ಚಾಂಪಿಯನ್ಸ್ ಟ್ರೋಫಿಗೆ ಪಾಕ್‌ ಪ್ರವಾಸ ಕೈಗೊಳ್ಳುತ್ತಾ ಟೀಂ ಇಂಡಿಯಾ? ಹೊರಬಿತ್ತು ಬಿಗ್‌ ಅಪ್ಡೇಟ್

Champions Trophy 2025: ಇತ್ತೀಚೆಗೆ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ ಎಂಬ ವರದಿಗಳು ಬಂದಿದ್ದವು. ಇದಾದ ಬಳಿಕ ಕಳೆದ ವರ್ಷದ ಏಷ್ಯಾಕಪ್‌ಗೆ ಬಳಸಲಾಗಿದ್ದ ಹೈಬ್ರಿಡ್ ಮಾದರಿಯನ್ನು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ.

Written by - Bhavishya Shetty | Last Updated : Aug 3, 2024, 08:52 PM IST
    • ಐಸಿಸಿ ಇನ್ನೂ ಚಾಂಪಿಯನ್ಸ್ ಟ್ರೋಫಿಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ
    • ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ ಎಂಬ ವರದಿಗಳು ಬಂದಿದ್ದವು.
    • ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಐಸಿಸಿ ಹಣಕಾಸು ಮತ್ತು ವಾಣಿಜ್ಯ ಸಮಿತಿ
ಚಾಂಪಿಯನ್ಸ್ ಟ್ರೋಫಿಗೆ ಪಾಕ್‌ ಪ್ರವಾಸ ಕೈಗೊಳ್ಳುತ್ತಾ ಟೀಂ ಇಂಡಿಯಾ? ಹೊರಬಿತ್ತು ಬಿಗ್‌ ಅಪ್ಡೇಟ್ title=
File Photo

Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಆಯೋಜನೆಯಾಗಲಿದೆ ಎಂಬ ಮಾತುಗಳ ಮಧ್ಯೆ ಆ ವಿಚಾರದ ಬಗ್ಗೆ ಸದ್ಯದ ಮಟ್ಟಿಗೆ ಅನಿಶ್ಚಿತತೆ ಇದೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲು ಸಿದ್ಧವಿಲ್ಲ. ಕೇಂದ್ರ ಸರ್ಕಾರದ ಅನುಮತಿಯ ನಂತರವೇ ಬಿಸಿಸಿಐ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಒಂದು ವೇಳೆ ರೋಹಿತ್ ಪಡೆ ಪಾಕ್ʼಗೆ ಹೋದರೆ ಎಲ್ಲಾ ಪಂದ್ಯಗಳನ್ನು ಲಾಹೋರ್‌ʼನಲ್ಲಿ ಆಡಬೇಕಾಗುತ್ತದೆ. ಪಾಕಿಸ್ತಾನ ಅಥವಾ ಐಸಿಸಿ ಇನ್ನೂ ಚಾಂಪಿಯನ್ಸ್ ಟ್ರೋಫಿಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: ನವಜಾತ ಮಗುವಿಗೆ ಐಶಾರಾಮಿ ಮನೆ ಗಿಫ್ಟ್‌ ನೀಡಿದ ದೀಪಿಕಾ -ರಣವೀರ್‌..! ಬೆಲೆ ಕೇಳಿ ಸುಸ್ತಾದ ಜನ

ಇತ್ತೀಚೆಗೆ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ ಎಂಬ ವರದಿಗಳು ಬಂದಿದ್ದವು. ಇದಾದ ಬಳಿಕ ಕಳೆದ ವರ್ಷದ ಏಷ್ಯಾಕಪ್‌ಗೆ ಬಳಸಲಾಗಿದ್ದ ಹೈಬ್ರಿಡ್ ಮಾದರಿಯನ್ನು ಪಾಕಿಸ್ತಾನಕ್ಕೆ ಸೂಚಿಸಲಾಗಿದೆ. ಈ ಉದ್ದೇಶಿತ ಮಾದರಿಯಲ್ಲಿ, ಕೆಲವು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲಾಗುತ್ತದೆ ಮತ್ತು ಭಾರತದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಐಸಿಸಿ ಅಂದಾಜು US $ 70 ಮಿಲಿಯನ್ ಬಜೆಟ್ ಅನ್ನು ಅನುಮೋದಿಸಿದೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಐಸಿಸಿ ಹಣಕಾಸು ಮತ್ತು ವಾಣಿಜ್ಯ ಸಮಿತಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ಹಣಕಾಸು ಇಲಾಖೆ ಜಂಟಿಯಾಗಿ ಸಿದ್ಧಪಡಿಸಿ ಮಂಡಿಸಿದ ಬಜೆಟ್‌ʼಗೆ ಅನುಮೋದನೆ ನೀಡಿದೆ.

ಭಾರತದ ನಿರ್ಧಾರಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಂತೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಮ್ಮ ಕಚೇರಿ ಮತ್ತು ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ ಏನಾಗುತ್ತದೆ ಎಂಬುದರ ಕುರಿತು ನಖ್ವಿ ಅಥವಾ ಮಂಡಳಿಯ ಯಾವುದೇ ಅಧಿಕಾರಿಯಿಂದ ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ಅಥವಾ ಹೇಳಿಕೆ ಬಂದಿಲ್ಲ.

ಇದನ್ನೂ ಓದಿ:  ವಿಜಯ್ ದೇವರಕೊಂಡ ಮೇಲಿನ ಪ್ರೀತಿ ನಿಜ...! ಕೊನೆಗೂ ಒಪ್ಪಿಕೊಂಡ ನ್ಯಾಷನಲ್‌ ಕ್ರಶ್ ರಶ್ಮಿಕಾ‌ ಮಂದಣ್ಣ..!

ಇನ್ನೊಂದೆಡೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿವೆ. ಸೂಪರ್ ಫೋರ್ ಹಂತದಲ್ಲೂ ಉಭಯ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಗುಂಪು ಸುತ್ತಿನ ಬಳಿಕ ಸೂಪರ್ ಫೋರ್ʼನಲ್ಲಿ ಪೈಪೋಟಿ ಏರ್ಪಡಲಿದೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಅಂತಿಮ ಪಂದ್ಯವೂ ಉಭಯ ತಂಡಗಳ ನಡುವೆ ನಡೆಯಲಿದೆ. ಹೀಗಿದ್ದಾಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮೂರು ಬಾರಿ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News