Smriti Mandhana in RCB Jersey: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಋತು ಪ್ರಾರಂಭಕ್ಕೂ ಮುನ್ನ ಮಹಿಳಾ ತಂಡಕ್ಕಾಗಿ ತಮ್ಮ ಜೆರ್ಸಿಯನ್ನು ಅನಾವರಣಗೊಳಿಸಿದೆ. ಫ್ರಾಂಚೈಸ್ ಪುರುಷರ ಕಿಟ್’ನಂತೆಯೇ ಕೆಂಪು ಮತ್ತು ಕಪ್ಪು ಬಣ್ಣದ ಜೆರ್ಸಿಯನ್ನು ನೀಡಿದೆ. ಇನ್ನು ಟೀಂ ಇಂಡಿಯಾ ತಾರೆಗಳಾದ ಸ್ಮೃತಿ ಮಂಧಾನ, ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ ಠಾಕೂರ್ ಈ ಹೊಸ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Video : ಅಮೇಜಿಂಗ್, ಇಂಪಾಸಿಬಲ್, ಅನ್ ಬಿಲೀವಬಲ್.. ಈ ಆಟಗಾರನನ್ನು ಔಟ್ ಮಾಡಿದ ರೀತಿ!
“ಮಹಿಳಾ ಪ್ರೀಮಿಯರ್ ಲೀಗ್ 2023ರಕ್ಕಾಗಿ ನಮ್ಮ ಬೋಲ್ಡ್ ಮತ್ತು ಸ್ಟೈಲಿಶ್ ಕಿಟ್ ಅನ್ನು ಪರಿಚಯಿಸುತ್ತಿದ್ದೇವೆ!.ನಮ್ಮ ಶೀರ್ಷಿಕೆ ಪ್ರಾಯೋಜಕ @KajariaCeramic, ನಮ್ಮ ಪ್ರಮುಖ ಪ್ರಾಯೋಜಕರು Tanishq, Dream11, Vega Beauty, Himalaya Face Care ಮತ್ತು pumacricket" RCB ಟ್ವೀಟ್ ಮಾಡಿದೆ.
ಈ ಮಧ್ಯೆ RCB ಈಗಾಗಲೇ ಮಂಧಾನಾ ಅವರನ್ನು ಮಹಿಳಾ ಫ್ರಾಂಚೈಸಿಯ ನಾಯಕಿ ಎಂದು ಹೆಸರಿಸಿದೆ. ಮಂಧಾನಾ ಅವರು ಶ್ರೇಯಾಂಕದಲ್ಲಿ ಅಂತಾರಾಷ್ಟ್ರೀಯ ಅನುಭವ ಹೊಂದಿರುವ ಸಾಕಷ್ಟು ತಂಡದ ಸಹ ಆಟಗಾರರನ್ನು ತಂಡದಲ್ಲಿ ಹೊಂದಿರುತ್ತಾರೆ. ಈ ತಂಡದಲ್ಲಿರುವ ಅನೇಕ ಆಟಗಾರರು ಈಗಾಗಲೇ ನಾಯಕತ್ವದ ಜವಾಬ್ದಾರಿಯನ್ನು ಹೊಂದಿದ್ದಾರೆ. ಹೀದರ್ ನೈಟ್ ಮತ್ತು ಸೋಫಿ ಡಿವೈನ್ ಪ್ರಸ್ತುತ ನಡೆಯುತ್ತಿರುವ ಮಹಿಳಾ T20 ವಿಶ್ವಕಪ್‌ನಲ್ಲಿ ಕ್ರಮವಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಅನ್ನು ಮುನ್ನಡೆಸುತ್ತಿದ್ದಾರೆ. ಡೇನ್ ವ್ಯಾನ್ ನಿಕೆರ್ಕ್ ಈ ಹಿಂದೆ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದಾರೆ.
ಇನ್ನು ಸ್ಮೃತಿ ಮಂಧಾನಾ ಅವರನ್ನು ಆರ್ ಸಿ ಬಿ ದಾಖಲೆಯ ಮೊತ್ತ 3.4 ಕೋಟಿ ರೂ.ಗೆ ಖರೀದಿಸುತ್ತು.
26 ವರ್ಷದ ಮುಂಬೈಕರ್ ಸ್ಮೃತಿ ಮಂಧಾನಾ ಅವರು 2013 ರಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. 2018 ರಲ್ಲಿ ICC ಮಹಿಳಾ ಕ್ರಿಕೆಟಿಗ ಎಂದು ಬಿರುದನ್ನು ನೀಡಿತು. 2021 ಮತ್ತು 2022 ರಲ್ಲಿ ICC ಮಹಿಳಾ T20I ವರ್ಷದ ಕ್ರಿಕೆಟಿಗರಿಗೆ ಅಗ್ರ ಮೂರರಲ್ಲಿ ನಾಮನಿರ್ದೇಶನಗೊಂಡಿದ್ದರು.
ಇದನ್ನೂ ಓದಿ: IND vs AUS: ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್: ಕಪಿಲ್ ದೇವ್ ‘ಮಹಾ ರೆಕಾರ್ಡ್’ ಉಡೀಸ್
ಇವೆಲ್ಲದರ ಮಧ್ಯೆ ಸ್ಮೃತಿ ಮಂಧಾನಾ ಇಂದು ಆರ್ ಸಿ ಬಿ ಜೆರ್ಸಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಲೈಕ್-ಕಮೆಂಟ್ ಗಳು ಬರುತ್ತಿವೆ. ಫ್ಯಾನ್ಸ್ ಸ್ಮೃತಿ ಮಂಧಾನಾ ಹೊಸ ಲುಕ್’ನ್ನು ಇಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲ, ಕಿಂಗ್ ಆಂಡ್ ಕ್ವೀನ್ ನಮ್ಮೊಂದಿಗಿದ್ದಾರೆ. ಈ ಸಲ ಕಪ್ ನಮ್ದೆ ಅಂತಿದ್ದಾರೆ ಅಭಿಮಾನಿಗಳು,
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.