ಮೋದಿ ಕ್ರಿಕೆಟ್ ರಾಜತಾಂತ್ರಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

ಇತ್ತೀಚಿಗೆ ಮಾಲ್ಡೀವ್ಸ್ ಗೆ ರಾಜತಾಂತ್ರಿಕ ಭೇಟಿ ನೀಡಿದ ಸಂದರ್ಭದಲ್ಲಿ ಕ್ರಿಕೆಟ್ ಪ್ರಚಾರಕ್ಕೆ ಉತ್ತೇಜನ ನೀಡಿರುವುದಕ್ಕೆ ಸಚಿನ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. 

Last Updated : Jun 12, 2019, 02:28 PM IST
ಮೋದಿ ಕ್ರಿಕೆಟ್ ರಾಜತಾಂತ್ರಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್  title=
file photo

ನವದೆಹಲಿ: ಇತ್ತೀಚಿಗೆ ಮಾಲ್ಡೀವ್ಸ್ ಗೆ ರಾಜತಾಂತ್ರಿಕ ಭೇಟಿ ನೀಡಿದ ಸಂದರ್ಭದಲ್ಲಿ ಕ್ರಿಕೆಟ್ ಪ್ರಚಾರಕ್ಕೆ ಉತ್ತೇಜನ ನೀಡಿರುವುದಕ್ಕೆ ಸಚಿನ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. 

ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮಾಲ್ಡಿವ್ಸ್ ಅಧ್ಯಕ್ಷ ಇಬ್ರಾಹಿಮ್ ಮೊಹಮ್ಮದ್ ಸೋಲಿಹಾ ಅವರಿಗೆ ಭಾರತೀಯ ಕ್ರಿಕೆಟ್ ಆಟಗಾರರ ಸಹಿಯನ್ನೋಳಗೊಂಡ ಬ್ಯಾಟ್ ನ್ನು ಉಡುಗೊರೆಯಾಗಿ ನೀಡಿ ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ " ಕ್ರಿಕೆಟ್ ಉತ್ತೇಜಿಸುವುದಕ್ಕೆ ಧನ್ಯವಾದಗಳು ನರೇಂದ್ರ ಮೋದಿಜಿ. ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಕ್ರಿಕೆಟ್ ರಾಜತಾಂತ್ರಿಕಯನ್ನು ಪ್ರಚಾರ ಮಾಡುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಮಾಲ್ಡಿವ್ಸ್ ದೇಶವನ್ನು ಸದ್ಯದಲ್ಲಿಯೇ ಕ್ರಿಕೆಟ್ ಮ್ಯಾಪ್ ನಲ್ಲಿಯೂ ನೋಡುತ್ತೇವೆ "ಎಂದು ಟ್ವೀಟ್ ಮಾಡಿದ್ದಾರೆ.  

ಇದೇ ವೇಳೆ ಮಾಲ್ಡಿವ್ಸ್ ಯುವ ಹಾಗೂ ಕ್ರೀಡಾ ಸಚಿವಾಲಯ ಭಾರತ ಜೊತೆಗೆ ನಡೆದ ಮಾತುಕತೆ ಬಗ್ಗೆ ಮಾತನಾಡುತ್ತಾ ಮಾಲ್ಡಿವ್ಸ್ ನಲ್ಲಿ ಕ್ರಿಕೆಟ್ ಬೆಳವಣಿಗೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಹಾಗೂ ತಾಂತ್ರಿಕ ಸಹಕಾರದ  ಕುರಿತಾಗಿ ಪ್ರಸ್ತಾಪಿಸಿದ್ದಾರೆ. ಈ ಹಿಂದೆ 2014 ರಲ್ಲಿ  ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಟೋನಿ ಅಬ್ಬೋಟ್ ಮುಂಬೈಗೆ ಭೇಟಿ ನೀಡಿದಾಗ ಅವರ ಜೊತೆಗೂಡಿ ಸಚಿನ್ ತೆಂಡೂಲ್ಕರ್ ಅವರು ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿದ್ದರು. 
 

Trending News