Lucknow pitch curator sacked: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆದರೆ ತಂಡದ ಆಟಗಾರು ಮತ್ತು ಮಾಜಿ ಹಿರಿಯ ಕ್ರಿಕೆಟಿಗರು ಕ್ರೀಡಾಂಗಣದ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದು ಕೆಟ್ಟ ಪಿಚ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪಂದ್ಯದ ನಂತರದ ಗದ್ದಲದ ಹಿನ್ನೆಲೆಯಲ್ಲಿ ಪಿಚ್ ಸಿದ್ಧಪಡಿಸಿದ ಕ್ಯುರೇಟರ್ ಅನ್ನು ಸ್ಥಾನದಿಂದ ತೆಗೆದುಹಾಕಲಾಗಿದೆ. ನಿಜ ಹೇಳುವುದಾದರೆ, ಪಿಚ್ ನಿರೀಕ್ಷೆಯಂತೆ ಇರಲಿಲ್ಲ ಮತ್ತು ಅದರ ಮೇಲೆ ಬ್ಯಾಟಿಂಗ್ ಮಾಡುವಾಗ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರ...!
ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (UPCA) ಮೂಲಗಳು ಸುದ್ದಿ ಸಂಸ್ಥೆ PTI ಗೆ ಈ ಬಗ್ಗೆ ಮಾಹಿತಿ ನೀಡಿದ್ದು, "ಕ್ಯುರೇಟರ್ ಅನ್ನು ಅವರ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರ ಸ್ಥಾನದಲ್ಲಿ ಸಂಜೀವ್ ಕುಮಾರ್ ಅಗರ್ವಾಲ್ ಅವರನ್ನು ಕ್ಯುರೇಟರ್ ಮಾಡಲಾಗಿದೆ, ಅವರು ತುಂಬಾ ಅನುಭವಿಯಾಗಿದ್ದಾರೆ. ಒಂದು ತಿಂಗಳಲ್ಲಿ ಪಿಚ್ ಸುಧಾರಿಸಲಿದೆ” ಎಂದು ಹೇಳಿದೆ.
ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಅಸಮಾಧಾನ ವ್ಯಕ್ತಪಡಿಸಿ, “ಈ ಪಿಚ್ ಅಚ್ಚರಿ ಮೂಡಿಸಿದೆ” ಎಂದಿದ್ದಾರೆ. ಈ ವಿಕೆಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 99 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ ಕೂಡ ಈ ಸಣ್ಣ ಸ್ಕೋರ್ ಸಾಧಿಸಲು ಶ್ರಮಿಸಬೇಕಾಯಿತು ಮತ್ತು ಕೊನೆಯ ಓವರ್‌ನಲ್ಲಿ ಗೆಲುವುದು ಸಾಧಿಸಿತು.
ಯುಪಿಸಿಎ ಪ್ರಕಾರ, 'ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯಕ್ಕೂ ಮುನ್ನ ಈ ಪಿಚ್‌ನಲ್ಲಿ ಸಾಕಷ್ಟು ದೇಶೀಯ ಕ್ರಿಕೆಟ್ ಪಂದ್ಯಗಳು ನಡೆದಿದ್ದವು. ಈ ವಿಕೆಟ್ ಅನ್ನು ಅತಿಯಾಗಿ ಬಳಸಲಾಗಿದ್ದು, ಕೆಟ್ಟ ಹವಾಮಾನದ ಕಾರಣ, ಹೊಸ ಪಿಚ್ ಅನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಪಿಚ್ ಸಿದ್ಧಪಡಿಸಿದ ಕ್ಯುರೇಟರ್ ಒಂದು ಅಥವಾ ಎರಡು ಪಿಚ್ ಗಳನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬಿಡಬೇಕಿತ್ತು” ಎಂದು ಹೇಳಿದೆ.
ಇದನ್ನೂ ಓದಿ: ಪಂದ್ಯದಲ್ಲಾದ ತಪ್ಪಿಗೆ ಈ ಆಟಗಾರನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ Suryakumar Yadav!
ಹಾರ್ದಿಕ್ ಪಾಂಡ್ಯ ಅಲ್ಲದೆ, ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕೂಡ ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇದೀಗ ಈ ಪಿಚ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಅಗರ್ವಾಲ್ ಅವರಿಗೆ ವಹಿಸಲಾಗಿದೆ.ಅವರು ಅನುಭವಿ ಬಿಸಿಸಿಐ ಕ್ಯುರೇಟರ್ ತಪಸ್ ಚಟರ್ಜಿ ಅವರೊಂದಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಿದ್ಧಪಡಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ