T20 World Cup 2021 : ಈ ಭಾರಿ ಟೀಂ ಇಂಡಿಯಾ ಗೆಲ್ಲುತ್ತೆ T20 ವಿಶ್ವಕಪ್ : ರೋಹಿತ್ ಶರ್ಮಾ

2007 ರಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದಲ್ಲಿ ಭಾರತವು ಟಿ 20 ವಿಶ್ವಕಪ್‌ನ ಮೊದಲ ಭಾರಿ  ಪಂದ್ಯಾವಳಿಯನ್ನು ಗೆದ್ದಿತು. ಮುಂಬರುವ ಪಂದ್ಯಾವಳಿಯು ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ನಡೆಯಲಿದೆ.

Written by - Channabasava A Kashinakunti | Last Updated : Sep 29, 2021, 11:03 PM IST
  • ಟೀಂ ಇಂಡಿಯಾಗೆ ಬಲ ತುಂಬಿದ್ದಾರೆ ರೋಹಿತ್
  • ಜಗತ್ತಿಗೆ ಎಚ್ಚರಿಕೆ ನೀಡಿದ ರೋಹಿತ್ ಶರ್ಮಾ
  • ಟಿ 20 ವಿಶ್ವಕಪ್ ಗೆಲ್ಲಲಿದೆ ತುಂಬಿದ್ದಾರೆ
T20 World Cup 2021 : ಈ ಭಾರಿ ಟೀಂ ಇಂಡಿಯಾ ಗೆಲ್ಲುತ್ತೆ T20 ವಿಶ್ವಕಪ್ : ರೋಹಿತ್ ಶರ್ಮಾ title=

ನವದೆಹಲಿ : ಟಿ 20 ವಿಶ್ವಕಪ್ 2021 ಯುಎಇ ಮತ್ತು ಓಮನ್ ನಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಗೆಲ್ಲಲು ಟೀಂ ಇಂಡಿಯಾ ದೊಡ್ಡ ಸ್ಪರ್ಧಿಗೆ ಸಿದ್ಧವಾಗುತ್ತಿದೆ. ವಿಶ್ವಕಪ್‌ಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇಡೀ ವಿಶ್ವಕ್ಕೆ ಈ ಕುರಿತು ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಟೀಂ ಇಂಡಿಯಾಗೆ ಬಲ ತುಂಬಿದ್ದಾರೆ ರೋಹಿತ್ 

ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ 20 ವಿಶ್ವ ಕಪ್(T20 World Cup 2021) ಅನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಪುನರಾವರ್ತಿಸಲು ನಮ್ಮ ತಂಡವು ಎಲ್ಲ ರೀತಿಯಿಂದ ತಯಾರಾಗಿದೆ ಎಂದು ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಬುಧವಾರ ಹೇಳಿದ್ದಾರೆ. 

ಇದನ್ನೂ ಓದಿ :ಹೊಟ್ಟೆಪಾಡಿಗೆ ಪಾನಿಪೂರಿ ಮಾರುತ್ತಿದ್ದ ಹುಡುಗನ ಜೀವನವನ್ನೇ ಬದಲಿಸಿದ ಐಪಿಎಲ್..!

2007 ರಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದಲ್ಲಿ ಭಾರತವು ಟಿ 20 ವಿಶ್ವಕಪ್‌ನ ಮೊದಲ ಭಾರಿ  ಪಂದ್ಯಾವಳಿಯನ್ನು ಗೆದ್ದಿತು. ಮುಂಬರುವ ಪಂದ್ಯಾವಳಿಯು ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ನಡೆಯಲಿದೆ. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ತಂಡದ ಭಾಗವಾಗಿದ್ದ ರೋಹಿತ್, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "ಈ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಇತಿಹಾಸವನ್ನು ಪುನರಾವರ್ತಿಸಲು ನಾವು ಪ್ರತಿಯೊಬ್ಬರೂ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ" ಎಂದು ಬರೆದುಕೊಂಡಿದ್ದಾರೆ. ನಾವು ಅದಕ್ಕಾಗಿ ಬರುತ್ತಿದ್ದೇವೆ. ನಾನು ಅದನ್ನು ಗೆಲ್ಲಲು ಬರುತ್ತಿದ್ದೇನೆ. ' ಎಂದು ತಿಳಿಸಿದ್ದಾರೆ.

2007 ರ ವಿಜಯವನ್ನು ನೆನಪಿಸಿಕೊಂಡ ರೋಹಿತ್

ಮೊದಲ ಟಿ 20 ವಿಶ್ವಕಪ್‌ ಗೆಲುವನ್ನು ನೆನಪಿಸಿಕೊಂಡ ರೋಹಿತ್(Rohit Sharma), '24 ಸೆಪ್ಟೆಂಬರ್ 2007, ಜೋಹಾನ್ಸ್‌ಬರ್ಗ್. ಒಂದು ಶತಕೋಟಿ ಜನರ ಕನಸು ನನಸಾಗಿಸಿದ ದಿನ. ನಮ್ಮಂತಹ ತುಲನಾತ್ಮಕವಾಗಿ ಕಡಿಮೆ ಅನುಭವಿ ತಂಡವು ಇತಿಹಾಸವನ್ನು ಸೃಷ್ಟಿಸುತ್ತದೆ ಎಂದು ಆ ಸಮಯದಲ್ಲಿ ಯಾರು ಭಾವಿಸಿರಲಿಲ್ಲ ನಾವು ಎಲ್ಲವನ್ನೂ ಜಯಸಿದ್ದೇವೆ ಎಂದು ಬರೆದುಕೊಡಿದ್ದಾರೆ.

ಇದನ್ನೂ ಓದಿ :IPL 2021, RCB vs RR: ರಾಜಸ್ಥಾನ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿರುವ ಕೊಹ್ಲಿ ಪಡೆ

ರೋಹಿತ್ ಮತ್ತು ವಿರಾಟ್ ನಿರೀಕ್ಷೆಗಳು

ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್(IPL 2021) ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ನ ಪ್ರಮುಖ ಸದಸ್ಯರಾಗಿದ್ದಾರೆ. ರೋಹಿತ್ 111 ಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 32.54 ರ ಸರಾಸರಿಯಲ್ಲಿ 2,864 ರನ್ ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News