Shubman Gill Social Media Post : ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ಗೆ 2023 ಅದ್ಭುತವಾಗಿತ್ತು. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದ ಆಟಗಾರ ಎನಿಸಿಕೊಂಡಿದ್ದರು ಗಿಲ್. ಇನ್ನು 2023 ರಲ್ಲಿ, ODI ಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿಯೂ ಹೊರ ಹೊಮ್ಮಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ, ಶುಭ್‌ಮಾನ್ ಗಿಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಡಿಸೆಂಬರ್ 31, 2022 ರಂದು ಅವರು ಸಿದ್ಧಪಡಿಸಿದ ವಿಶ್ ಲಿಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಹಳೆಯದ್ದನ್ನು ಮೆಲಕು ಹಾಕಿದ ಗಿಲ್ :
ತಮ್ಮ ಪೋಸ್ಟ್‌ನಲ್ಲಿ, ಗಿಲ್ ಏಕದಿನ ವಿಶ್ವಕಪ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿನ ಹೀನಾಯ ಸೋಲನ್ನು ನೆನಪಿಸಿಕೊಂಡಿದ್ದಾರೆ. ಯುವ ಓಪನರ್ ಡೆಂಗ್ಯೂ ಕಾರಣದಿಂದಾಗಿ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದು, ನಂತರ, ಗಿಲ್ ಫಾರ್ಮ್ ಗೆ ಬರಲು ಸಾಕಷ್ಟು ಹೆಣಗಾಡಬೇಕಾಯಿತು.2023 ರಲ್ಲಿ ಗಿಲ್ ಅವರ ಟೆಸ್ಟ್ ಅಂಕಿಅಂಶಗಳು ಉತ್ತಮವಾಗಿರಲಿಲ್ಲ.
ಇದನ್ನೂ ಓದಿ : David Warner retires: ಹೊಸ ವರ್ಷದಂದೇ ನಿವೃತ್ತಿ ಘೋಷಿಸಿದ ಆಸಿಸ್ ಸ್ಟಾರ್ ಪ್ಲೇಯರ್
ಈ ಲಿಸ್ಟ್ ಶೇರ್ ಮಾಡಿದ ಗಿಲ್ :
ಗಿಲ್ ಅವರ 2023 ರ ವಿಶ್ ಲಿಸ್ಟ್ ಬಹಳ ಆಸಕ್ತಿದಾಯಕವಾಗಿದೆ. ಈ ಲಿಸ್ಟ್ ಅನ್ನು ಗಿಲ್ ತನ್ನ ಕೈಯಿಂದಲೇ ಬರೆದಿದ್ದರು. ಇದರ ಪ್ರಕಾರ, ಗಿಲ್ 2023 ರಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಲು ಬಯಸಿದ್ದರು. ಆರೆಂಜ್ ಕ್ಯಾಪ್ ಗೆಲ್ಲುವುದು ಮತ್ತು ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವುದು ಅವರ ಕನಸಾಗಿತ್ತು. ಇದರೊಂದಿಗೆ ತನ್ನ ಕುಟುಂಬವನ್ನು ಸಂತೋಷಪಡಿಸುವುದು ಕೂಡಾ ಅವರ ಆದ್ಯತೆಗಳಲ್ಲಿ ಸೇರಿತ್ತು. ಆದರೆ ಅವರು ಶೇರ್ ಮಾಡಿರುವ ಪಟ್ಟಿಯಲ್ಲಿ ಎರಡು ಗುರಿಗಳನ್ನು ಸಾಧಿಸುವುದು ಗಿಲ್ ಗೆ ಸಾಧ್ಯವಾಗಿರಲಿಲ್ಲ. ಗಿಲ್ 7 ಶತಕಗಳನ್ನು ಬಾರಿಸುವ ಮೂಲಕ ಈ ವರ್ಷವನ್ನು ಮುಗಿಸಿದ್ದಾರೆ. ಇದು ಕೊಹ್ಲಿಯ ಶತಕಕ್ಕಿಂತ ಕಡಿಮೆಯಾಗಿದೆ. ಅಲ್ಲದೆ, ವಿಶ್ವಕಪ್ ಗೆಲ್ಲುವ ಕನಸು ಕೂಡಾ ನನಸಾಗಲಿಲ್ಲ.
ಗಿಲ್ ಹೇಳಿದ್ದೇನು ? :
'2023 ಅನೇಕ ಅನುಭವಗಳನ್ನು ನೀಡಿದೆ. ಉತ್ತಮ ಮೋಜಿನ ಕ್ಷಣಗಳನ್ನು ಜೀವನದಲ್ಲಿ ನೀಡಿರುವುದಲ್ಲದೆ, ಅನೇಕ ಜೀವನ ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ. ಅಂದುಕೊಂಡಂತೆ ಈ ವರ್ಷ ಮುಗಿಯಲಿಲ್ಲ, ಆದರೆ ನಾವು ನಮ್ಮ ಗುರಿಯ ಹತ್ತಿರ ಬಂದಿದ್ದೇವೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎದ್ನು ಬರೆದುಕೊಂಡಿದ್ದಾರೆ. ಮುಂಬರುವ ವರ್ಷವು ತನ್ನದೇ ಆದ ಸವಾಲುಗಳನ್ನು ಮತ್ತು ಅವಕಾಶಗಳನ್ನು ನೀಡುತ್ತದೆ. 2024 ರಲ್ಲಿ ನಾವು ನಮ್ಮ ಗುರಿಯನ್ನು ಸಾಧಿಸುವುದು ಸಾಧ್ಯವಾಗಬಹುದು ಎಂದು ಆಶಾಭಾವವನ್ನು ವ್ಯಕ್ತಪಡಿ ಸಿದ್ದಾರೆ.
ಇದನ್ನೂ ಓದಿ : 2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ