ಮಾ ಕಳೆದ ವರ್ಷ ಭಾರತದ ನೆಲದಲ್ಲಿ ನಡೆದ ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಲು ಹಿಟ್‌ಮ್ಯಾನ್ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಫೈನಲ್‌’ನಲ್ಲಿ ಭಾರತೀಯ ಅಭಿಮಾನಿಗಳು ಮತ್ತು ರೋಹಿತ್‌ ಭರವಸೆಗೆ ದೊಡ್ಡ ಪೆಟ್ಟು ಬಿದ್ದಿತ್ತು. ಅಂದು ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: ಭಾರತ ತೊರೆದು ಕೆನಡಾ ಪರ ಕ್ರಿಕೆಟ್ ಆಡಲು ಮುಂದಾಗಿದ್ದ ಬುಮ್ರಾ..! ಶಾಕಿಂಗ್ ಸತ್ಯ ಬಹಿರಂಗ

ಅಂದಹಾಗೆ ಇದೀಗ ಹಿಟ್‌ಮ್ಯಾನ್ ಅವರ ನಿವೃತ್ತಿಯ ಬಗ್ಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ.  ಗೌರವ್ ಕಪೂರ್ ಅವರ 'ಬ್ರೇಕ್‌ ಫಾಸ್ಟ್ ವಿತ್ ಚಾಂಪಿಯನ್' ಶೋನಲ್ಲಿ ಮಾತನಾಡುವಾಗ ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ.

“ನಿವೃತ್ತಿಯ ಬಗ್ಗೆ ನಾನು ಇನ್ನೂ ಹೆಚ್ಚು ಯೋಚಿಸಿಲ್ಲ, ಆದರೆ, ಜೀವನವು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ, ನಾನು ಪ್ರಸ್ತುತ ಉತ್ತಮವಾಗಿ ಆಡುತ್ತಿದ್ದೇನೆ, ಆದ್ದರಿಂದ ನಾನು ಇನ್ನೂ ಕೆಲವು ವರ್ಷಗಳ ಕಾಲ ಆಟದಲ್ಲಿ ಮುಂದುವರಿಯುತ್ತೇನೆ ಎಂದು ನಾನು ಭಾವಿಸಿದೆ” ಎಂದು ಹೇಳಿದರು.

ಇದನ್ನೂ ಓದಿ: ವಾರದಲ್ಲಿ 3 ಸೀತಾಫಲ ಹಣ್ಣು ತಿನ್ನಿ… ಈ ಕಾಯಿಲೆಗಳಿಂದ ಸಿಗುತ್ತೆ ಪರ್ಮನೆಂಟ್ ರಿಲೀಫ್

2023ರ ವಿಶ್ವಕಪ್‌ ಸೋಲಿನ ಬಗ್ಗೆಯೂ ರೋಹಿತ್ ಶರ್ಮಾ ಮಾತನಾಡಿದ್ದಾರೆ. "ನನಗೆ 50 ಓವರ್‌'ಗಳ ವಿಶ್ವಕಪ್ ನಿಜವಾದ ವಿಶ್ವಕಪ್. ನಾವು ಆ ವಿಶ್ವಕಪ್ ಅನ್ನು ನೋಡುತ್ತಲೇ ಬೆಳೆದಿದ್ದೇವೆ. ಫೈನಲ್‌ಗೆ ಮೊದಲು ನಾವು ತುಂಬಾ ಚೆನ್ನಾಗಿ ಆಡಿದ್ದೇವೆ. ಸೆಮಿ-ಫೈನಲ್ ಗೆದ್ದಾಗ, ನಾವು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದೇವೆ ಎಂದು ನಾನು ಭಾವಿಸಿದೆ, ಆದರೆ ಯಾವ ಒಂದು ಕಾರಣದಿಂದ ವಿಶ್ವಕಪ್ ಗೆಲ್ಲಲಿಲ್ಲ ಎಂಬ ಬಗ್ಗೆ ಇನ್ನು ಗೊಂದಲವಿದೆ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ಆದರೆ ಅದು ನಮಗೆಲ್ಲರಿಗೂ ಕೆಟ್ಟ ದಿನ" ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News