Team Indiaದ ನಂಬರ್ 3 ಸ್ಥಾನಕ್ಕೆ ಸಿಕ್ಕಾಯ್ತು ಧೋನಿಯಂತೆ ಬ್ಯಾಟಿಂಗ್ ಮಾಡೋ ಆಟಗಾರ: ಕೊಹ್ಲಿ ಬದಲಿಗೆ ಸ್ಥಾನ ಪಡೆದ ಕಿಲಾಡಿ!

Team India Cricketer: ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಅವರ ನಂಬರ್-3 ಬ್ಯಾಟಿಂಗ್ ಸ್ಥಾನವನ್ನು ಈ ಆಟಗಾರ ಕಸಿದುಕೊಳ್ಳಬಹುದು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಜುಲೈ 12 ರಿಂದ ಪ್ರಾರಂಭವಾಗಲಿದೆ.

Written by - Bhavishya Shetty | Last Updated : Jun 20, 2023, 01:02 PM IST
    • ವಿರಾಟ್ ಕೊಹ್ಲಿ ಅವರ ನಂಬರ್-3 ಬ್ಯಾಟಿಂಗ್ ಸ್ಥಾನವನ್ನು ಈ ಆಟಗಾರ ಕಸಿದುಕೊಳ್ಳಬಹುದು
    • T20 ಅಂತರಾಷ್ಟ್ರೀಯ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ನಾಯಕರಾಗಿರುತ್ತಾರೆ.
    • ನಾಯಕತ್ವದಲ್ಲಿ ಅತ್ಯಂತ ಅಪಾಯಕಾರಿ T20 ಬ್ಯಾಟ್ಸ್‌ಮನ್‌ ನ ಚೊಚ್ಚಲ ಪಂದ್ಯ ಆಡಲು ಅವಕಾಶ ಮಾಡಿಕೊಡಬಹುದು
Team Indiaದ ನಂಬರ್ 3 ಸ್ಥಾನಕ್ಕೆ ಸಿಕ್ಕಾಯ್ತು ಧೋನಿಯಂತೆ ಬ್ಯಾಟಿಂಗ್ ಮಾಡೋ ಆಟಗಾರ: ಕೊಹ್ಲಿ ಬದಲಿಗೆ ಸ್ಥಾನ ಪಡೆದ ಕಿಲಾಡಿ! title=
Sai Sudarshan

Team India Cricketer: ಟೀಂ ಇಂಡಿಯಾ ನಂಬರ್-3 ಬ್ಯಾಟಿಂಗ್ ಸ್ಥಾನಕ್ಕಾಗಿ ಸ್ಫೋಟಕ ಸಿಕ್ಸರ್ ಹೊಡೆಯುವ ಒಬ್ಬ ಆಟಗಾರ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈ ಬ್ಯಾಟ್ಸ್ ಮನ್ ಬಿರುಸಿನ ಬ್ಯಾಟಿಂಗ್ ನಿಂದ ವಿರಾಟ್ ಕೊಹ್ಲಿಗೆ ಕಷ್ಟ ತಂದಿದ್ದಾರೆ. ಶೀಘ್ರದಲ್ಲೇ ಈ ಬ್ಯಾಟ್ಸ್‌ಮನ್ ಟಿ20 ಮಾದರಿಯಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಪ್ರಕರಣ: ಧಾರವಾಡ ಪ್ರವೇಶಕ್ಕೆ ವಿನಯ ಕುಲಕರ್ಣಿಗಿಲ್ಲ ಅನುಮತಿ

ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಅವರ ನಂಬರ್-3 ಬ್ಯಾಟಿಂಗ್ ಸ್ಥಾನವನ್ನು ಈ ಆಟಗಾರ ಕಸಿದುಕೊಳ್ಳಬಹುದು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಜುಲೈ 12 ರಿಂದ ಪ್ರಾರಂಭವಾಗಲಿದೆ. ಜುಲೈ 12 ರಿಂದ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಟೆಸ್ಟ್, 3 ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಗಸ್ಟ್ 3 ರಂದು ತರೌಬಾ (ಟ್ರಿನಿಡಾಡ್) ನಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಈ 5 ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ನಾಯಕರಾಗಿರುತ್ತಾರೆ, ಅವರು ತಮ್ಮ ನಾಯಕತ್ವದಲ್ಲಿ ಅತ್ಯಂತ ಅಪಾಯಕಾರಿ T20 ಬ್ಯಾಟ್ಸ್‌ಮನ್‌ ನ ಚೊಚ್ಚಲ ಪಂದ್ಯ ಆಡಲು ಅವಕಾಶ ಮಾಡಿಕೊಡಬಹುದು. ವೆಸ್ಟ್ ಇಂಡೀಸ್ ವಿರುದ್ಧದ ಈ T20 ಸರಣಿಯಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಅವರು ತಮಿಳುನಾಡಿನ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್‌ ಗೆ ಭಾರತದ T20 ಸ್ವರೂಪದಲ್ಲಿ ಪಾದಾರ್ಪಣೆ ಮಾಡುವ ಅವಕಾಶವನ್ನು ನೀಡಬಹುದು. ಐಪಿಎಲ್ 2023 ರ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರು ಸಾಯಿ ಸುದರ್ಶನ್ ಶೀಘ್ರದಲ್ಲೇ ಭಾರತಕ್ಕೆ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಬಹುದು ಎಂದು ಸೂಚಿಸಿದ್ದರು.

ಸಾಯಿ ಸುದರ್ಶನ್ ಐಪಿಎಲ್ 2023 ಸೀಸನ್‌ ನಲ್ಲಿಯೇ ಸ್ಫೋಟಕ ಮತ್ತು ಬಿರುಗಾಳಿಯ ಬ್ಯಾಟ್ಸ್‌ಮನ್ ಎಂದು ಸಾಬೀರುಪಡಿಸಿದ್ದಾರೆ. 21ರ ಹರೆಯದ ಸಾಯಿ ಸುದರ್ಶನ್ ಅವರು ಗುಜರಾತ್ ಟೈಟಾನ್ಸ್ ಪರ ಐಪಿಎಲ್ 2023 ರ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 47 ಎಸೆತಗಳಲ್ಲಿ 96 ರನ್ ಗಳಿಸಿ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ ಗಳು ಒಳಗೊಂಡಿತ್ತು.

ಸಾಯಿ ಸುದರ್ಶನ್ ಅವರ ಇನ್ನಿಂಗ್ಸ್ ಆಧಾರದ ಮೇಲೆ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 215 ರನ್‌ ಗಳ ಗುರಿಯನ್ನು ನೀಡಿತ್ತು. ಮಳೆ ಅಡ್ಡಿಪಡಿಸಿದ ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ ಗಳಿಂದ ಗೆದ್ದು ಐದನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ಸಾಯಿ ಸುದರ್ಶನ್ ಐಪಿಎಲ್ 2023 ರ 8 ಪಂದ್ಯಗಳಲ್ಲಿ 362 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾದಲ್ಲಿ ಆಯ್ಕೆಯಾಗುವ ಅರ್ಹತೆಯನ್ನು ಪಡೆದಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಪಂದ್ಯಗಳು (ಭಾರತೀಯ ಕಾಲಮಾನ):

1ನೇ ಟೆಸ್ಟ್, ಜುಲೈ 12-16, ಡೊಮಿನಿಕಾ, ರಾತ್ರಿ 7.30

2ನೇ ಟೆಸ್ಟ್, ಜುಲೈ 20-24, ರಾತ್ರಿ 7.30, ಟ್ರಿನಿಡಾಡ್

 

ಭಾರತ vs ವೆಸ್ಟ್ ಇಂಡೀಸ್ ODI ಸರಣಿ

1ನೇ ODI, ಜುಲೈ 27, ರಾತ್ರಿ 7.00, ಬಾರ್ಬಡೋಸ್

2ನೇ ODI, ಜುಲೈ 29, ರಾತ್ರಿ 7.00, ಬಾರ್ಬಡೋಸ್

3ನೇ ODI, ಆಗಸ್ಟ್ 1, ರಾತ್ರಿ 7.00, ಟ್ರಿನಿಡಾಡ್

 

ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ

1ನೇ ಟಿ20 ಪಂದ್ಯ, ಆಗಸ್ಟ್ 3, ರಾತ್ರಿ 8.00, ಟ್ರಿನಿಡಾಡ್

2ನೇ ಟಿ20 ಪಂದ್ಯ, ಆಗಸ್ಟ್ 6, ರಾತ್ರಿ 8.00, ಗಯಾನಾ

3ನೇ ಟಿ20 ಪಂದ್ಯ, ಆಗಸ್ಟ್ 8, ರಾತ್ರಿ 8.00, ಗಯಾನಾ

4ನೇ ಟಿ20 ಪಂದ್ಯ, ಆಗಸ್ಟ್ 12, ರಾತ್ರಿ 8.00, ಫ್ಲೋರಿಡಾ

5ನೇ ಟಿ20 ಪಂದ್ಯ, ಆಗಸ್ಟ್ 13, ರಾತ್ರಿ 8.00, ಫ್ಲೋರಿಡಾ

ಇದನ್ನೂ ಓದಿ: ನಮ್ಮ ದೇಶಕ್ಕೆ ಉತ್ತರದಾಯಿತ್ವ ಇರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಗತ್ಯವಿದೆ-ಸಿಎಂ ಸಿದ್ದರಾಮಯ್ಯ 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News