ನವ ದೆಹಲಿ : ಓಡಿಶಾದ ಭುವನೇಶ್ವರದಲ್ಲಿ ಡಿ.1 ರಿಂದ 10ರ ವರೆಗೆ ನಡೆಯಲಿರುವ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಿಂದ ಮಾಜಿ ನಾಯಕ ಮತ್ತು 2017 ರ ಖೇಲ್ ರತ್ನ ಪ್ರಶಸ್ತಿ ವಿಜೇತ ಸರ್ದಾರ್ ಸಿಂಗ್ ಅವರನ್ನು 18 ಸದಸ್ಯರ ತಂಡದಿಂದ ಹಾಕಿ ಇಂಡಿಯಾ (ಎಚ್ಐ) ಆಯ್ಕೆ ಸಮಿತಿಯು ಕೈಬಿಟ್ಟಿದೆ.
ಢಾಕಾದಲ್ಲಿ ಕಳೆದ ತಿಂಗಳು ನಡೆದ ಪಂದ್ಯದಲ್ಲಿ ಏಷ್ಯಾ ಕಪ್ ಗೆದ್ದ ತಂಡದಲ್ಲಿದ್ದ ಸರ್ದಾರ್ ಅವರಿಗೆ ಕಳೆದ ವರ್ಷ ತಮ್ಮ ಸಾಮಾನ್ಯ ಆಟಗಾರನ ಪಾತ್ರವನ್ನು ಮನ್ಪ್ರೀತ್ ಸಿಂಗ್ ಅವರಿಗೆ ಬಿಟ್ಟುಬಿಡಲು ಮತ್ತು ಮನ್ಪ್ರೀತ್ ಅವರಿಗೆ ಉಪನಾಯಕನಾಗಿ ಮಿಡ್ ಫೀಲ್ಡರ್ ಚಿಂಗ್ಲೆನ್ಸನಾ ಸಿಂಗ್ ಅವರು ತಂಡವನ್ನು ಮುನ್ನಡೆಸುವಂತೆ ಹೇಳಲಾಗಿತ್ತು.
ಅದರಂತೆ ಈಗ ಮನ್ಪ್ರೀತ್ ಅವರು ತಂಡದ ನಾಯಕನಾಗಿ ಮುಂದುವರಿಯಲಿದ್ದು, ಚಿಂಗ್ಲೆನ್ಸನಾ ಸಿಂಗ್ ಉಪನಾಯಕನಾಗಿ ಆಡಲಿದ್ದಾರೆ. ವಿಶ್ವ ಹಾಕಿ ಲೀಗ್ ಟೂರ್ನಮೆಂಟ್ ನ 'ಬಿ' ಗುಂಪಿನಲ್ಲಿ ಭಾರತವು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಜರ್ಮನಿ ತಂಡಗಳ ಜೊತೆ ಸೆಣಸಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ದಿನದಂದು ಆತಿಥೇಯರು ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.
ಭಾರತ ತಂಡದ ವಿವರ :
ಗೋಲ್ ಕೀಪರ್ಸ್- ಆಕಾಶ್ ಅನಿಲ್ ಚಿಕ್ಟೆ, ಸೂರಜ್ ಕರ್ಕೆರಾ
ಡಿಫೆಂಡರ್ಸ್ - ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟಿರ್ಕೆ, ವರುಣ್ ಕುಮಾರ್, ರೂಪಿಂದರ್ಪಾಲ್ ಸಿಂಗ್, ಬೈರೇಂದ್ರ ಲಕ್ರಾ
ಮಿಡ್ಫೀಲ್ಡರ್ಸ್ - ಮನ್ಪ್ರೀತ್ ಸಿಂಗ್ (ಕ್ಯಾಪ್ಟನ್), ಚಿಂಗ್ಲೆನ್ಸನಾ ಸಿಂಗ್ (ವೈಸ್ ಕ್ಯಾಪ್ಟನ್), ಎಸ್.ಕೆ.ಉತ್ತಪ್ಪ, ಸುಮಿತ್, ಕೊಥಾಜಿತ್ ಸಿಂಗ್ಫಾ
ಫಾರ್ವರ್ಡ್ಸ್- ಎಸ್.ವಿ. ಸುನಿಲ್, ಆಕಾಶ್ದೀಪ್ ಸಿಂಗ್, ಮಂದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರುಜಂತ್ ಸಿಂಗ್.