Team India, World Cup 2023: ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪ್ರತಿಷ್ಠಿತ ಕೂಟಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಮಧ್ಯೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ರೇಸ್’ನಲ್ಲಿರುವ 18 ಆಟಗಾರರು ಕಠಿಣ ಫಿಟ್ನೆಸ್ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಗಳಲ್ಲಿ ಪಾಸ್ ಆದರೆ ಮಾತ್ರ ವರ್ಲ್ಡ್ ಕಪ್’ನಲ್ಲಿ ಸ್ಥಾನ ಪಡೆಯಲು ಸಾಧ್ಯ.
ಇದನ್ನೂ ಓದಿ: 1983ರ ವಿಶ್ವಕಪ್ ಜೊತೆ ಕಪಿಲ್ ವಿಶ್ವದಾಖಲೆ ಬರೆಯಲು ಬಳಸಿದ ಬ್ಯಾಟ್ ಯಾವುದು ಗೊತ್ತಾ?
ಈ ಬಗ್ಗೆ ಬಿಸಿಸಿಐ ಮೂಲವು ಮಾಹಿತಿಯನ್ನು ನೀಡಿದೆ. “ಇತ್ತೀಚೆಗೆ ಐರ್ಲೆಂಡ್’ನಲ್ಲಿ ಸರಣಿ ಆಡಿದ ಆಟಗಾರರನ್ನು (ಜಸ್ಪ್ರೀತ್ ಬುಮ್ರಾ, ಪ್ರಮುಖ್ ಕೃಷ್ಣ, ಸಂಜು ಸ್ಯಾಮ್ಸನ್) ಹೊರತುಪಡಿಸಿ ಹೆಚ್ಚಿನ ಆಟಗಾರರು ನಿಯಮಿತವಾಗಿದ್ದಾರೆ. ಅವರಿಗೆ ಫಿಟ್’ನೆಸ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಕಡ್ಡಾಯ ರಕ್ತ ಪರೀಕ್ಷೆ ಜೊತೆಗೆ ಲಿಪಿಡ್ ಪ್ರೊಫೈಲ್, ಬ್ಲಡ್ ಶುಗರ್ ಲೆವೆಲ್, ಯೂರಿಕ್ ಆಸಿಡ್, ಕ್ಯಾಲ್ಸಿಯಂ, ವಿಟಮಿನ್ B12 ಮತ್ತು D, ಕ್ರಿಯೇಟಿನೈನ್, ಟೆಸ್ಟೋಸ್ಟೆರಾನ್ ಅನ್ನು ಪರಿಶೀಲಿಸಲಾಗುತ್ತದೆ” ಎಂದು ಹೇಳಿದೆ.
ಕೆಲವೊಮ್ಮೆ ಡೆಕ್ಸಾ ಪರೀಕ್ಷೆಗಳನ್ನು ಸಹ ಮಾಡಲಾಗುತ್ತದೆ. ಮೂಳೆ ಸಾಂದ್ರತೆಯನ್ನು ಪರೀಕ್ಷಿಸಲು ಇದು ಒಂದು ರೀತಿಯ ಸ್ಕ್ಯಾನ್ ಆಗಿದೆ. “ಇದರಲ್ಲಿ ಹೊಸದೇನೂ ಇಲ್ಲ, ಆಟಗಾರರು ಸರಣಿಯ ಮಧ್ಯದಲ್ಲಿ ವಿರಾಮ ತೆಗೆದುಕೊಂಡಾಗ, ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ದೇಹದ ಅವಶ್ಯಕತೆಗೆ ಅನುಗುಣವಾಗಿ ನಿರ್ದಿಷ್ಟಗೊಳಿಸಿದ ಆಹಾರ ಚಾರ್ಟ್’ಗಳು ಮತ್ತು ಕಸ್ಟಮೈಸ್ ಮಾಡಿದ ತರಬೇತಿ ಮಾಡ್ಯೂಲ್’ಗಳನ್ನು ಸಹ ಅವರಿಗೆ ನೀಡಲಾಗುತ್ತದೆ” ಎಂದು ಎನ್’ಸಿಎ ಮೂಲಗಳು ಹೇಳಿವೆ.
ಇದನ್ನೂ ಓದಿ: ಮುಂದಿನ 48 ಗಂಟೆಯಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆ: ಸಿಡಿಲು-ಬಿರುಗಾಳಿ ಭೀತಿ, ರೆಡ್ ಅಲರ್ಟ್ ಘೋಷಣೆ
ವಿಶ್ರಾಂತಿ ಮತ್ತು ಚೇತರಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಮೂಲ, “ಎಂಟರಿಂದ ಒಂಬತ್ತು ಗಂಟೆಗಳ ನಿದ್ರೆಗಿಂತ ಉತ್ತಮ ಆರೋಗ್ಯ ಮಾರ್ಗವಿಲ್ಲ” ಎಂದು ತಿಳಿಸಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ