ಟ್ರೋಫಿ ಜೊತೆ ಮೆರವಣಿಗೆಯಲ್ಲಿ ಬಂದ ವಿಶ್ವಕಪ್ ವಿಜೇತೆಯರು: ಅಭಿನಂದಿಸಿ 5 ಕೋಟಿ ಚೆಕ್ ನೀಡಿದ ಸಚಿನ್ ತೆಂಡೂಲ್ಕರ್

U19 World Cup Winners: ಜನವರಿ 29, ಭಾನುವಾರದಂದು ಪಾಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಶಫಾಲಿ ವರ್ಮಾ ನಾಯಕತ್ವದ ಭಾರತವು ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡು ಇತಿಹಾಸ ಸೃಷ್ಟಿಸಿತ್ತು.

Written by - Bhavishya Shetty | Last Updated : Feb 2, 2023, 12:01 AM IST
    • ಅಂಡರ್ 19 ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡ
    • ತಂಡವನ್ನು ಅಭಿನಂದಿಸಿ 5 ಕೋಟಿ ರೂ. ಬಹುಮಾನ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ
    • ಭಾರತ ರತ್ನ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.
ಟ್ರೋಫಿ ಜೊತೆ ಮೆರವಣಿಗೆಯಲ್ಲಿ ಬಂದ ವಿಶ್ವಕಪ್ ವಿಜೇತೆಯರು: ಅಭಿನಂದಿಸಿ 5 ಕೋಟಿ ಚೆಕ್ ನೀಡಿದ ಸಚಿನ್ ತೆಂಡೂಲ್ಕರ್
BCCI

Sachin Tendulkar Congratulates U19 World Cup Winners: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂಡರ್ 19 ವಿಶ್ವಕಪ್ ಗೆದ್ದ ಮಹಿಳಾ ತಂಡವನ್ನು ಅಭಿನಂದಿಸಿ 5 ಕೋಟಿ ರೂ. ಬಹುಮಾನ ನೀಡಿದೆ. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಭಾರತ ರತ್ನ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.

ಜನವರಿ 29, ಭಾನುವಾರದಂದು ಪಾಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದ ಶಫಾಲಿ ವರ್ಮಾ ನಾಯಕತ್ವದ ಭಾರತವು ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯನ್ನು ಗೆದ್ದುಕೊಂಡು ಇತಿಹಾಸ ಸೃಷ್ಟಿಸಿತ್ತು.

ಇದನ್ನೂ ಓದಿ: IND vs NZ: 2019ರಲ್ಲಿ ಟೀಂ ಇಂಡಿಯಾ, 2023ರಲ್ಲಿ ಕೀವೀಸ್: ಅನುಭವಿಸಿದ್ದು ಒಂದೇ ನೋವು, ವರ್ಷ ಮಾತ್ರ ಬೇರೆ!

2014 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು ಮತ್ತು ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಪದಾಧಿಕಾರಿಗಳು ಭಾರತೀಯ ತಂಡದ ಆಟಗಾರರನ್ನು ಅಭಿನಂದಿಸಿದ್ದಾರೆ.

ಇನ್ನು ವಿಜೇತ ಮಹಿಳಾ ತಂಡವನ್ನು ಟ್ರೋಫಿ ಸಮೇತ ಮೈದಾನಕ್ಕೆ ಆಗಮಿಸಿದ್ದಾರೆ. ಈ ಬಳಿಕ ಸಚಿನ್ ಮತ್ತು ಬಿಸಿಸಿಐ ಪದಾಧಿಕಾರಿಗಳು ಭಾರತೀಯ ಮಹಿಳಾ ತಂಡಕ್ಕೆ ರೂ. 5 ಕೋಟಿ ಚೆಕ್ ನೀಡಿದರು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ 20 ಐಗೆ ಮುನ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಇದಕ್ಕೂ ಮುನ್ನ, ನಿವೃತ್ತ ಭಾರತೀಯ ಕ್ರಿಕೆಟಿಗ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ವಿಶ್ವಕಪ್‌ನಲ್ಲಿ ಭಾರತ ತಂಡದ ಅದ್ಭುತ ಪ್ರದರ್ಶನಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಟ್ವೀಟ್ ಮಾಡಿದ ಗಂಗೂಲಿ, "ವಿಶ್ವಕಪ್ ಗೆದ್ದ 19 ವರ್ಷದೊಳಗಿನ ಮಹಿಳಾ ತಂಡಕ್ಕೆ ಅಭಿನಂದನೆಗಳು. ಬಾಲೆಯರು ತಮ್ಮ ಆಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಇದು ಉತ್ತಮ ಮೆಟ್ಟಿಲು" ಎಂದು ಬರೆದುಕೊಂಡಿದ್ದಾರೆ.

ಸೂಪರ್ 6 ರ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸುವ ಮೊದಲು ಭಾರತವು ಗುಂಪು ಹಂತದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತು. ಸೆಮಿಸ್‌ನಲ್ಲಿ, ವುಮೆನ್ ಇನ್ ಬ್ಲೂ ನ್ಯೂಜಿಲೆಂಡ್ ಅನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಈ ಬಳಿಕ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಿ, ಅಂತಿಮವಾಗಿ ಕಪ್ ಗೆದ್ದಿದೆ.

ಇದನ್ನೂ ಓದಿ: Shubman Gill Record: ಬಿರುಸಿನ ಶತಕದ ಮೂಲಕ 13 ವರ್ಷಗಳ ಹಳೆಯ ದಾಖಲೆ ಮುರಿದ ಶುಭ್ಮನ್ ಗಿಲ್

ಬಲಗೈ ಬ್ಯಾಟರ್ ಶ್ವೇತಾ ಸೆಹ್ರಾವತ್ ಮತ್ತು ಲೆಗ್ ಸ್ಪಿನ್ನರ್ ಪಾರ್ಶವಿ ಚೋಪ್ರಾ ಟೀಂ ಇಂಡಿಯಾದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ನಾಯಕಿ ಶಫಾಲಿ ಕೂಡ ಪಂದ್ಯಾವಳಿಯ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

More Stories

Trending News