Sonny Ramadhin No More: ವಿಶ್ವ ದಿಗ್ಗಜ ಕ್ರಿಕೆಟಿಗ Sonny Ramadhin ನಿಧನ

Sonny Ramadhin No More - ಸೋನಿ ರಾಮ್ದಿನ್ 1950 ರಲ್ಲಿ ಇಂಗ್ಲೆಂಡ್ (England) ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ತಂಡದ ಸದಸ್ಯರಾಗಿದ್ದರು. ಸೋನಿ ರಾಮ್ದಿನ್ (Sonny Ramadhin) 1950 ರಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಮಾಡಿದರು. ಸೋನಿ ರಾಮ್ದಿನ್ ವೆಸ್ಟ್ ಇಂಡೀಸ್ (West Indies) ಪರ 43 ಟೆಸ್ಟ್ ಪಂದ್ಯಗಳಲ್ಲಿ 28.98 ಸರಾಸರಿಯಲ್ಲಿ 158 ವಿಕೆಟ್ ಪಡೆದಿದ್ದಾರೆ.  

Written by - Nitin Tabib | Last Updated : Feb 28, 2022, 03:52 PM IST
  • ಈ ದಿಗ್ಗಜ ಕ್ರಿಕೆಟಿಗನ ಆಕಸ್ಮಿಕ ನಿಧನ
  • ಶೋಕ ಸಾಗರದಲ್ಲಿ ಕ್ರಿಕೆಟ್ ಜಗತ್ತು
  • ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್ ಅನ್ನು ಅದರ ತವರು ನೆಲದಲ್ಲಿಯೇ ಬಗ್ಗುಬಡಿದ ಆಟಗಾರ
Sonny Ramadhin No More: ವಿಶ್ವ ದಿಗ್ಗಜ ಕ್ರಿಕೆಟಿಗ Sonny Ramadhin ನಿಧನ title=
Sonny Ramadhin No More (Representational Image)

ನವದೆಹಲಿ: Sonny Ramadhin No More - ಕ್ರಿಕೆಟ್ ಜಗತ್ತು (World Cricket) ತನ್ನ ದಿಗ್ಗಜ ಕ್ರಿಕೆಟಿಗನೊಬ್ಬನನ್ನು ಕಳೆದುಕೊಂಡಿದೆ. ವಾಸ್ತವದಲ್ಲಿ, ವೆಸ್ಟ್ ಇಂಡೀಸ್‌ನ ದಂತಕಥೆ ಸ್ಪಿನ್ನರ್ ಸೋನಿ ರಾಮ್ದಿನ್ ನಿಧನರಾಗಿದ್ದಾರೆ. ಸೋನಿ ರಾಮ್ದಿನ್ ಅವರಿಗೆ 92 ವರ್ಷ ವಯಸ್ಸಾಗಿತ್ತು. ಕ್ರಿಕೆಟ್ ವೆಸ್ಟ್ ಇಂಡೀಸ್ (Cricket West Indies) ಈ ಮಾಹಿತಿಯನ್ನು ನೀಡಿದೆ.

ಈ ದಿಗ್ಗಜ ಕ್ರಿಕೆಟಿಗನ ಹಠಾತ್ ನಿಧನ
ಸೋನಿ ರಾಮ್ದಿನ್ 1950 ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ತಂಡದ ಸದಸ್ಯರಾಗಿದ್ದರು. ಸೋನಿ ರಾಮ್ದಿನ್ 1950 ರಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಸೋನಿ ರಾಮ್ದಿನ್ ವೆಸ್ಟ್ ಇಂಡೀಸ್ ಪರ 43 ಟೆಸ್ಟ್ ಪಂದ್ಯಗಳಲ್ಲಿ 28.98 ಸರಾಸರಿಯಲ್ಲಿ 158 ವಿಕೆಟ್ ಪಡೆದಿದ್ದಾರೆ.

ಶೋಕ ಸಾಗರದಲ್ಲಿ ಕ್ರಿಕೆಟ್ ಜಗತ್ತು (Cricket New In Kannada)
ಈ ಕುರಿತು ಭಾನುವಾರ ಹೇಳಿಕೆ ನೀಡಿರುವ CWI ಅಧ್ಯಕ್ಷ ರಿಕಿ ಸ್ಕೆರಿಟ್, "ಕ್ರಿಕೆಟ್ ವೆಸ್ಟ್ ಇಂಡೀಸ್ ಪರವಾಗಿ, ವೆಸ್ಟ್ ಇಂಡೀಸ್ ಅಗ್ರ ಆಟಗಾರರಲ್ಲಿ ಒಬ್ಬರಾದ ಸೋನಿ ರಾಮ್ದಿನ್ ಅವರ ಕುಟುಂಬ ಮತ್ತು ಸ್ನೇಹಿತರ ಪರ ನಾನು ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ-IND vs SL: ರೋಹಿತ್‌ ಪಡೆಯಲ್ಲಿ ಕೊಹ್ಲಿಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್

ತನ್ನ ತವರು ನೆಲದಲ್ಲಿ ಮೊದಲ ಬಾರಿಗೆ ಸೋತ ಇಂಗ್ಲೆಂಡ್
ರಾಮ್ದೀನ್ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ರಿಕಿ ಸ್ಕೆರಿಟ್, 'ರಾಮ್ದೀನ್  ಅವರು ವಿಶ್ವ ಕ್ರಿಕೆಟ್‌ಗೆ ಕಾಲಿಟ್ಟ ತಕ್ಷಣ ತಮ್ಮ ಪ್ರಭಾವವನ್ನು ಬೀರಿದ್ದರು. 1950 ರ ದಶಕದಲ್ಲಿ ಅವರ ಅದ್ಭುತ ಕೊಡುಗೆಗಳ ಹಲವು ಕಥೆಗಳನ್ನು ಹೇಳಲಾಗುತ್ತದೆ. ಈ ಕಥೆಗಳಲ್ಲಿ ಎಲ್ಫ್ ವೆಲಿಂಗ್ಟನ್ ಜೊತೆ ಸೇರಿ 'ಸ್ಪಿನ್ ಟ್ವಿನ್' ಜೋಡಿ ರಚಿಸಿದ್ದರು ಮತ್ತು ವೆಸ್ಟ್ ಇಂಡೀಸ್, ಇಂಗ್ಲೆಂಡ್ ತಂಡವನ್ನು ಮೊಟ್ಟಮೊದಲ ಬಾರಿಗೆ ತವರು ನೆಲದಲ್ಲಿಯೇ ಸೋಲಿಸಿತ್ತು' ಎಂದಿದ್ದಾರೆ.

ಇದನ್ನೂ ಓದಿ-India vs Sri Lanka, 3rd T20I: ಅಬ್ಬರಿಸಿದ ಶ್ರೇಯಸ್ ಅಯ್ಯರ್, ಭಾರತಕ್ಕೆ ಆರು ವಿಕೆಟ್ ಗಳ ಜಯ

ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದರು
ಇಂಗ್ಲೆಂಡ್‌ನಲ್ಲಿ ವೆಸ್ಟ್ ಇಂಡೀಸ್‌ನ ಮೊದಲ ಟೆಸ್ಟ್ ಜಯದ ಸಂದರ್ಭದಲ್ಲಿ ರಾಮ್‌ದಿನ್ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 152 ರನ್‌ಗಳಿಗೆ 11 ವಿಕೆಟ್‌ಗಳನ್ನು ಪಡೆದಿದ್ದರು. ವೆಸ್ಟ್ ಇಂಡೀಸ್ 1950 ರ ಈ ಸರಣಿಯನ್ನು 3-1 ರಲ್ಲಿ ಗೆದ್ದುಕೊಂಡಿತು.

ಇದನ್ನೂ ಓದಿ-Ishan Kishan:ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲು.. ಏನಾಯ್ತು? ಇಲ್ಲಿದೆ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News